For Quick Alerts
  ALLOW NOTIFICATIONS  
  For Daily Alerts

  ಕ್ಯಾನ್ಸರ್ ಗೆದ್ದ ನಟಿಗೆ ಕೊರೊನಾ ವೈರಸ್ ಕಾಟ: ಆಹಾರ, ಔಷಧಿ ಸಿಗದೆ ಪರದಾಟ

  |

  ರಾಷ್ಟ್ರವ್ಯಾಪಿ 21 ದಿನಗಳ ಲಾಕ್‌ಡೌನ್ ನಡುವೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ಬಾಲಿವುಡ್‌ನ ಹಿರಿಯ ನಟಿ ನಫಿಜಾ ಅಲಿ ಕೂಡ ಒಬ್ಬರು. ಕ್ಯಾನ್ಸರ್ ವಿರುದ್ಧ ಸ್ಫೂರ್ತಿದಾಯಕ ಹೋರಾಟ ನಡೆಸಿ ಬದುಕುಳಿದಿದ್ದ ನಟಿ ನಫಿಜಾ ಅಲಿ ದಿನ ನಿತ್ಯದ ಬಳಕೆಗೆ ಬೇಕಾದ ಅಗತ್ಯ ವಸ್ತುಗಳಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

  ಗೋವಾದ ಮೊರ್ಜಿಮ್‌ನಲ್ಲಿನ ತಮ್ಮ ಕರಾಳ ಪರಿಸ್ಥಿತಿಯ ಸಂಕಟವನ್ನು ಅವರು ಪತ್ರಿಕೆಯೊಂದರ ಬಳಿ ಹಂಚಿಕೊಂಡಿದ್ದಾರೆ. ಅವರು ಸದ್ಯಕ್ಕೆ ನೆಲೆಸಿರುವ ಮೊರ್ಜಿಮ್ ಪ್ರದೇಶವು ಲಾಕ್‌ಡೌನ್‌ ಆದೇಶದಿಂದಾಗಿ ಭಾರಿ ಪ್ರಮಾಣದಲ್ಲಿ ತೊಂದರೆಗೆ ಸಿಲುಕಿದೆ. ತಮಗೆ ಅತಿ ಅಗತ್ಯವಾದ ಸಾಮಾನ್ಯ ಊಟ ತಿಂಡಿ ಪದಾರ್ಥ ಹಾಗೂ ಔಷಧಗಳೂ ಇಲ್ಲಿ ಸಿಗುತ್ತಿಲ್ಲ ಎಂದು ನಫಿಜಾ ಅಲಿ ಅಳಲು ತೋಡಿಕೊಂಡಿದ್ದಾರೆ.

  'ಮಸೀದಿ ಮುಚ್ಚಲು ಫತ್ವಾ ಹೊರಡಿಸಿ': ಚಿತ್ರ ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ನೆಟ್ಟಿಗರ ಕಿಡಿ'ಮಸೀದಿ ಮುಚ್ಚಲು ಫತ್ವಾ ಹೊರಡಿಸಿ': ಚಿತ್ರ ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ನೆಟ್ಟಿಗರ ಕಿಡಿ

  ತಿನ್ನಲು ಸಿಗುತ್ತಿಲ್ಲ. ಔಷಧವೂ ಇಲ್ಲ

  ತಿನ್ನಲು ಸಿಗುತ್ತಿಲ್ಲ. ಔಷಧವೂ ಇಲ್ಲ

  'ಲೈಫ್ ಇನ್ ಎ ಮೆಟ್ರೊ' ಸಿನಿಮಾ ಖ್ಯಾತಿಯ ನಫಿಜಾ ಅಲಿ, ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯೊಂದಿಗೆ ತಾವು ಅನುಭವಿಸುತ್ತಿರುವ ನೋವನ್ನು ತೋಡಿಕೊಂಡಿದ್ದಾರೆ. ಇಲ್ಲಿ ತರಕಾರಿ, ಹಣ್ಣು, ಔಷಧಿ ಯಾವುದೂ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.

  ವರ್ಕೌಟ್ ವಿಡಿಯೋ ಬೇಡ ಎಂದ ಫರಾಹ್ ಖಾನ್‌ಗೆ ದೀಪಿಕಾ ಪಡುಕೋಣೆ ತಿರುಗೇಟುವರ್ಕೌಟ್ ವಿಡಿಯೋ ಬೇಡ ಎಂದ ಫರಾಹ್ ಖಾನ್‌ಗೆ ದೀಪಿಕಾ ಪಡುಕೋಣೆ ತಿರುಗೇಟು

  ಒಣ ಆಹಾರವೇ ಗತಿ

  ಒಣ ಆಹಾರವೇ ಗತಿ

  'ಇಲ್ಲಿನ ಕಿರಾಣಿ ಅಂಗಡಿಗಳು ಆರು ದಿನಗಳಿಂದ ಬಾಗಿಲು ತೆರೆದಿಲ್ಲ. ನಾನೊಬ್ಬ ಕ್ಯಾನ್ಸರ್ ಸರ್ವೈವರ್. ಆರೋಗ್ಯ ಕಾಪಾಡಿಕೊಳ್ಳಲು ಸರಿಯಾದ ಆಹಾರ ಸೇವನೆ ಮಾಡಬೇಕು. ಆದರೆ ಕಳೆದ ಕೆಲವು ದಿನಗಳಿಂದ ನಾನು ಕೇವಲ ಒಣ ಪಡಿತರಗಳನ್ನು ಸೇವಿಸುತ್ತಿದ್ದೇನೆ' ಎಂದಿದ್ದಾರೆ.

  ತರಕಾರಿ, ಹಣ್ಣುಗಳಿಲ್ಲ

  'ಇಲ್ಲಿ ತರಕಾರಿಗಳಿಲ್ಲ. ಹಣ್ಣುಗಳೂ ಇಲ್ಲ. ನಮಗೆ ಯಾವುದೂ ಸಿಗುತ್ತಿಲ್ಲ. ನಾನು ಮೊರ್ಜಿಮ್‌ನಲ್ಲಿದ್ದು, ಇಲ್ಲಿನ ಜನರ ಸ್ಥಿತಿ ಭೀಕರವಾಗಿದೆ. ಪಂಜಿಮ್‌ನಲ್ಲಿ ಪರಿಸ್ಥಿತಿ ಚೆನ್ನಾಗಿದೆ. ಎಲ್ಲರ ಬದುಕಿನ ಬಗ್ಗೆ ನನ್ನ ಹೃದಯ ಮಿಡಿಯುತ್ತಿದೆ' ಎಂದು ತಿಳಿಸಿದ್ದಾರೆ.

  ಮೂರನೇ ಹಂತದ ಕ್ಯಾನ್ಸರ್

  ಮೂರನೇ ಹಂತದ ಕ್ಯಾನ್ಸರ್

  'ಜುನೂನ್', 'ಬೇವಾಫಾ', 'ಯಮ್ಲಾ ಪಗ್ಲಾ ದೀವಾನಾ' ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ನಫಿಜಾ ಅಲಿ ಅವರಲ್ಲಿ 2018ರಲ್ಲಿ ಮೂರನೇ ಹಂತದ ಕ್ಯಾನ್ಸರ್ ಪತ್ತೆಯಾಗಿತ್ತು. ಮಹಾಮಾರಿಯ ವಿರುದ್ಧ ಹೋರಾಟದಲ್ಲಿ ನಫಿಜಾ ಗೆದ್ದಿದ್ದರು.

  ಕೊರಿಯರ್ ಕೂಡ ಇಲ್ಲ

  ನಫಿಜಾ ಮತ್ತು ಅವರ ಮಗಳ ಕುಟುಂಬದವರು ಹತ್ತು ದಿನಗಳ ಕಾಲ ಗೋವಾದಲ್ಲಿ ಇರಲು ತೆರಳಿತ್ತು. ಆದರೆ ದೇಶವ್ಯಾಪಿ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದಾಗಿ ಅವರು ಅಲ್ಲಿಯೇ ಉಳಿದುಕೊಳ್ಳುವುದು ಅನಿವಾರ್ಯವಾಗಿದೆ. 'ನನ್ನ ಬಳಿ ಇದ್ದ ಎಲ್ಲ ಔಷಧಗಳೂ ಖಾಲಿಯಾಗುತ್ತಿವೆ. ಇಲ್ಲಿ ಕೊರಿಯರ್ ಸರ್ವಿಸ್ ಕೂಡ ಇಲ್ಲ. ಹೇಗೆ ಇರುವುದೋ ಗೊತ್ತಾಗುತ್ತಿಲ್ಲ' ಎಂದು ತಿಳಿಸಿದ್ದಾರೆ.

  ನಫಿಜಾ ಸೋದರ ಸಂಬಂಧಿಗೆ ಕೊರೊನಾ

  ನಫಿಜಾ ಮತ್ತು ಅವರ ಕುಟುಂಬ ಗೋವಾದಲ್ಲಿ ಸುರಕ್ಷಿತವಾಗಿದೆ. ಆದರೆ ನಫಿಜಾ ಅವರ ಸೋದರ ಸಂಬಂಧಿ ದಿಯಾ ನಾಯ್ಡು ಅವರಲ್ಲಿ ಕೊರೊನಾ ವೈರಸ್ ಸೊಂಕು ಇರುವುದು ಪತ್ತೆಯಾಗಿದೆ. ವೃತ್ತಿಯಿಂದ ನೃತ್ಯಪಟು ಆಗಿರುವ ದಿಯಾ, ಬೆಂಗಳೂರಿನಲ್ಲಿದ್ದಾರೆ. ದಿಯಾ ಅವರು ಸ್ವಿಟ್ಜರ್ಲೆಂಡ್‌ನಿಂದ ಬೆಂಗಳೂರಿಗೆ ಮರಳಿದ್ದರು. ತಾವೇ ಸ್ವತಃ ತಪಾಸಣೆಗೆ ಒಳಗಾಗಿದ್ದರು. ಬಳಿಕ ಚಿಕಿತ್ಸೆ ಪಡೆದು ಈಗ ಗುಣಮುಖರೂ ಆಗಿದ್ದಾರೆ ಎಂದು ನಫಿಜಾ ತಿಳಿಸಿದ್ದಾರೆ.

  English summary
  Bollywood veteran actress Nafiza Ali with her daughter's family has stuck in Goa without ration and medicines amid lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X