»   » ನಟಿ ನಗ್ಮಾ ಚುಂಬನ ಪ್ರಕರಣಕ್ಕೆ ಹೊಸ ತಿರುವು

ನಟಿ ನಗ್ಮಾ ಚುಂಬನ ಪ್ರಕರಣಕ್ಕೆ ಹೊಸ ತಿರುವು

By: ಉದಯರವಿ
Subscribe to Filmibeat Kannada

ನೇಪಥ್ಯಕ್ಕೆ ಸರಿದಿದ್ದ 'ಕುರುಬನ ರಾಣಿ' ಖ್ಯಾತಿಯ ತಾರೆ ನಗ್ಮಾ ರಾಜಕೀಯಕ್ಕೆ ಇಳಿದು ಹೊಸ ಇನ್ನಿಂಗ್ಸ್ ಆರಂಭಿಸಿರುವುದು ಗೊತ್ತೇ ಇದೆ. ಮೀರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಗ್ಮಾಗೆ ಇತ್ತೀಚೆಗೆ ಪ್ರಚಾರದ ವೇಳೆ ಮುಜುಗರದ ಘಟನೆಯೊಂದು ನಡೆಯಿತು.

ಮೀರತ್ ಸ್ಥಳೀಯ ಶಾಸಕ ಗಜರಾಜ್ ಶರ್ಮಾ ಪ್ರಚಾರದ ವೇಳೆ ನಗ್ಮಾ ಹೆಗಲ ಮೇಲೆ ಕೈಹಾಕಿ ಅಪ್ಪಿ ಚುಂಬಿಸಲು ಪ್ಯಯತ್ನಿಸಿದ್ದ ಘಟನೆ ಭಾರಿ ಚರ್ಚೆಗೆ ಕಾರಣವಾಗಿತ್ತು. ನಗ್ಮಾ ಮತ್ತು ಗಜರಾಜ್ ನಡುವಿನ ವಿಡಿಯೋ ಕ್ಲಿಪ್ಪಿಂಗ್ಸ್ ಮಾಧ್ಯಮಗಳಲ್ಲಿ 24/7 ಬಿತ್ತರವಾಗುವ ಮಟ್ಟಕ್ಕೆ ಹೋಗಿತ್ತು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Actress Nagma Denies Being Kissed

ಇದಾದ ಸ್ವಲ್ಪ ದಿನಕ್ಕೆ ನಗ್ಮಾ ಮೇಲೆ ಜನಸಮೂಹದಲ್ಲಿ ಕಿಡಿಗೇಡಿಯೊಬ್ಬ ಅದೆಲ್ಲಿಗೋ ಕೈ ಹಾಕಿ ಕಪಾಳಮೋಕ್ಷ ಮಾಡಿಸಿಕೊಂಡಿದ್ದ. ಇದೀಗ ನಗ್ಮಾ ಈ ಎರಡು ಘಟನೆಗಳನ್ನೂ ಅಲ್ಲಗಳೆದಿದ್ದಾರೆ. ಇವೆರಡು ಘಟನೆಗಳು ನಡದೇ ಇಲ್ಲ ಎಂದಿದ್ದಾರೆ. ಅಲ್ಲಿಗೆ ನಗ್ಮಾ ಚುಂಬನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

<iframe width="640" height="360" src="//www.youtube.com/embed/N56ioQjXD-w?feature=player_embedded" frameborder="0" allowfullscreen></iframe>

ನಗ್ಮಾ ಪ್ರಚಾರದ ವೇಳೆ ಇದೇ ರೀತಿಯ ಹಲವಾರು ಘಟನೆಗಳು ಮರುಕಳಿಸುತ್ತಲೇ ಇವೆ. ಈ ಸಂಬಂಧ ಈಗಾಗಲೆ ಕಾಂಗ್ರೆಸ್ ಪಕ್ಷ ನಗ್ಮಾಗೆ ಹೆಚ್ವಿನ ಭದ್ರತೆ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಸಿನಿಮಾ ತಾರೆಗಳೆಂದರೆ ಸಾಮಾನ್ಯವಾಗಿ ಅಭಿಮಾನಿಗಳಿಗೆ ಕ್ರೇಜ್ ಇದ್ದೇ ಇರುತ್ತದೆ. ಕೇವಲ ತೆರೆಯ ಮೇಲೆ ನೋಡಿ ಆನಂದಿಸಿದ್ದ ಅವರು ಇದೀಗ ಕೈಗೆ ಸಿಕ್ಕಿದ ತಾರೆಗಳಿಗೆ ಈ ರೀತಿಯ ಎಡವಟ್ಟುಗಳನ್ನು ಮಾಡುತ್ತಿದ್ದಾರೆ. ಮೊದಲೇ ನಗ್ಮಾ ಚಿತ್ರಗಳು ಹೇಳಿಕೇಳಿ ಪಡ್ಡೆಗಳ ಪ್ಯಾಂಟ್ ಪಂಕ್ಚರ್ ಮಾಡಿದ್ದವು.

English summary
While, two recent video clips, one showing Nagma being kissed by a Congress leader and another she slapping a groper during poll rallies have been making headlines, the actress turned politician has now taken a complete U-turn and denied any incident of groping or kissing.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada