»   » ಮೋದಿ ಲೇವಡಿ: ಛೀಮಾರಿ ಹಾಕಿಸಿಕೊಂಡ ಬಾಲಿವುಡ್ ನಟಿ

ಮೋದಿ ಲೇವಡಿ: ಛೀಮಾರಿ ಹಾಕಿಸಿಕೊಂಡ ಬಾಲಿವುಡ್ ನಟಿ

Posted By:
Subscribe to Filmibeat Kannada

ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಧರಿಸಿದ್ದ ಹತ್ತು ಲಕ್ಷ ರೂಪಾಯಿ ಮೌಲ್ಯದ (ಎನ್ನಲಾಗುತ್ತಿರುವ) ಸೂಟ್ ಮತ್ತು ಅವರ ವಿದೇಶ ಪ್ರವಾಸದ ಬಗ್ಗೆ ಟೀಕಾ ಪ್ರಹಾರಗಳಿಗೆ ಕೊನೆಯೇ ಇಲ್ಲ.

ಇದಾದ ನಂತರ 'ಸೆಲ್ಫಿ' ಅನ್ನೋ ಪದಕ್ಕೆ ವಿಶೇಷ ಮೆರುಗು ಬಂದಿದ್ದು, ಮೋದಿ ತನ್ನ ಸೆಲ್ಫಿ ಇಮೇಜುಗಳನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಲಾರಂಭಿಸಿದ ನಂತರ. ಮೋದಿ 'ಸೆಲ್ಫಿ ಪ್ರಧಾನಿ' ಎಂದು ಕಾಂಗ್ರೆಸ್ ನವರು ಇದಕ್ಕೆ ಲೇವಡಿ ಮಾಡಿದ್ದೂ ಉಂಟು.

ರಾಜಕಾರಣಿಗಳ ಹೊರತಾಗಿ ಸಿನಿಮಾ ಲೋಕದವರೂ 'ಮೋದಿ ಮತ್ತು ಸೆಲ್ಫಿ' ಬಗ್ಗೆ ಅಲ್ಲೊಮ್ಮೆ, ಇಲ್ಲೊಮ್ಮೆ ಕಾಮೆಂಟು ಮಾಡಿದ್ದೂ ಆಗಿದೆ. ಈಗ ಮೋದಿಯ ಸೆಲ್ಫಿಯ ಬಗ್ಗೆ ಹೆಚ್ಚುಕಮ್ಮಿ ತೆರೆಮೆರೆಗೆ ಸರಿದಿರುವ ಬಾಲಿವುಡ್ ನಟಿ ಲೇವಡಿ ಮಾಡುವ ಮೂಲಕ ಮತ್ತೆ ಪ್ರಚಾರಕ್ಕೆ ಬಂದಿದ್ದಾರೆ.

ಒಂದು ಕಾಲದ ರೂಪದರ್ಶಿ, ಕೆಲವು ಹಿಂದಿ ಸಿನಿಮಾಗಳಲ್ಲೂ ನಟಿಸಿರುವ ನೇಹಾ ಧೂಪಿಯಾ ಪ್ರಧಾನಿ ಮೋದಿಯ ಸೆಲ್ಫಿ ಮತ್ತು ಯೋಗದ ಬಗ್ಗೆ ಟ್ವಿಟರ್ ನಲ್ಲಿ ಅಣಕವಾಡಿದ್ದರು.

ಇದರಿಂದ ಕೆರಳಿದ ಸಿಂಹದಂತಾದ ಮೋದಿ ಬೆಂಬಲಿಗರು, ನೇಹಾ ಧೂಪಿಯಾಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದೆ ಓದಿ..

ನೇಹಾ ಧೂಪಿಯಾ ಹೇಳಿದ್ದೇನು?

ಒಂದು ಮಳೆ ಒಂದು ನಗರವನ್ನೇ ಸ್ಥಬ್ಧವಾಗಿಸುತ್ತದೆ. ಸೆಲ್ಫಿ ಅಥವಾ ಯೋಗ ಎನ್ನುವುದು ಉತ್ತಮ ಆಡಳಿತದ ಪ್ರತೀಕವಲ್ಲ. ಸಾರ್ವಜನಿಕರ ಸುರಕ್ಷತೆ ಉತ್ತಮ ಆಡಳಿತ ಎಂದು ನೇಹಾ ಟ್ವೀಟ್ ಮಾಡಿದ್ದರು.

ಪ್ರತ್ಯುತ್ತರಗಳ ಸುರಿಮಳೆ

ನೇಹಾ ಟ್ವೀಟಿಗೆ ಮೋದಿ ಬೆಂಬಲಿಗರು ತೀರಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನೇಹಾಳ ಸಿನಿಮಾ ಮತ್ತು ವೈಯಕ್ತಿಕ ಬದುಕುಗಳನ್ನು ಟ್ವೀಟ್ ನಲ್ಲಿ ಎಳೆದು ತಂದಿದ್ದಾರೆ. ಜೊತೆಗೆ, ನೇಹಾ ವಿರುದ್ಧ ಅಶ್ಲೀಲ ಪದಗಳೊಂದಿಗೆ ಟೀಕೆಗಳನ್ನೂ ಮಾಡಿದ್ದಾರೆ.

ನೀವು ಏನು ಮಾಡಿದ್ದೀರಾ?

ನೀವು ಕಲಾವಿದರುಗಳು ನಮ್ಮಿಂದ ದುಡ್ಡು ಸಂಪಾದಿಸಿಕೊಳ್ಳುತ್ತೀರಾ, ನಮಗೇನು ಮಾಡಿದ್ದೀರಾ?

ಹಿಂದಿನ ಸರಕಾರವನ್ನು ಕೇಳಿ

ನಿಮ್ಮ ಪ್ರಶ್ನೆಯನ್ನು ಹಿಂದಿನ ಸರಕಾರಕ್ಕೆ ಕೇಳಿ. ನೀವು ಸಿನಿಮಾದಲ್ಲಿ ಚಾನ್ಸಿಗಾಗಿ ಬೇಡುವುದು ಒಳಿತು. ನಿರ್ದೇಶಕರ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳಿ.

ವರ್ಷದ ಹಿಂದಿನ ಮಳೆ

ವರ್ಷಗಳ ಹಿಂದೆ ಮುಂಬೈನಲ್ಲಿ ಇದೇ ರೀತಿ ಮಳೆಯಾದಾಗ ಅಂದಿನ ಸರಕಾರವನ್ನು ಇದೇ ರೀತಿ ಪ್ರಶ್ನಿಸಿದ್ರಾ?

ವಯಸ್ಸಾದಂತೆ ಕಾಣುವ ನೇಹಾ

ನೇಹಾ 65 ವರ್ಷದ ಮುದುಕಿಯಂತೆ ಕಾಣುತ್ತಾಳೆ.

ಹತ್ತು ವರ್ಷ ಎಲ್ಲಿದ್ರೀ

ಟೈಮ್ ವೇಸ್ಟ್ ಮಾಡ್ಬೇಡಿ, ಹತ್ತು ವರ್ಷ ಎಲ್ಲಿದ್ರೀ?

English summary
Bollywood actor Neha Dhupia on Tuesday became the target of Twitterati after she posted a tweet criticizing the Narendra Modi government.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada