For Quick Alerts
  ALLOW NOTIFICATIONS  
  For Daily Alerts

  ಜೀವಕ್ಕೆ ಬೆದರಿಕೆ ಇದೆ, ಭದ್ರತೆ ಕೊಡಿ ಎಂದ ನಟಿ ಪಾಯಲ್ ಘೋಷ್

  |

  ನನ್ನ ಜೀವಕ್ಕೆ ಬೆದರಿಕೆ ಇದೆ, ನನಗೆ Y+ ಭದ್ರತೆ ಕೊಡಿ ಎಂದು ನಟಿ ಪಾಯಲ್ ಘೋಷ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  ನಟಿ ಪಾಯಲ್ ಘೋಷ್ ಇತ್ತೀಚೆಗಷ್ಟೆ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಯತ್ನ ದೂರು ದಾಖಲಿಸಿದ್ದಾರೆ. ಅನುರಾಗ್ ಕಶ್ಯಪ್ ಅನ್ನು ಬಂಧಿಸುವಂತೆ ಒತ್ತಾಯ ಹೇರಿದ್ದಾರೆ.

  ಅನುರಾಗ್ ಕಶ್ಯಪ್ ವಿರುದ್ಧ ದೂರು ದಾಖಲಿಸಿರುವ ಕಾರಣ ಕೆಲವರು ತಮಗೆ ಬೆದರಿಕೆ ಹಾಕಿದ್ದು, ಆ ಕಾರಣ ಕಂಗನಾ ರಣೌತ್‌ ಗೆ ನೀಡಿದಂತೆ ತಮಗೂ ವೈ + ಭದ್ರತೆ ನೀಡಬೇಕು ಎಂದು ಪಾಯಲ್ ಘೋಷ್ ಒತ್ತಾಯಿಸಿದ್ದಾರೆ.

  ಇಂದು ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡಿದ ಪಾಯಲ್ ಘೋಷ್, ರಾಜ್ಯಪಾಲರ ಬಳಿಯೇ ಭದ್ರತೆಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

  ಬಾಲಿವುಡ್‌ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮೀಟೂ ಆರೋಪವ್ನು ಪಾಯಲ್ ಘೋಷ್ ಮಾಡಿದ್ದಾರೆ. ಅನುರಾಗ್ ಕಶ್ಯಪ್ ತಮ್ಮನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದರು ಎಂದು ಪಾಯಲ್ ಘೋಷ್ ಆರೋಪಿಸಿದ್ದಾರೆ. ಅನುರಾಗ್ ಕಶ್ಯಪ್ ಅವರನ್ನು ಬಂಧಿಸದಿದ್ದರೆ ತಾವು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸಹ ಪಾಯಲ್ ಘೋಷ್ ಹೇಳಿದ್ದರು.

  DIRECTORS DIARY : ಸಿನಿಮಾ ರಿಲೀಸ್ ಗೂ ಮುಂಚೆ ಓಡೋಗೋಣ ಅಂತ ಪ್ಲಾನ್ ಮಾಡಿದ್ದೆ | Filmibeat Kannada

  ನಟಿ ಕಂಗನಾ ರಣೌತ್‌ ಗೆ ಕೇಂದ್ರ ಸರ್ಕಾರವು Y+ ಭದ್ರತೆ ನೀಡಿತ್ತು. ಕಂಗನಾ ರಣೌತ್‌, ಶಿವಸೇನಾ ಮುಖಂಡರಿಗೆ, ತಾವು ಮುಂಬೈ ಗೆ ಬರುವುದಾಗಿ ಸವಾಲು ಎಸೆದು ಮುಂಬೈಗೆ ಬಂದಾಗಿ ಅವರ ಭದ್ರತೆಗಾಗಿ Y+ ಸೆಕ್ಯೂರಿಟಿ ಒದಗಿಸಲಾಗಿತ್ತು. ಇದೇ ಮಾದರಿಯ ಭದ್ರತೆ ತಮಗೆ ಬೇಕೆಂದು ಪಾಯಲ್ ಘೋಷ್ ಮನವಿ ಮಾಡಿದ್ದಾರೆ.

  English summary
  Actress Payal Gosh requested for Y+ security from central government. She gave complaint against director Anurag Kashyap.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X