»   » 'ಮೊಹೆಂಜೋದಾರೊ'ದಲ್ಲಿ ಹೃತಿಕ್ ಪಟ್ಟದರಸಿಯಾದ ಪೂಜಾ ಹೆಗ್ಡೆ

'ಮೊಹೆಂಜೋದಾರೊ'ದಲ್ಲಿ ಹೃತಿಕ್ ಪಟ್ಟದರಸಿಯಾದ ಪೂಜಾ ಹೆಗ್ಡೆ

By: ಮಂಗಳೂರು ಪ್ರತಿನಿಧಿ
Subscribe to Filmibeat Kannada

ಬಾಲಿವುಡ್ ನ ಬಹುನಿರೀಕ್ಷಿತ 'ಮೊಹೆಂಜೋದಾರೊ' ನಾಯಕಿ ಪೂಜಾ ಹೆಗ್ಡೆ ಫಸ್ಟ್ ಲುಕ್ ಪೋಸ್ಟರ್ ಸಿನಿ ಪ್ರೇಮಿಗಳಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಕಳೆದ ವಾರವಷ್ಟೇ ಚಿತ್ರದ ನಾಯಕ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಫಸ್ಟ್ ಲುಕ್, ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು.

ಈಗಾಗಲೇ ನಾಯಕಿ ಪೂಜಾ ಹೆಗ್ಡೆ ಅವರ ಫಸ್ಟ್ ಲುಕ್ ಹೊರಬಿದ್ದಿದ್ದು, ನಟಿ ಪೂಜಾ ಅವರು ನೀಲಿ ಹಾಗೂ ತಿಳಿಗೆಂಪು ಬಣ್ಣದ ವಿಭಿನ್ನ ಕಾಸ್ಟ್ಯೂಮ್ ನಲ್ಲಿ ದೇವತೆಯಂತೆ ಕಂಗೊಳಿಸುತ್ತಿದ್ದಾರೆ. ಅಂದಹಾಗೆ ಪೂಜಾ ಹೆಗ್ಡೆ ಅವರು ಮೂಲತಃ ಮಂಗಳೂರಿನ ಕಾರ್ಕಳದ ಬೆಡಗಿ ಅನ್ನೋದು ಇನ್ನೊಂದು ವಿಶೇಷ.

Actress Pooja Hegde looks stunning as 'Chaani' in 'Mohenjo Daro'

ತೆಲುಗು ನಟ ನಾಗ್ ಚೈತನ್ಯ ಜೊತೆ 'ಒಕ ಲೈಲಾ ಕೋಸಂ' ನಟ ವರುಣ್ ತೇಜಾ ಅವರ ಜೊತೆ 'ಮುಕುಂದ' ಹಾಗೂ ತಮಿಳು ನಟ ಜೀವಾ ಅವರ ಜೊತೆ 'ಮುಗಮೋಡಿ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಪೂಜಾ ಅವರು 'ಮೊಹೆಂಜೋದಾರೊ' ಮೂಲಕ ಸ್ಟಾರ್ ನಟ ಹೃತಿಕ್ ಜೊತೆ ಮೊಟ್ಟ ಮೊದಲ ಬಾರಿಗೆ ಬಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.

Actress Pooja Hegde looks stunning as 'Chaani' in 'Mohenjo Daro'

ಈ ಚಿತ್ರದಲ್ಲಿ ಪೂಜಾ ಅವರು ಹೃತಿಕ್ ರೋಷನ್ ಗೆ ಜೋಡಿಯಾಗಿ 'ಚಾನಿ' ಪಾತ್ರದಲ್ಲಿ ನಟಿಸುತ್ತಿದಾರೆ. ನಿರ್ದೇಶಕ ಅಶುತೋಷ್ ಗೌರೀಕರ್ ಆಕ್ಷನ್-ಕಟ್ ನಲ್ಲಿ ಮೂಡಿಬರುತ್ತಿರುವ ಬಿಗ್ ಬಜೆಟ್ ನ ಸಿನಿಮಾ ಈ ವರ್ಷದ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲೊಂದು. ಕಳೆದೆರಡು ವರ್ಷಗಳಿಂದ ಚಿತ್ರದ ಕುರಿತಾದ ಎಲ್ಲಾ ಮಾಹಿತಿಯನ್ನು ಗೌಪ್ಯವಾಗಿಡಲಾಗಿತ್ತು.['ಮೊಹೆಂಜೋದಾರೊ' ಫಸ್ಟ್ ಲುಕ್ ಮತ್ತು ಶೂಟಿಂಗ್ ಸ್ಟಿಲ್ಸ್]

Actress Pooja Hegde looks stunning as 'Chaani' in 'Mohenjo Daro'

ಇದೀಗ ಸಿನಿಮಾದ ಫಸ್ಟ್ ಲುಕ್ ಗಳು ಒಂದೊಂದಾಗಿ ಬಿಡುಗಡೆಯಾಗುತ್ತಿದ್ದು, ಚಿತ್ರದ ಕುರಿತಾಗಿ ನಿರೀಕ್ಷೆ ಹೆಚ್ಚಾಗಿದೆ. ಅಡ್ವೆಂಚರ್ - ರೊಮ್ಯಾಂಟಿಕ್ ಸಿನಿಮಾವಾಗಿರುವ 'ಮೊಹೆಂಜೋದಾರೋ' ಚಿತ್ರಕ್ಕೆ ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

Actress Pooja Hegde looks stunning as 'Chaani' in 'Mohenjo Daro'

ಇನ್ನು ಈ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಪೂಜಾ ಹೆಗ್ಡೆ, "ಮುಂಬೈನಲ್ಲಿ ತುಂಬಾ ಸಮಯ ಕಳೆದರೂ ನಾನು ಮೂಲತಃ ತುಳುನಾಡಿನವಳು ಎಂದು ಹೆಮ್ಮೆ ಪಡುತ್ತೇನೆ ಮತ್ತು ನನಗೆ ತುಳು ಭಾಷೆ ಮಾತನಾಡಲು ತುಂಬಾ ಪ್ರೀತಿ' ಎನ್ನುತ್ತಾರೆ.

English summary
Actress Pooja Hegde has shared the first look of her character Chaani from her Bollywood debut 'Mohenjo Daro'. The epic adventure-romance film has been directed by Ashutosh Gowariker and also stars Hrithik Roshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada