For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ ಜೊತೆಗಿನ ಹಳೆಯ ಫೋಟೋ ಹಂಚಿಕೊಂಡ ಶೆರ್ಲಿನ್ ಚೋಪ್ರಾ

  |

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಬಂಧನವಾಗಿದೆ. ಶಿಲ್ಪಾ ಶೆಟ್ಟಿ ಪತಿ ಬಂಧನ ಆದ ದಿನದಿಂದಲೂ ಅವರ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಸತತವಾಗಿ ಗಂಭೀರವಾದ ಆರೋಪಗಳನ್ನು ಮಾಡುತ್ತಿದ್ದಾರೆ.

  ಶೆರ್ಲಿನ್ ಚೋಪ್ರಾ ಹೇಳುತ್ತಿರುವುದರಲ್ಲಿ ಎಷ್ಟು ಸತ್ಯ ಇರಬಹುದು ಎಂದು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ, ಕುಂದ್ರಾ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಚರ್ಚೆಗೆ ಕಾರಣವಾಗಿದ್ದಾರೆ.

  'ನನ್ನ ವಿಡಿಯೋ, ಫೋಟೋ ನೋಡಿ ಶಿಲ್ಪಾ ಶೆಟ್ಟಿ ಮೆಚ್ಚಿದ್ದರು': ಶೆರ್ಲಿನ್ ಚೋಪ್ರಾ'ನನ್ನ ವಿಡಿಯೋ, ಫೋಟೋ ನೋಡಿ ಶಿಲ್ಪಾ ಶೆಟ್ಟಿ ಮೆಚ್ಚಿದ್ದರು': ಶೆರ್ಲಿನ್ ಚೋಪ್ರಾ

  ಮೊದಲ ದಿನ ಕುಂದ್ರಾ ಸಂಸ್ಥೆಯ ಜೊತೆ ಶಾರ್ಟ್‌ ವಿಡಿಯೋ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದು ಎಂದು ದಿನಾಂಕ ಸಮೇತ ಪೋಸ್ಟ್ ಹಾಕಿದ್ದಾರೆ. ''ಅದು 2019 ಮಾರ್ಚ್ 29 ಆಗಿತ್ತು. ಆರ್ಮ್ಸ್‌ಪ್ರೈಮ್ ಸಂಸ್ಥೆ ಆಯೋಜಿಸಿದ್ದ 'ದಿ ಶೆರ್ಲಿನ್ ಚೋಪ್ರಾ ಆಪ್‌ನ ಮೊದಲ ಕಂಟೆಂಟ್ ವಿಡಿಯೋ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿಯವರೆಗೂ ನಾನು ಯಾವುದೇ ಆಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರಲಿಲ್ಲ. ಇದು ನನಗೆ ಹೊಸ ಅನುಭವ ಆಗಿತ್ತು. ಅಲ್ಲಿ ಭರವಸೆ ಮತ್ತು ಉತ್ಸಾಹದ ವಾತಾವರಣ ಮನೆ ಮಾಡಿತ್ತು' ಎಂದು ಪೋಸ್ಟ್ ಹಾಕಿದ್ದಾರೆ.

  ಈ ಫೋಟೋದಲ್ಲಿ ಒಂದು ಕಡೆ ರಾಜ್ ಕುಂದ್ರಾ ಮತ್ತೊಂದೆಡೆ ವ್ಯಕ್ತಿಯೊಬ್ಬ ಕೂತಿದ್ದು, ನಡುವಲ್ಲಿ ಶೆರ್ಲಿನ್ ಚೋಪ್ರಾ ಕುಳಿತುಕೊಂಡಿದ್ದಾರೆ. ನಟಿ ಶೆರ್ಲಿನ್ ಚೋಪ್ರಾ ಸೆಮಿ ಬಿಕಿನಿ ತೊಟ್ಟಿರುವುದು ಗಮನಾರ್ಹ. ಬಹಳಷ್ಟು ಜನರು ಈ ಫೋಟೋ ಫೇಕ್ ಎಂದು ಹೇಳುತ್ತಿದ್ದಾರೆ. ಕುಂದ್ರಾ ಅವರನ್ನು ಎಡಿಟ್ ಮಾಡಲಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  ಈ ಕೇಸ್ ಸಂಬಂಧ ಮುಂಬೈ ಪೊಲೀಸರ ಎದುರು ನಟಿ ಶೆರ್ಲಿನ್ ಚೋಪ್ರಾ ವಿಚಾರಣೆಗೆ ಹಾಜರಾಗಿದ್ದರು. ಸುಮಾರು 8 ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದ ನಟಿಯ ಬಳಿ ಪೊಲೀಸರು ಸಾಕಷ್ಟು ವಿಚಾರಗಳನ್ನು ಪ್ರಶ್ನಿಸಿದ್ದರು. ''ರಾಜ್ ಕುಂದ್ರಾ ಅವರ ಆರ್ಮ್ಸ್‌ಪ್ರೈಮ್ ಸಂಸ್ಥೆ ಜೊತೆಗಿನ ಒಪ್ಪಂದ ಹೇಗಾಯಿತು ಮತ್ತು ಆ ಒಪ್ಪಂದಲ್ಲಿ ಯಾವೆಲ್ಲ ಅಂಶಗಳಿವೆ ಎಂದು ಶೆರ್ಲಿನ್ ಚೋಪ್ರಾಗೆ ಪೊಲೀಸರು ಪ್ರಶ್ನಿಸಿದ್ದಾರೆ. ಈ ಕೇಸ್‌ನಲ್ಲಿ ರಾಜ್ ಕುಂದ್ರಾ ಅವರ ಜೊತೆ ನಿಮ್ಮ ಸಂಬಂಧವೇನು? ಅವರ ಸಂಸ್ಥೆಯಲ್ಲಿ ಎಷ್ಟು ವಿಡಿಯೋಗಳಲ್ಲಿ ನೀವು ಪಾಲ್ಗೊಂಡಿದ್ರಿ'' ಎಂದು ವಿಚಾರಣೆಯಲ್ಲಿ ಕೇಳಿದ್ರು ಎಂದು ಶೆರ್ಲಿನ್ ಇ-ಟೈಮ್ಸ್‌ಗೆ ಹೇಳಿಕೊಂಡಿದ್ದರು.

  ರಾಜ್ ಕುಂದ್ರಾ ಕೇಸ್: 8 ಗಂಟೆ ವಿಚಾರಣೆ, ಪೊಲೀಸರ ಮುಂದೆ ಶೆರ್ಲಿನ್ ಬಿಚ್ಚಿಟ್ಟ ವಿಷಯಗಳೇನು?ರಾಜ್ ಕುಂದ್ರಾ ಕೇಸ್: 8 ಗಂಟೆ ವಿಚಾರಣೆ, ಪೊಲೀಸರ ಮುಂದೆ ಶೆರ್ಲಿನ್ ಬಿಚ್ಚಿಟ್ಟ ವಿಷಯಗಳೇನು?

  ಇತ್ತೀಚಿಗಷ್ಟೆ ರಾಜ್ ಕುಂದ್ರಾ ಜಾಮೀನು ಅರ್ಜಿ ವಜಾಗೊಂಡಿತ್ತು. ಆಗಸ್ಟ್ 7 ರಂದು ಬಾಂಬೆ ಹೈಕೋರ್ಟ್‌ ಕುಂದ್ರಾ ಸಲ್ಲಿಸಿದ್ದ ಜಾಮೀನು ಮನವಿಯನ್ನು ತಿರಸ್ಕರಿಸಿತ್ತು. ಈ ಮೂಲಕ ಮತ್ತಷ್ಟು ದಿನಗಳ ಕಾಲ ಜೈಲಿನಲ್ಲಿಯೇ ಉಳಿಯಬೇಕಿದೆ.

  Actress Sherlyn Chopra Shares old pic with Businessman Raj Kundra

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಜುಲೈ 19 ರಂದು ಬಂಧನವಾಗಿದ್ದರು. ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಲಾಯಿತು. ನಂತರ ಜುಲೈ 27 ರಂದು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

  English summary
  Pornography case: Actress Sherlyn Chopra shares old pic with businessman Raj Kundra from her first day at shoot for app.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X