For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ಪ್ರವೇಶ ಬಗ್ಗೆ ಮೌನ ಮುರಿದ ಶಿಲ್ಪಾ ಶೆಟ್ಟಿ

  By ಉದಯರವಿ
  |

  ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಅವರು ತಮ್ಮ ರಾಜಕೀಯ ಪ್ರವೇಶ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ರಾಜಸ್ತಾನ್ ರಾಯಲ್ಸ್ ತಂಡದ ಒಡತಿಯೂ ಆಗಿರುವ ಶಿಲ್ಪಾ ಶೆಟ್ಟಿ ಅವರು ತಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

  ಪ್ರಾಮಾಣಿಕವಾಗಿ ಹೇಳುತ್ತೇನೆ ನನಗೆ ರಾಜಕೀಯಕ್ಕೆ ಬರಬೇಕೆಂಬ ಆಸಕ್ತಿ ಇಲ್ಲ. ಈ ಬಗ್ಗೆ ಯೋಚಿಸಿಯೂ ಇಲ್ಲ. ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಅಡಿಯಿಡಲ್ಲ ಎಂದಿದ್ದಾರೆ. ಮುಂಬೈನಲ್ಲಿ ಸ್ಪಾ ಒಂದನ್ನು ಉದ್ಘಾಟಿಸಿದ ಬಳಿಕ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮೌನ ಮುರಿದರು.

  ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ 38ರ ಹರೆಯದ ಶಿಲ್ಪಾ ಶೆಟ್ಟಿ, "ಪ್ರಧಾನಿ ಯಾರೇ ಆಗಲಿ ಮೊದಲು ದೇಶ ಆಮೇಲೆ ಅವರ ಬಗ್ಗೆ ಯೋಚಿಸಬೇಕು. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕು ಅಷ್ಟೇ" ಎಂದಿದ್ದಾರೆ.

  ಬಳಿಕ ತಮ್ಮ ರಾಜಸ್ತಾನ್ ರಾಯಲ್ಸ್ ನ ಸಹ ಒಡತಿ ಶಿಲ್ಪಾ ತಮ್ಮ ತಂಡದ ಬಗ್ಗೆ ಮಾತನಾಡಿದರು. ರವೀಂದ್ರ ಜಡೇಜ, ಯೂಸುಫ್ ಪಠಾನ್, ಸ್ಟುವರ್ಟ್ ಬಿನ್ನಿ ಹಾಗೂ ಸಂಜು ಸಾಮ್ ಸನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಭಾನ್ವಿತ ಆಟಗಾರರಿಗೆ ರಾಷ್ಟ್ರವನ್ನು ಪ್ರತಿನಿಧಿಸಲು ಐಪಿಎಲ್ ಪಂದ್ಯಾವಳಿ ಉತ್ತಮ ವೇದಿಕೆಯಾಗಿದೆ ಎಂದು ಶಿಲ್ಪಾ ಅಭಿಪ್ರಾಯ ಪಟ್ಟರು.

  ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ "ಚೋರಿಯಾಗಿದೆ ನನ್ನ ದಿಲ್..." (ಚಿತ್ರ: ಪ್ರೀತ್ಸೋದ್ ತಪ್ಪ) ಎಂದು ಹಾಡಿ ಕುಣಿದಿದ್ದ ಬಾಲಿವುಡ್ ಬೊಂಬಾಟ್ ಬೆಡಗಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಕೆಲದಿನಗಳ ಹಿಂದೆ ಚೋರಿಯಾಗಿತ್ತು. ಆದರೆ ಅವರ ದಿಲ್ ಅಲ್ಲ, ಬದಲಾಗಿ ಅವರ ಐಪಾಡ್ ಹಾಗೂ ಐಪ್ಯಾಡ್ ಕದ್ದಿದ್ದಾನೆ ಖತರ್ನಾಕ್ ಕಳ್ಳ.

  English summary
  Bollywood actress Shilpa Shetty today said that she had no plans of venturing into politics.“I honestly have no interest in politics, I don’t think, I could ever get into politics,” said Shetty, who was in the city to launch her spa outlet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X