For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರರಿಂದ ಮಕ್ಕಳನ್ನು ದೂರ ಇಟ್ಟ ಶಿಲ್ಪಾ ಶೆಟ್ಟಿ; ಪತಿಯಿಂದ ದೂರ ಆಗ್ತಾರಾ ನಟಿ?

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸದ್ಯ ಮತ್ತೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಎರಡು ತಿಂಗಳಿಂದ ಪತಿ ರಾಜ್ ಕುಂದ್ರ ಬಂಧನದ ಸುದ್ದಿಯಲ್ಲಿದ್ದರು. ಪತಿಯ ಬಂಧನದ ಶಾಕ್ ನಿಂದ ಶಿಲ್ಪಾ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ತಿಂಗಳ ಬಳಿಕ ಮತ್ತೆ ಕಿರುತೆರೆ ಕಾರ್ಯಕ್ರಮಕ್ಕೆ ಹಾಜರಾಗುವ ಮೂಲಕ ಶಿಲ್ಪಾ ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

  ಅಂದಹಾಗೆ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಜೈಲು ಸೇರಿದ್ದರು. ಬ್ಲ್ಯೂ ಫಿಲ್ಮ್ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಮುಂಬೈ ಪೊಲೀಸರು ರಾಜ್ ಕುಂದ್ರ ಅವರನ್ನು ಜುಲೈ 19ರಂದು ಬಂಧಿಸಿದ್ದರು. ರಾಜ್ ಕುಂದ್ರ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಪತಿಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಇತ್ತೀಚಿಗೆ ಕೇಳಿಬಂದ ಮಾಹಿತಿ ಪ್ರಕಾರ ಶಿಲ್ಪಾ ಶೆಟ್ಟಿ, ಮಕ್ಕಳಾದ ವಿಯಾನ್ ಮತ್ತು ಸಮೀಷಾ ಶೆಟ್ಟಿ ಇಬ್ಬರನ್ನು ರಾಜ್ ಕುಂದ್ರ ಅವರಿಂದ ದೂರ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ತನ್ನ ಪತಿ ರಾಜ್ ಕುಂದ್ರ ಸಂಪಾದನೆ ಮಾಡಿದ ಕೆಟ್ಟ ಸಂಪತ್ತಿನಿಂದ ಮಕ್ಕಳನ್ನು ದೂರ ಇಟ್ಟಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಮುಂದೆ ಓದಿ..

  ಪತಿಯ ಸಂಪತ್ತಿನ ಮೂಲದ ಬಗ್ಗೆ ಶಿಲ್ಪಾಗೆ ಇರಲಿಲ್ಲ ಮಾಹಿತಿ

  ಪತಿಯ ಸಂಪತ್ತಿನ ಮೂಲದ ಬಗ್ಗೆ ಶಿಲ್ಪಾಗೆ ಇರಲಿಲ್ಲ ಮಾಹಿತಿ

  ಈ ಬಗ್ಗೆ ಶಿಲ್ಪಾ ಶೆಟ್ಟಿ ಆಪ್ತ ಸ್ನೇಹಿತರು ಹೇಳಿರುವ ಪ್ರಕಾರ, "ರಾಜ್ ಕುಂದ್ರ ಅವರ ಸದ್ಯ ಎದುರಿಸುತ್ತಿರುವ ಸಮಸ್ಯೆ ಸದ್ಯಕ್ಕೆ ಬಗೆಹರಿಯುವುದಿಲ್ಲ. ಪ್ರತಿವಾರ ಕಳೆದಂತೆ ಸಮಸ್ಯೆ ಜಾಸ್ತಿ ಆಗುತ್ತಿದೆ. ರಾಜ್ ಕುಂದ್ರ ಅವರ ಬ್ಲ್ಯೂ ಫಿಲ್ಮ್ ದಂಧೆ ಪ್ರಕರಣ ಶಿಲ್ಪಾ ಶೆಟ್ಟಿ ಮತ್ತು ನಮಗೆ ತುಂಬಾ ದೊಡ್ಡ ಶಾಕ್ ಆಗಿದೆ. ವಜ್ರಗಳು ಮತ್ತು ಡ್ಯೂಪ್ಲೆಕ್ಸ್ ಇಂತ ಕೆಟ್ಟ ಸಂಪತ್ತಿನಿಂದ ಬರುತ್ತಿದೆ ಎನ್ನುವ ಸುಳಿವು ಕೂಡ ಶಿಲ್ಪಾ ಶೆಟ್ಟಿಗೆ ಇರಲಿಲ್ಲ" ಎಂದು ಹೇಳಿದ್ದಾರೆ.

  ಕುಂದ್ರರಿಂದ ಮಕ್ಕಳನ್ನು ದೂರ ಇಟ್ಟ ಶಿಲ್ಪಾ

  ಕುಂದ್ರರಿಂದ ಮಕ್ಕಳನ್ನು ದೂರ ಇಟ್ಟ ಶಿಲ್ಪಾ

  ಇದೇ ಸಮಯದಲ್ಲಿ ಮಾತನಾಡಿದ ಸ್ನೇಹಿತರು, ಶಿಲ್ಪಾ ಶೆಟ್ಟಿ ತನ್ನ ಮಕ್ಕಳನ್ನು ಕುಂದ್ರರಿಂದ ದೂರ ಇಡಲು ಬಯಸಿದ್ದಾರೆ ಎಂದು ಹೇಳಿದ್ದಾರೆ. "ತಮಗೆ ತಿಳಿದುಬಂದಂತೆ ಶಿಲ್ಪಾ ಶೆಟ್ಟಿ ಕುಂದ್ರ ಅವರಿಂದ ಒಂದು ಪೈಸೆಯನ್ನೂ ಮುಟ್ಟುವುದಿಲ್ಲ" ಎಂದಿದ್ದಾರೆ. "ರಿಯಾಲಿಟಿ ಶೋಗಳಲ್ಲಿ ಭಾಗಿಯಾಗುವ ಮೂಲಕ ಗಣನೀಯ ಪ್ರಮಾಣದ ಹಣ ಗಳಿಸುತ್ತಿದ್ದಾರೆ. ಜೊತೆಗೆ ಹಂಗಾಮ-2 ಬಳಿಕ ಇನ್ನು ಹೆಚ್ಚಿನ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಹೊಂದಿದ್ದಾರೆ" ಎಂದು ಶಿಲ್ಪಾ ಶೆಟ್ಟಿ ಸ್ನೇಹಿತರು ಮಾಹಿತಿ ನೀಡಿದ್ದಾರೆ.

  ಪತಿಯಿಂದ ದೂರ ಆಗ್ತಾರಾ ಶಿಲ್ಪಾ ಶೆಟ್ಟಿ?

  ಪತಿಯಿಂದ ದೂರ ಆಗ್ತಾರಾ ಶಿಲ್ಪಾ ಶೆಟ್ಟಿ?

  "ಪತಿ ರಾಜ್ ಕುಂದ್ರ ಜೈಲಿನಲ್ಲಿ ದೀರ್ಘಕಾಲವಿದ್ದರೂ ಶಿಲ್ಪಾ ಶೆಟ್ಟಿ ಸ್ಟ್ಯಾಂಡರ್ಡ್ ಆಫ್ ಲಿವಿಂಗ್ ಗೆ ಯಾವುದೇ ತೊಂದರೆ ಆಗುವುದಿಲ್ಲ" ಎಂದು ಹೇಳಿದ್ದಾರೆ. ಶಿಲ್ಪಾ ಆಪ್ತರು ಹೇಳಿರುವ ಮಾಹಿತಿ ನೋಡುತ್ತಿದ್ದರೆ ಶಿಲ್ಪಾ ಶೆಟ್ಟಿ ಕೂಡ ಪತಿಯಿಂದ ದೂರ ಆಗ್ತಾರೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಬ್ಬರೂ ಮಕ್ಕಳ ಜೊತೆ ಪ್ರತ್ಯೇಕವಾಗಿ ಬದುಕುವ ಮೂಲಕ ರಾಜ್ ಕುಂದ್ರ ಅವರಿಂದ ದೂರ ಸರಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

  ಕಿರುತೆರೆಯಲ್ಲಿ ಬ್ಯುಸಿಯಾದ ಶಿಲ್ಪಾ

  ಕಿರುತೆರೆಯಲ್ಲಿ ಬ್ಯುಸಿಯಾದ ಶಿಲ್ಪಾ

  ಶಿಲ್ಪಾ ಶೆಟ್ಟಿ ಸದ್ಯ ಡಾನ್ಸ್ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದಿ ಕಿರುತೆರೆಯ ಪ್ರಸಿದ್ಧ ಡಾನ್ಸ್ ಶೋ ಸೂಪರ್ ಡಾನ್ಸರ್-4ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಪತಿ ರಾಜ್ ಕುಂದ್ರ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಡಾನ್ಸ್ ಶೋನಿಂದ ದೂರ ಉಳಿದ್ದರು. ಇದೀಗ ತಿಂಗಳ ಬಳಿಕ ಶಿಲ್ಪಾ ಮತ್ತೆ ಶೋಗೆ ಮರಳಿದ್ದು, ಜಡ್ಜ್ ಸ್ಥಾನ ಅಲಂಕರಿಸಿದ್ದಾರೆ. ಕಿರುತೆರೆ ಜೊತೆಗೆ ಶಿಲ್ಪಾ ಶೆಟ್ಟಿ ಸಿನಿಮಾಗಳಲ್ಲೂ ಬ್ಯುಸಿಯಾಗುವ ಸಾಧ್ಯತೆ ಇದೆ.

  English summary
  Bollywood Actress Shilpa Shetty Kundra To Keep Her Kids Away From her husband Raj Kundra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X