For Quick Alerts
  ALLOW NOTIFICATIONS  
  For Daily Alerts

  ನಟಿ ಸಾವು ಪ್ರಕರಣಕ್ಕೆ ಟ್ವಿಸ್ಟ್: ದೇಹದ ಮೇಲೆ ಗಾಯಗಳು! ಕೊಲೆ ಕೇಸ್ ದಾಖಲು

  |

  ನಟಿ, ಬಿಜೆಪಿ ನಾಯಕಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಸೊನಾಲಿ ಪೋಗಟ್ ಸಾವಿನ ಪ್ರಕರಣಕ್ಕೆ ಸಖತ್ ಟ್ವಿಸ್ಟ್ ದೊರಕಿದೆ. ನಟಿಯ ಸಾವಿಗೆ ಹೃದಯಾಘಾತ ಎಂದು ಆರಂಭದಲ್ಲಿ ನಂಬಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ಬಳಿಕ ಇದೊಂದು ಕೊಲೆ ಎಂದು ಗೋವಾ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

  ಇದೇ ಮಂಗಳವಾರ ನಟಿ ಸೊನಾಲಿ ಪೋಗಟ್ ಗೋವಾದಲ್ಲಿ ಮರಣ ಹೊಂದಿದ್ದರು. ಅವರಿಗೆ 42 ವರ್ಷ ವಯಸ್ಸಾಗಿತ್ತು. ಬಿಜೆಪಿ ನಾಯಕಿಯೂ ಆಗಿದ್ದ ಸೊನಾಲಿ, ಚಿತ್ರೀಕರಣ ಒಂದರ ನಿಮಿತ್ತ ಗೋವಾಕ್ಕೆ ಭೇಟಿ ನೀಡಿದ್ದರು.

  ಆದರೆ ನಟಿಯ ಸಾವನ್ನು ಕುಟುಂಬ ಸದಸ್ಯರು ಅನುಮಾನದಿಂದ ನೋಡಿದ್ದರು. ನಟಿಯ ಸಹೋದರ ರಿಂಕು, ಗೋವಾದ ಪೊಲೀಸರಿಗೆ ದೂರು ನೀಡಿದ್ದರಲ್ಲದೆ, ನಟಿಯು ಸಾಯುವ ಕೆಲ ಗಂಟೆಗಳ ಮುಂಚೆಯಷ್ಟೆ ಕರೆ ಮಾಡಿ ತನ್ನ ಇಬ್ಬರು ಸಹಾಯಕರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಎಂದು ಮಾಧ್ಯಮಗಳಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದರು.

  ಮೊದಲಿಗೆ ಅನೈಸರ್ಗಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಗೋವಾದ ಅಂಜುನಾ ಪೊಲೀಸರು ಸೊನಾಲಿಯ ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿ ಬಂದ ಬಳಿಕ ಪ್ರಕರಣವನ್ನು ಕೊಲೆ ಪ್ರಕರಣವೆಂದು ದಾಖಲಿಸಿಕೊಂಡಿದ್ದಾರೆ.

  ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ನಟಿ ಸೊನಾಲಿಯ ದೇಹದ ಮೇಲೆ ಹಲವು ಗಾಯಗಳಿರುವುದಾಗಿ ಪತ್ತೆ ಮಾಡಿದ್ದಾರೆ. ದೇಹದ ಮೇಲೆ ಆಗಿರುವ ಗಾಯಗಳಿಗೆ ಏನು ಕಾರಣ ಹಾಗೂ ಸಾವಿಗೆ ಏನು ಕಾರಣ ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕು ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸಲಹೆ ನೀಡಿದ್ದಾರೆ.

  ತನಿಖಾ ದೃಷ್ಟಿಯಿಂದಾಗಿ ಸೊನಾಲಿಯ ದೇಹದ ಮಾದರಿಗಳನ್ನು ಎಫ್‌ಎಸ್‌ಎಲ್ ತನಿಖೆಗೆ ರವಾನಿಸಲಾಗಿದೆ. ಈ ನಡುವೆ ಸೊನಾಲಿಯ ಸಹೋದನ ದೂರಿನ ಆಧಾರದಲ್ಲಿ ಸೊನಾಲಿಗೆ ಸಹಾಯಕರಾಗಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  ಹಿಂದಿ ಬಿಗ್‌ಬಾಸ್ ಸೀಸನ್ 14 ರಲ್ಲಿ ಸೊನಾಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಕೆಲವು ಸಿನಿಮಾಗಳಲ್ಲಿ ಸಹ ನಟಿಸಿದ್ದರು. ಬಿಜೆಪಿ ನಾಯಕಿಯಾಗಿದ್ದ ಸೊನಾಲಿ ಕಳೆದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.

  ತನ್ನ ಅಕ್ಕನದ್ದು ಸಹಜ ಸಾವಲ್ಲ ಅದು ಕೊಲೆ ಎಂದು ಆರೋಪಿಸಿರುವ ಆಕೆಯ ಸಹೋದರ ರಿಂಕು, ಆಕೆಯ ಸಾವಾದ ಕೂಡಲೇ ಹರ್ಯಾಣಾದಲ್ಲಿ ಆಕೆಯ ಫಾರ್ಮ್‌ ಹೌಸ್‌ನಲ್ಲಿದ್ದ ಆಕೆಯ ಲ್ಯಾಪ್‌ಟಾಪ್ ಮಾಯವಾಗಿದೆ ಎಂದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಹಂತಕರು ಯಾರೆಂದು ತಿಳಿದುಬರಬೇಕಿದೆ.

  English summary
  Actress Sonali Phogat death: Goa police filed murder case after her autopsy report came in. She is BJP leader of Haryana also.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X