»   » ಏಪ್ರಿಲ್ ತಿಂಗಳಲ್ಲಿ ಶ್ರೀದೇವಿ ಹೊಸ ಸಿನಿಮಾ ಸೆಟ್ಟೇರಬೇಕಿತ್ತು.!

ಏಪ್ರಿಲ್ ತಿಂಗಳಲ್ಲಿ ಶ್ರೀದೇವಿ ಹೊಸ ಸಿನಿಮಾ ಸೆಟ್ಟೇರಬೇಕಿತ್ತು.!

Posted By:
Subscribe to Filmibeat Kannada

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ನಿರ್ಮಾಪಕ ಕರಣ್ ಜೋಹರ್ ಬ್ಯಾನರ್ ನಲ್ಲಿ ಇಂಡಸ್ಟ್ರಿಗೆ ಪರಿಚಯವಾಗ್ತಿದ್ದಾಳೆ ಎಂಬ ಸುದ್ದಿಯಿಂದ ಶ್ರೀದೇವಿ ತೀವ್ರ ಖುಷಿ ಪಟ್ಟುಕೊಂಡಿದ್ದರು. ದೊಡ್ಡ ನಿರ್ಮಾಣ ಸಂಸ್ಥೆಯಲ್ಲಿ ನನ್ನ ಮಗಳು ಸಿನಿವೃತ್ತಿಯನ್ನ ಆರಂಭಿಸುತ್ತಿದ್ದಾರೆ ಎಂಬ ಸಂತಸ ಅವರನ್ನ ಕಾಡಿತ್ತು.

ಆದ್ರೆ, ಮಗಳ ಸಿನಿಮಾ ತೆರೆಕಾಣುವುದಕ್ಕೆ ಮುಂಚೆಯೇ ಶ್ರೀದೇವಿ ಇಹಲೋಕ ತ್ಯಜಿಸಿದ್ದಾರೆ. ಇಶಾನ್ ಕತ್ತಾರ್ ಈ ಚಿತ್ರದ ನಾಯಕನಾಗಿದ್ದು, ಇವರಿಗೂ ಇದು ಚೊಚ್ಚಲ ಸಿನಿಮಾ. ಇದರ ಮಧ್ಯೆ ಶ್ರೀದೇವಿ ಕೂಡ ಹೊಸ ಸಿನಿಮಾ ಮಾಡಬೇಕಿತ್ತು.

ಶ್ರೀದೇವಿ ರೂಮಿನಲ್ಲಿ ಆ ದಿನ ಏನಾಯ್ತು.? ಕೋಮಲ್ ನೆಹ್ತಾ ಬಿಚ್ಚಿಟ್ಟ ಅಸಲಿ ಕಥೆ.!

ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೇ ಇದೇ ಏಪ್ರಿಲ್ ತಿಂಗಳಿನಿಂದ ನಟಿ ಶ್ರೀದೇವಿ ಹೊಸ ಸಿನಿಮಾದಲ್ಲಿ ನಟಿಸಬೇಕಿತ್ತು. ಆದ್ರೆ, ಈ ಪ್ರಾಜೆಕ್ಟ್ ಆರಂಭವಾಗುವುದಕ್ಕೆ ಮುಂಚೆಯೇ 'ಚಾಂದಿನಿ' ಅಕಾಲಿಕ ಮರಣಕ್ಕೆ ತುತ್ತಾದರು.

ಕರಣ್ ಹೊಸ ಸಿನಿಮಾದಲ್ಲಿ ಶ್ರೀದೇವಿ

'ದಡಕ್' ಚಿತ್ರದ ನಂತರ ನಿರ್ಮಾಪಕ ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದ ಹೊಸ ಚಿತ್ರದಲ್ಲಿ ಶ್ರೀದೇವಿ ಅಭಿನಯಿಸಬೇಕಿತ್ತು. ಈ ಚಿತ್ರದಲ್ಲಿ ಅಭಿನಯಿಸಲು ಶ್ರೀದೇವಿ ಕೂಡ ಒಪ್ಪಿಕೊಂಡಿದ್ದರು. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಬೇಕಿತ್ತು.

ಶ್ರೀದೇವಿ ಮಗಳು ಬರೆದಿರುವ ಪತ್ರವನ್ನ ಓದಿದರೆ ಮನ ಕಲಕುತ್ತೆ.!

ಮಗಳ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿತ್ತು

ಜಾಹ್ನವಿ ಕಪೂರ್ ಅಭಿನಯಿಸುತ್ತಿರುವ ಮೊದಲ ಸಿನಿಮಾದ ಬಗ್ಗೆ ಶ್ರೀದೇವಿ ಕಾತುರದಿಂದ ಕಾಯುತ್ತಿದ್ದರು. ಈ ಚಿತ್ರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಎಲ್ಲದಕ್ಕಿಂತ ಮಿಗಿಲಾಗಿ, ದೊಡ್ಡ ಬ್ಯಾನರ್ ನಲ್ಲಿ ಸಿನಿಮಾ ಬರುತ್ತಿರುವುದು ಖುಷಿ ಕೊಟ್ಟಿತ್ತು.

ಜುಲೈನಲ್ಲಿ ಮಗಳ ಸಿನಿಮಾ ರಿಲೀಸ್

ಮರಾಠಿಯ ಸೂಪರ್ ಹಿಟ್ ಸಿನಿಮಾ 'ಸೈರಾಟ್' ಚಿತ್ರದ ರೀಮೇಕ್ ಇದಾಗಿದ್ದು, ಜುಲೈ 20ರಂದು ಸಿನಿಮಾ ತೆರೆಗೆ ಬರಲಿದೆ. ಶಶಾಂಕ್ ನಿರ್ದೇಶನದ ಈ ಚಿತ್ರವನ್ನ ಕರಣ್ ಜೋಹರ್ ಸೇರಿದಂತೆ ಹಲವರು ನಿರ್ಮಾಣ ಮಾಡಿದ್ದರು.

ಕಮಲ್ ಹಾಸನ್ ಮತ್ತು ಶ್ರೀದೇವಿ 'ಅಣ್ಣ-ತಂಗಿ'.!

ಕರಣ್-ಶ್ರೀದೇವಿ ನಡುವೆ ಉತ್ತಮ ಬಾಂಧವ್ಯ

ಅಂದ್ಹಾಗೆ, ಕರಣ್ ಜೋಹರ್ ಗೆ ಶ್ರೀದೇವಿಯ ಇಬ್ಬರು ಮಕ್ಕಳ ಮೇಲೆ ಅಪಾರವಾದ ಕಾಳಜಿ. ಇನ್ನು ಶ್ರೀದೇವಿ ಮತ್ತು ಕರಣ್ ಜೋಹರ್ ಕೂಡ ಉತ್ತಮ ಸ್ನೇಹಿತರು ಮತ್ತು ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯವಿತ್ತು. ಈಗ ಶ್ರೀದೇವಿ ಇಲ್ಲ. ಮಗಳ ಸಿನಿಮಾ ಜವಾಬ್ದಾರಿ ಕರಣ್ ಮೇಲೆಯೂ ಇದೆ ಎಂಬುದು ಗಮನಾರ್ಹ.

English summary
Bollywood Actress Sridevi had given her nod to star in a Karan Johar's film from April 2018. Sadly, fate had other choices as she lost her life on February 25, 2018 in Dubai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada