»   » ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ಶ್ರೀದೇವಿ ಹೆಸರು ಬಹಿರಂಗ

ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ಶ್ರೀದೇವಿ ಹೆಸರು ಬಹಿರಂಗ

Posted By:
Subscribe to Filmibeat Kannada

ಈ ಬಾರಿಯ ಪದ್ಮ ಪ್ರಶಸ್ತಿಗಳ ಪಟ್ಟಿಗೆ 'ಇಂಗ್ಲಿಷ್ ವಿಂಗ್ಲಿಷ್' ಅಭಿನೇತ್ರಿ ಶ್ರೀದೇವಿ ಹೆಸರು ಶಿಫಾರಸು ಮಾಡಲಾಗಿದೆ ಎಂಬ ಸುದ್ದಿ ಲೀಕ್ ಆಗಿದೆ. ಶ್ರೀದೇವಿ ಹೆಸರನ್ನು ಶಿಫಾರಸು ಮಾಡಿರುವುದು ಮಹಾರಾಷ್ಟ್ರ ಸರ್ಕಾರ. ಈಗಾಗಲೆ ಪಟ್ಟಿಯಲ್ಲಿ ಶ್ರೀದೇವಿ ಹೆಸರನ್ನು ಸೇರಿಸಲಾಗಿದ್ದು, ಅಂತಿಮಪಟ್ಟಿಯನ್ನು ಶೀಘ್ರದಲ್ಲೇ ಕೇಂದ್ರಕ್ಕೆ ರವಾನಿಸಲಾಗುತ್ತದೆ.

ಕಳೆದ ಎರಡು ವರ್ಷಗಳಿಂದ ಶ್ರೀದೇವಿ ಅವರ ಕಟ್ಟಾ ಅಭಿನಿಯೊಬ್ಬರು ಆನ್ ಲೈನ್ ನಲ್ಲಿ ಈ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಸರ್ಕಾರ ಕೂಡ ಈ ಬಾರಿ ಶ್ರೀದೇವಿ ಅವರಿಗೆ ಪದ್ಮ ಪ್ರಶಸ್ತಿಗೆ ಶತಾಯು ಗತಾಯ ಶಿಫಾರಸು ಮಾಡಿದೆ ಎನ್ನಲಾಗಿದೆ.

ಈ ಬಾರಿ ಶ್ರೀದೇವಿಗೆ ಖಂಡಿತ ಪದ್ಮ ಪ್ರಶಸ್ತಿಗಳಲ್ಲಿ ಒಂದಾದರೂ ಬರುತ್ತದೆ ಎಂಬ ನಿರೀಕ್ಷಿಸಲಾಗಿದೆ. ಈಗಾಗಲೆ ಶ್ರೀದೇವಿ ಅವರಿಗೆ ಹಲವಾರು ಬಿರುದು ಬಾವಲಿಗಳು ಸಿಕ್ಕಿವೆ. ಸ್ಕ್ರೀನ್ ಪ್ರಶಸ್ತಿ, ಜೀ ಸಿನೆಮಾ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳು ಸಿಕ್ಕಿವೆ.

ಹಲವಾರು ಬಾರಿ ಫಿಲಂಫೇರ್ ಪ್ರಶಸ್ತಿಗಳು, ಕೇರಳ, ಆಂಧ್ರ ಪ್ರದೇಶ, ತಮಿಳುನಾಡಿನ ರಾಜ್ಯ ಪ್ರಶಸ್ತಿಗಳು ಸಿಕ್ಕಿವೆ. ಆದರೆ ಇದುವರೆಗೂ ಪದ್ಮ ಪ್ರಶಸ್ತಿ ಸಿಕ್ಕಿರಲಿಲ್ಲ. ಈ ವರ್ಷ ಆ ಆಸೆ ನೆರವೇರುವ ಸಾಧ್ಯತೆಗಳಿವೆ. (ಏಜೆನ್ಸೀಸ್)

English summary
Actress Sridevi’s name is on the recommendation list for the Padma awards, which has been forwarded to the Maharashtra government this year, Times of India sources revealed.
Please Wait while comments are loading...