»   » ಬಾಲಿವುಡ್ ನಲ್ಲಿ 'ಮಾಮ್' ಆಗಿ ಶ್ರೀದೇವಿ ಫಸ್ಟ್ ಲುಕ್ ಹೇಗಿದೆ ನೋಡಿದ್ರಾ?

ಬಾಲಿವುಡ್ ನಲ್ಲಿ 'ಮಾಮ್' ಆಗಿ ಶ್ರೀದೇವಿ ಫಸ್ಟ್ ಲುಕ್ ಹೇಗಿದೆ ನೋಡಿದ್ರಾ?

Posted By:
Subscribe to Filmibeat Kannada

80-90 ರ ದಶಕದಲ್ಲಿ ಬಾಲಿವುಡ್ ಚಿತ್ರರಂಗವನ್ನು ಅಕ್ಷರಶಃ ಆಳಿದ್ದ ಶ್ರೀದೇವಿ 'ಜುದಾಯಿ' ಚಿತ್ರದ ನಂತರ ಬಾಲಿವುಡ್ ನಲ್ಲಿ ಕಾಣಿಸಿಕೊಂಡಿದ್ದು 2012 ರ 'ಇಂಗ್ಲೀಷ್ ವಿಂಗ್ಲೀಷ್' ಚಿತ್ರದಲ್ಲಿ. ಈಗ ನಾಲ್ಕು ವರ್ಷಗಳ ನಂತರ ಶ್ರೀದೇವಿ ಮತ್ತೊಮ್ಮೆ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.[ಅಂತೂ ಇಂತೂ ಶ್ರೀದೇವಿ ಪುತ್ರಿ ಬಣ್ಣ ಹಚ್ಚುವುದು ಪಕ್ಕಾ ಆಯ್ತು.!]

ಹೌದು, ಶ್ರೀದೇವಿ ಈಗ 'ಮಾಮ್' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಸಿನಿಮಾ ದ ಫಸ್ಟ್ ಲುಕ್ ಅನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರಕ್ಕೆ ರವಿ ಉಡ್ಯಾವಾರ್ ಆಕ್ಷನ್ ಕಟ್ ಹೇಳಿದ್ದು, ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ.

Actress Sridevi shares the first look of ‘Mom’

ಅಂದಹಾಗೆ ಶ್ರೀದೇವಿ ಅವರು ಈ ಚಿತ್ರದಲ್ಲಿ ತಾಯಿ ಪಾತ್ರ ನಿರ್ವಹಿಸಿದ್ದು ಅದರ ಫಸ್ಟ್ ಲುಕ್ ಬಿಡುಗಡೆ ಆಗಿದೆ. 'ಮಾಮ್' ಚಿತ್ರದ ಮೊದಲ ಪೋಸ್ಟರ್ ನಲ್ಲಿ ಶ್ರೀದೇವಿ ಕಪ್ಪು ಬಟ್ಟೆ ಧರಿಸಿ ಕಾಣಿಸಿಕೊಂಡಿರುವುದು ಹಲವು ಕುತೂಹಲಗಳನ್ನು ಸೃಷ್ಟಿಸಿದೆ. ಅಲ್ಲದೇ ಪೋಸ್ಟರ್ ಮೇಲೆ ಹಲವು ಭಾಷೆಗಳ ಅಕ್ಷರಗಳನ್ನು ಬರೆಯಲಾಗಿದೆ.[ಸೈಫ್ ಅಲಿ ಖಾನ್ ಮಗ, ಶ್ರೀದೇವಿ ಪುತ್ರಿ ಗುಪ್ತ ಸಂದೇಶ]

Actress Sridevi shares the first look of ‘Mom’

ರವಿ ಉಡ್ಯಾವಾರ್ ನಿರ್ದೇಶನ ಮಾಡುತ್ತಿರುವ 'ಮಾಮ್' ಚಿತ್ರದಲ್ಲಿ ಶ್ರೀದೇವಿ ಜೊತೆಗೆ ಅದ್ಭುತ ತಾರಾಬಳಗ ಇದ್ದು, ನವಾಜುದ್ದೀನ್ ಸಿದ್ದಿಕ್ಕಿ, ಅಕ್ಷಯ್ ಖನ್ನಾ, ಅಭಿಮನ್ಯು ಸಿಂಗ್ ಮತ್ತು ವಿಕಾಶ್ ವರ್ಮ ಕಾಣಿಸಿಕೊಳ್ಳಲಿದ್ದಾರೆ. ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಸಾಧ್ಯತೆ ಇದೆ.

ಚಿತ್ರದಲ್ಲಿ ಪಾಕಿಸ್ತಾನಿ ಚೈಲ್ಡ್ ಆಕ್ಟರ್ ಅದ್ನಾನ್ ಸಿದ್ದಿಕ್ಕಿ ಮತ್ತು ಸಜಲ್ ಅಲಿ ಅವರು ಶ್ರೀದೇವಿ ಮಕ್ಕಳ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

English summary
Actress Sridevi Starrer 'Mom' First Look Released. This Film is directing by Ravi Udyawar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada