For Quick Alerts
  ALLOW NOTIFICATIONS  
  For Daily Alerts

  ಅಂತೂ ಇಂತೂ ಶ್ರೀದೇವಿ ಪುತ್ರಿ ಬಣ್ಣ ಹಚ್ಚುವುದು ಪಕ್ಕಾ ಆಯ್ತು.!

  |

  ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್...ಹೀಗೆ ಎಲ್ಲಾ ಚಿತ್ರರಂಗಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿ, ಪ್ರೇಕ್ಷಕರ ಮನ ಗೆದ್ದು, ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಖ್ಯಾತ ತಾರೆ 'ಸುರಸುಂದರಿ' ಶ್ರೀದೇವಿ, ಇದೀಗ ತಮ್ಮ ಪುತ್ರಿಯನ್ನ ಬೆಳ್ಳಿತೆರೆಗೆ ಪರಿಚಯಿಸಲು ಕೊನೆಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  ಹೌದು, ವರದಿಗಳ ಪ್ರಕಾರ ಬಣ್ಣದ ಬದುಕಿಗೆ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಎಂಟ್ರಿ ಬಹುತೇಕ ಖಚಿತವಾಗಿದೆ. [ಸೈಫ್ ಅಲಿ ಖಾನ್ ಮಗ, ಶ್ರೀದೇವಿ ಪುತ್ರಿ ಗುಪ್ತ ಸಂದೇಶ]

  ಹಾಗಾದ್ರೆ, ಜಾಹ್ನವಿ ಕಪೂರ್ ರವರ ಚೊಚ್ಚಲ ಸಿನಿಮಾ ಯಾವುದು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ, ಓದಿರಿ.....

  ಬಾಲಿವುಡ್ ಮೂಲಕ ಜಾಹ್ನವಿ ಕಪೂರ್ ಪರಿಚಯ

  ಬಾಲಿವುಡ್ ಮೂಲಕ ಜಾಹ್ನವಿ ಕಪೂರ್ ಪರಿಚಯ

  ನಟಿ ಶ್ರೀದೇವಿ ಮಗಳ ಸಿನಿ ಜರ್ನಿ ಯಾವ ಇಂಡಸ್ಟ್ರಿ ಮೂಲಕ ಶುರುವಾಗಬಹುದು ಎಂಬುದೇ ದೊಡ್ಡ ಚರ್ಚೆ ಆಗಿತ್ತು. ಜಾಹ್ನವಿ ಕಪೂರ್ ಟಾಲಿವುಡ್ಗೆ ಬರ್ತಾಳಾ? ಕಾಲಿವುಡ್ ಗೆ ಕಾಲಿಡುತ್ತಾಳಾ? ಅಥವಾ ಬಾಲಿವುಡ್‌ ನಲ್ಲಿ ನೆಲೆಯೂರುತ್ತಾಳಾ ಅಂತಾ ತಲೆಗೆ ಹುಳ ಬಿಟ್ಟುಕೊಂಡವರೇ ಹೆಚ್ಚು. ಈಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಬಾಲಿವುಡ್‌ ಮೂಲಕವೇ ಜಾಹ್ನವಿ ಕಪೂರ್ ಸಿನಿ ಪಯಣ ಶುರು ಆಗಲಿದೆ. [ಸುರಸುಂದರಿ ಶ್ರೀದೇವಿ ಪುತ್ರಿ ಬಾಲಿವುಡ್ ಎಂಟ್ರಿ ಖಚಿತ]

  ಕರಣ್ ಜೋಹರ್ ಮೇಲೆ ಜವಾಬ್ದಾರಿ

  ಕರಣ್ ಜೋಹರ್ ಮೇಲೆ ಜವಾಬ್ದಾರಿ

  ಆಲಿಯಾ ಭಟ್ ರವರನ್ನ ಬೆಳ್ಳಿ ಪರದೆ ಮೇಲೆ ಪರಿಚಯಿಸಿ, ಅವರಿಗೆ ಭದ್ರ ಬುನಾದಿ ಹಾಕಿಕೊಟ್ಟ ಕರಣ್ ಜೋಹರ್ ಹೆಗಲ ಮೇಲೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಚೊಚ್ಚಲ ಚಿತ್ರದ ಜವಾಬ್ದಾರಿ ಹೊರಿಸಲಾಗಿದೆ.

  'ಶಿದ್ಧತ್' ಮೂಲಕ ಎಂಟ್ರಿ.?

  'ಶಿದ್ಧತ್' ಮೂಲಕ ಎಂಟ್ರಿ.?

  ವರದಿಗಳ ಪ್ರಕಾರ, ಕರಣ್ ಜೋಹರ್ ಮತ್ತು ಸಾಜಿದ್ ಜಾಯಿಂಟ್ ವೆಂಚರ್ ನಲ್ಲಿ ಮೂಡಿ ಬರುವ 'ಶಿದ್ಧತ್' ಚಿತ್ರದ ಮೂಲಕ ಜಾಹ್ನವಿ ಕಪೂರ್ ಬಣ್ಣ ಹಚ್ಚಲಿದ್ದಾರೆ.

  ವರುಣ್ ಧವನ್ ಹೀರೋ

  ವರುಣ್ ಧವನ್ ಹೀರೋ

  'ಶಿದ್ಧತ್' ಚಿತ್ರದಲ್ಲಿ ಜಾಹ್ನವಿ ಕಪೂರ್ ಜೊತೆ ರೋಮ್ಯಾನ್ಸ್ ಮಾಡುವ ಚಾನ್ಸ್ ವರುಣ್ ಧವನ್ ಗೆ ಸಿಕ್ಕಿದೆ ಎನ್ನಲಾಗಿದೆ.

  ತ್ರಿಕೋನ ಪ್ರೇಮ ಕಥೆ?

  ತ್ರಿಕೋನ ಪ್ರೇಮ ಕಥೆ?

  ಜಾಹ್ನವಿ ಕಪೂರ್ ಅಭಿನಯಿಸಲಿರುವ ಚೊಚ್ಚಲ ಸಿನಿಮಾ `ಶಿದ್ದತ್', ಟ್ರಯಾಂಗಲ್‌ ಲವ್‌ ಸ್ಟೋರಿಯಾಗಿದ್ದು, ಇದರಲ್ಲಿ ಇಬ್ಬರು ನಾಯಕರು ಇರಲಿದ್ದಾರೆ ಅಂತ ಕೂಡ ವರದಿ ಆಗಿದೆ.

  ಆಲಿಯಾ ಪಾಲು ಈಗ ಜಾಹ್ನವಿಗೆ?

  ಆಲಿಯಾ ಪಾಲು ಈಗ ಜಾಹ್ನವಿಗೆ?

  ಹಾಗ್ನೋಡಿದ್ರೆ, 'ಶಿದ್ಧತ್' ಚಿತ್ರದಲ್ಲಿ ಆಲಿಯಾ ಭಟ್‌ ಹಾಗೂ ಅರ್ಜುನ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಬೇಕಿತ್ತು. ಆದ್ರೀಗ, ಆಲಿಯಾ ಜಾಗಕ್ಕೆ ಜಾಹ್ನವಿ ಕಪೂರ್ ಗೆ ಕರಣ್ ಜೋಹರ್ ರೆಡ್ ಕಾರ್ಪೆಟ್ ಹಾಸಿದ್ದಾರೆ. ನಾಯಕಿ ಬದಲಾದ್ದರಿಂದ ಅರ್ಜುನ್ ಕಪೂರ್ ಬದಲಿಗೆ ವರುಣ್ ಧವನ್ ಗೆ ಅವಕಾಶ ಸಿಕ್ಕಂತಾಗಿದೆ.

  'ಶಿದ್ಧತ್'ನಲ್ಲಿ ಮಾಧುರಿ ದೀಕ್ಷಿತ್?

  'ಶಿದ್ಧತ್'ನಲ್ಲಿ ಮಾಧುರಿ ದೀಕ್ಷಿತ್?

  ಎಲ್ಲವೂ ಕರಣ್ ಜೋಹರ್ ಪ್ಲಾನ್ ಪ್ರಕಾರ ನಡೆದರೆ, 'ಶಿದ್ಧತ್' ಚಿತ್ರದಲ್ಲಿ ಜಾಹ್ನವಿ ಕಪೂರ್ ಅಮ್ಮನ ಪಾತ್ರದಲ್ಲಿ ಮಾಧುರಿ ದೀಕ್ಷಿತ್ ಅಭಿನಯಿಸಲಿದ್ದಾರೆ.

  `ಶಿದ್ದತ್' ಯಾವಾಗ ಶುರು.?

  `ಶಿದ್ದತ್' ಯಾವಾಗ ಶುರು.?

  ಸದ್ಯ, ವರುಣ್‌ ಧವನ್ ಕೈಯಲ್ಲಿ 'ಜುಡ್ವಾ-2' ಚಿತ್ರ ಇದೆ. ಅದು ಮುಗಿದ ಬಳಿಕ 'ಶಿದ್ಧತ್'ಗೆ ಚಾಲನೆ ಸಿಗಲಿದೆ.

  English summary
  Bollywood Actress Sridevi's daughter Jahnavi Kapoor is all set to make Bollywood Debut with the movie 'Shiddat' opposite Varun Dhawan under Karan Johar production.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X