For Quick Alerts
  ALLOW NOTIFICATIONS  
  For Daily Alerts

  ಸುಶ್ಮಿತಾ ಸೇನ್ ಕೋಟಿ, ಕೋಟಿ ಆಸ್ತಿಯ ಒಡತಿ!

  |

  ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ರೋಹ್ಮನ್ ಜೊತೆ ಬ್ರೇಕಪ್ ಮಾಡಿಕೊಂಡು ಸುದ್ದಿ ಆಗಿದ್ದರು. ಈಗ ಲಲಿತ್ ಮೋದಿ ಜೊತೆ ಸುಶ್ಮಿತಾ ಸೇನ್ ಡೇಟಿಂಗ್ ಮಾಡುತ್ತಿರುವುದು ಬಹಿರಂಗವಾಗಿದೆ.

  ಸ್ವತಃ ಲಲಿತ್ ಮೋದಿ ,ಸುಶ್ಮಿತಾ ಸೆನ್ ಜೊತೆಗೆ ಡೇಟಿಂಗ್ ನಡೆಸುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. 46 ವರ್ಷದ ಈ ಚೆಲುವೆ ಹೊಸ ಲವ್ ಸ್ಟೋರಿ ಜೊತೆಗೆ ಈಕೆಯ ಆಸ್ತಿ ಮೌಲ್ಯ ಎಷ್ಟು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಸುಶ್ಮಿತಾ ಸೇನ್ ಕೋಟಿ, ಕೋಟಿ ಆಸ್ತಿಯ ಒಡತಿ.

  ಸುಶ್ಮಿತಾ ಸೇನ್ ಅವರು ಚಲನಚಿತ್ರಗಳು ಮತ್ತು ವೆಬ್ ಸೀರಿಸ್ ಮೂಲಕ ಸಾಕಷ್ಟು ಆಸ್ತಿ ಗಳಿಸಿದ್ದಾರೆ. 18ನೇ ವಯಸ್ಸಿನಲ್ಲಿ ವಿಶ್ವ ಸುಂದರಿ ಪಟ್ಟ ಗೆದ್ದಿರುವ ಸುಶ್ಮಿತಾ ಕೋಟಿಗಟ್ಟಲೆ ಆಸ್ತಿಯ ಒಡತಿ ಎನ್ನಲಾಗಿದೆ.

  ಐಷಾರಾಮಿ ಕಾರುಗಳನ್ನು ಹೊಂದಿರುವ ನಟಿ!

  ಸುಶ್ಮಿತಾ ಸೇನ್ ಪ್ರತಿ ತಿಂಗಳು ಸುಮಾರು 60 ಲಕ್ಷ ರೂ ನಿವ್ವಳ ಆದಾಯ ಗಳಿಕೆ ಮಾಡುತ್ತಾರಂತೆ. ಅಲ್ಲದೇ ಸುಶ್ಮಿತಾ ಒಂದು ಚಿತ್ರಕ್ಕೆ 3 ರಿಂದ 4 ಕೋಟಿ ಸಂಭಾವನೆ ಪಡೆಯುತ್ತಾರೆ. ಜೊತೆಗೆ ಒಂದು ಜಾಹೀರಾತಿನಿಂದ ಸುಮಾರು 1.5 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ.

  ಸುಶ್ಮಿತಾ ಸೇನ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಅವರು BMW 7 ಸಿರೀಸ್ 730Ld ಅನ್ನು ಹೊಂದಿದ್ದಾರೆ, ಇದರ ಬೆಲೆ 1.42 ಕೋಟಿ ರೂ. ಆಗಿದೆ. ಉಳಿದಂತೆ BMW X6 ಅನ್ನು ಹೊಂದಿದ್ದಾರೆ, ಅದರ ಬೆಲೆ 1 ಕೋಟಿ ರೂ. ಇದಲ್ಲದೆ, Audi Q7 ಬೆಲೆ ಸುಮಾರು 89.90 ಲಕ್ಷ ಮತ್ತು ಲೆಕ್ಸಸ್ LX 470 35 ಲಕ್ಷ ಬೆಲೆಯ ಕಾರುಗಳನ್ನು ಹೊಂದಿದ್ದಾರಂತೆ.

  74 ಕೋಟಿ. ರೂ ನಿವ್ವಳ ಆಸ್ತಿ!

  ಕೇವಲ ಜಾಹೀರಾತು ಮತ್ತು ನಟನೆಯ ಹೊರತಾಗಿಯೂ ಸುಶ್ಮಿತಾ ಸೇನ್ ಅವರು ತಂತ್ರ ಎಂಟರ್‌ಟೈನ್‌ಮೆಂಟ್ ಎಂಬ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ಸಹ ನಡೆಸುತ್ತಿದ್ದಾರೆ. ಸುಶ್ಮಿತಾ ಸೇನ್ ದುಬೈನಲ್ಲಿ ಆಭರಣ ಮಳಿಗೆಯನ್ನು ಹೊಂದಿರುವುದಾಗಿ ವರದಿಯಾಗಿದೆ.

  Actress Sushmita Sen Net Worth 74 Crore

  1996ರಲ್ಲಿ 'ದಸ್ತಕ್' ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು, ಇಲ್ಲಿಯವರೆಗೆ ಅನೇಕ ಚಲನಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಆ ಮೂಲಕ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.

  ಚಲನಚಿತ್ರಗಳು, ವೆಬ್ ಸರಣಿಗಳು ಮತ್ತು ಜಾಹೀರಾತುಗಳ ಮೂಲಕ ಸುಶ್ಮಿತಾ ಸೇನ್ ಅಪಾರ ಪ್ರಮಾಣದ ಆಸ್ತಿಯನ್ನು ಗಳಿಸಿದ್ದು, ಸುಶ್ಮಿತಾ ಸೇನ್ ಅವರ ನಿವ್ವಳ ಮೌಲ್ಯ ಸುಮಾರು 74 ಕೋಟಿ ರೂ. ಎಂದು ಕೆಲ ವರದಿಗಳು ತಿಳಿಸಿವೆ.

  English summary
  Actress Sushmita Sen Net Worth 74 Crore, Know More,
  Saturday, July 16, 2022, 10:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X