For Quick Alerts
  ALLOW NOTIFICATIONS  
  For Daily Alerts

  ಭುವನ ಸುಂದರಿ ಸುಶ್ಮಿತಾ ಸೇನ್ ಎರಡನೇ ಇನ್ನಿಂಗ್ಸ್

  By Rajendra
  |

  ಸುದೀರ್ಘ ಸಮಯದ ಬಳಿಕ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಮತ್ತೆ ಬಣ್ಣ ಹಚ್ಚಿಕೊಳ್ಳಲು ಸಿದ್ಧವಾಗಿದ್ದಾರೆ. ಅಂದಹಾಗೆ ಅವರು ಅರಿಶಿಣ ಹಚ್ಚಿಕೊಳ್ಳುವ ಸುದ್ದಿ ಮಾತ್ರ ಇನ್ನೂ ಹರಿದಾಡುತ್ತಲೇ ಇದೆ. ಇಸವಿ 2010ರಲ್ಲಿ ತೆರೆಕಂಡ 'ನೋ ಪ್ರಾಬ್ಲಂ' ಚಿತ್ರದ ಬಳಿಕ ಅವರು ಬೆಳ್ಳಿಪರದೆಯಿಂದ ನಾಪತ್ತೆಯಾಗಿದ್ದರು. ಈಗ ಮತ್ತೆ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ.

  ತಮ್ಮ ಮೋಹಕ ನೋಟದಿಂದ ತೊಂಬತ್ತರ ದಶಕದಲ್ಲಿ ಒಂದಷ್ಟು ಅಭಿಮಾನಿಗಳ ನಿದ್ದೆಗೆ ಸಂಚಕಾರ ತಂದಿದ್ದ ತಾರೆ ಸುಶ್ಮಿತಾ. ಈಗ ಬೆಳ್ಳಿತೆರೆಗೆ ಮರಳುತ್ತಿರುವುದು ಅವರ ಅಭಿಮಾನಿಗಳು ಮತ್ತೆ ಚಿತ್ರಮಂದಿರದ ಕಡೆ ತಲೆಹಾಕಿ ಮಲಗುವಂತಾಗಿದೆ.

  ತಮ್ಮ ಮೈತೂಕ ಹೆಚ್ಚುಕಡಿಮೆಯಾಗದಂತೆ ಹಾಗೂ ಸೊಂಟದ ಸುತ್ತಳತೆ ಅಳತೆ ಮೀರದಂತೆ ಕಾಪಾಡಿಕೊಂಡಿರುವ ಕೆಲವೇ ಕೆಲವು ನಟಿಯರಲ್ಲಿ ಸುಶ್ಮಿತಾ ಸೇತ್ ಸಹ ಒಬ್ಬರು. ಈಗ 37ರ ಹರೆಯದಲ್ಲೂ ಹೊಸ ಲುಕ್ ನೊಂದಿಗೆ ಮರಳುತ್ತಿದ್ದಾರೆ.

  ಇತ್ತೀಚೆಗೆ ಅವರು ಇಂಡಿಯನ್ ಇಂಟರ್ ನ್ಯಾಶನಲ್ ಜ್ಯುಯೆಲರಿ ವೀಕ್ ನಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಚಿತ್ರರಂಗಕ್ಕೆ ಮರಳುತ್ತಿರುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಲಂಗ ದಾವಣಿಯಲ್ಲಿ ಮಿಂಚುತ್ತಿದ್ದ ಅವರು ಚಿನ್ನಾಭರಣಗಳನ್ನು ಪ್ರದರ್ಶಿಸಿ ಎಲ್ಲರ ಗಮನಸೆಳೆದರು.

  ಅಂದಹಾಗೆ ಸುಶ್ಮಿತಾ ಮೂರು ವರ್ಷ ಯಾವುದೇ ಚಿತ್ರಗಳಲ್ಲಿ ಅಭಿನಯಿಸದೆ ಏನು ಕಡಿದು ಕಟ್ಟೆಹಾಕುತಿದ್ದರು? ಇಷ್ಟು ವರ್ಷ ಅವರೇನು ಸುಮ್ಮನೆ ಕೂತಿರಲಿಲ್ಲ. ತಮ್ಮ ಎರಡನೇ ದತ್ತು ಮಗು ಅಲಿಷಾರ ಆರೈಕೆಯಲ್ಲಿ ಕಳೆದಿದ್ದಾರೆ. ಈಗ ಅಲಿಷಾಗೆ ಮೂರು ವರ್ಷ. ಈ ಸಂದರ್ಭದಲ್ಲಿ ಮರಳಿ ಬಣ್ಣ ಹಚ್ಚಿಕೊಳ್ಳವ ಆಸೆ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕರ ನಿರೀಕ್ಷೆಯಲ್ಲಿದ್ದಾರೆ.

  English summary
  The B-Town is flooded with newcomers and the audiences are missing some of the earlier stars. Well, here is some good news for all those who have missed Sushmita Sen. This 90s' diva is all set to make a comeback in the film industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X