»   » ಹೊಟ್ಟೆ ನೋವು ನಟಿ ಟ್ವಿಂಕಲ್ ಖನ್ನಾಗೆ ಶಸ್ತ್ರಚಿಕಿತ್ಸೆ

ಹೊಟ್ಟೆ ನೋವು ನಟಿ ಟ್ವಿಂಕಲ್ ಖನ್ನಾಗೆ ಶಸ್ತ್ರಚಿಕಿತ್ಸೆ

Posted By:
Subscribe to Filmibeat Kannada

ಬಾಲಿವುಡ್ ಆಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ಅಸಾಧ್ಯ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಟ್ವಿಂಕಲ್ ಅವರಿಗೆ ಎಡಬಿಡದೆ ಹೊಟ್ಟೆ ನೋವು ಬರುತ್ತಿದ್ದ ಕಾರಣ ಅವರನ್ನು ಸೌತ್ ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರನ್ನು ಸ್ಕ್ಯಾನಿಂಗ್ ಗೆ ಒಳಪಡಿಸಿದಾಗ ಕಿಡ್ನಿಯಲ್ಲಿ ಕಲ್ಲುಗಳಿರುವುದು ಪತ್ತೆಯಾಗಿದೆ. ಕೂಡಲೆ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಈಗ ಅವರು ಆರೋಗ್ಯವಾಗಿದ್ದು ಇನ್ನೂ ಕೆಲ ದಿನಗಳ ಮಟ್ಟಿಗೆ ಆಸ್ಪತ್ರೆಯಲ್ಲೇ ಉಳಿಯಬೇಕಾಗಿದೆ. [ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಗೆ ಹೆಣ್ಣು ಮಗು]

Akshay, Twinkle

ಇನ್ನೊಂದು ಕಡೆ ಅಕ್ಷಯ್ ಕುಮಾರ್ ಸಖತ್ ಬಿಜಿಯಾಗಿದ್ದ ಕಾರಣ ಪತ್ನಿಯ ಆರೋಗ್ಯವನ್ನು ಆಗಾಗ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿಕೊಳ್ಳುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಎರಡು ವರ್ಷಗಳ ಹಿಂದಷ್ಟೇ ಟ್ವಿಂಕಲ್ ಖನ್ನಾಗೆ ಹೆಣ್ಣು ಮಗುವಾಗಿತ್ತು.

ಅಕ್ಷಯ್ ಜೊತೆ ಮದುವೆಯಾದ ಬಳಿಕ ಟ್ವಿಂಕಲ್ ಖನ್ನಾ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದರು. ಅವರು ಇಷ್ಟು ದಿನ ಇಂಟೀರಿಯರ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೀಘ್ರದಲ್ಲೇ ಟ್ವಿಂಕಲ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. (ಏಜೆನ್ಸೀಸ್)

English summary
Bollywood actor Twinkle Khanna is recently said to have undergone a surgery at a hospital in South Mumbai after she constantly complained of recurring stomach aches.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada