For Quick Alerts
  ALLOW NOTIFICATIONS  
  For Daily Alerts

  'ಐರಾವತ' ನಾಯಕಿ ಊರ್ವಶಿ ಫೇಸ್ ಬುಕ್ ಖಾತೆ ಹ್ಯಾಕ್

  |

  ಬಾಲಿವುಡ್ ನ ಹಾಟ್ ನಟಿ ಊರ್ವಶಿ ರೌತೇಲಾ ಅವರ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದೆ. ಈ ಬಗ್ಗೆ ನಟಿ ಊರ್ವಶಿ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ತನ್ನ ಫೇಸ್ ಬುಕ್ ಖಾತೆಯಿಂದ ಬಂದ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸದಂತೆ ನಟಿ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

  ಈ ಬಗ್ಗೆ ಟ್ವಿಟ್ಟರ್ ನಲ್ಲಿ ನಟಿ ಊರ್ವಶಿ "ನನ್ನ ಫೇಸ್ ಬುಕ್ ಅನ್ನು ಹ್ಯಾಕ್ ಮಾಡಲಾಗಿದೆ. ದಯವಿಟ್ಟು ಯಾವುದೆ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ಯಾಕಂದ್ರೆ ಪೋಸ್ಟ್ ಗಳನ್ನು ನಾನಾಗಲಿ ಅಥವಾ ನನ್ನ ಫೇಸ್ ಬುಕ್ ತಂಡದಿಂದ ಮಾಡ್ಪಟ್ಟಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

  ಊರ್ವಶಿ ಫೇಸ್ ಬುಕ್ ನಿಂದ ಅಶ್ಲೀಲಾ ಪೋಸ್ಟ್ ಗಳು ಬರಲು ಪ್ರಾರಂಭಿಸಿದೆ. ಇದರಿಂದ ತಕ್ಷಣ ಎಚ್ಚತ್ತುಕೊಂಡ ನಟಿ ಹ್ಯಾಕ್ ಆಗಿರುವ ಬಗ್ಗೆ ಗೊತ್ತಾಗುತ್ತಿದಂತೆ, ಸೈಬರ್ ಕ್ರೈಮ್ ಗೆ ದೂರು ಸಲ್ಲಿಸಿದ್ದಾರೆ.

  ನಂತರ ಈ ವಿಷಯದ ಬಗ್ಗೆ ತಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಮುಂಬೈ ಪೊಲೀಸರು ಊರ್ವಶಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮುಂಬೈ ಪೊಲೀಸರು "ನಾವು ನಿಮ್ಮ ದೂರನ್ನು ಸೈಬರ್ ಪೊಲೀಸ್ ಠಾಣೆಗೆ ಕಳುಹಿಸಿದ್ದೇವೆ" ಎಂದು ಹೇಳಿದ್ದಾರೆ.

  Actress Urvashi Rautela Facebook Account Hacked

  ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀವ್ ಆಗಿರುವ ನಟಿ ಊರ್ವಶಿ ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಹಾಟ್ ಫೋಟೋಗಳ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ಊರ್ವಶಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.

  English summary
  Bollywood Actress Urvashi Rautela facebook account hacked.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X