For Quick Alerts
  ALLOW NOTIFICATIONS  
  For Daily Alerts

  'ಆದಿಪುರುಷ್' ಸೆಟ್ಟಲ್ಲಿ ಪ್ರಭಾಸ್ ಹೃದಯ ಗೆದ್ದ ಕೃತಿ ಸನನ್: ಡೇಟಿಂಗ್ ಬಗ್ಗೆ ಏನಿದು ಸುದ್ದಿ?

  |

  ಡಾರ್ಲಿಂಗ್ ಪ್ರಭಾಸ್ ಹಾಗೂ ಕೃತಿ ಸನನ್ ಇಬ್ಬರೂ ಬಾಲಿವುಡ್‌ಗೆ ಫ್ರೆಶ್ ಜೋಡಿ. 'ಆದಿಪುರುಷ್' ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸುತ್ತಿದೆ. ರಾಮನ ಅವತಾರದಲ್ಲಿ ಪ್ರಭಾಸ್ ನಟಿಸುತ್ತಿದ್ದರೆ, ಅತ್ತ ಸೀತೆಯಾಗಿ ಕೃತಿ ಸನನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಶುರುವಾಗಿ ಮುಗಿಯುವ ಹಂತಕ್ಕೆ ಬಂದಿದೆ. ಆಗಲೇ ಬಾಲಿವುಡ್‌ನಲ್ಲಿ ಫ್ರೆಶ್ ಸುದ್ದಿಯೊಂದು ಓಡಾಡುತ್ತಿದೆ.

  ಪ್ರಭಾಸ್ ಹಾಗೂ ಕೃತಿ ಇಬ್ಬರೂ ತೆರೆಮೇಲಷ್ಟೇ ಅಲ್ಲ. ತೆರೆ ಹಿಂದೆನೂ ಬೇಜಾನ್ ಸದ್ದು ಮಾಡುತ್ತಿದ್ದೆ. ಬಾಲಿವುಡ್‌ನಲ್ಲಿ ಪ್ರಭಾಸ್ ಹಾಗೂ ಕೃತಿಯ ಡೇಟಿಂಗ್ ಮ್ಯಾಟರ್ ಹಲ್‌ಚಲ್ ಎಬ್ಬಿಸಿದೆ. ಈ ವಿಷಯವನ್ನು ಬಾಲಿವುಡ್ ಸುದ್ದಿಯನ್ನು ಬಿತ್ತರಿಸುವ ವೆಬ್‌ ಸೈಟ್‌ವೊಂದು ರಿವೀಲ್ ಮಾಡುತ್ತಿದ್ದಂತೆ ಬಾಲಿವುಡ್ ಹಾಗೂ ಟಾಲಿವುಡ್ ಇವರಿಬ್ಬರ ಬಗ್ಗೆನೇ ಚರ್ಚೆ ಶುರುವಾಗಿದೆ.

  ಅಷ್ಟಕ್ಕೂ ಪ್ರಭಾಸ್ ಹಾಗೂ ಕೃತಿ ಸನನ್ ಇಬ್ಬರ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರ ನಡುವೆ ಏನೋ ನಡೀತಿದೆ ಅನ್ನೋದು 'ಕಾಫಿ ವಿತ್ ಕರಣ್' ಸೀಸನ್ 7 ಶೋನಲ್ಲಿ ರಿವೀಲ್ ಆಗಿದೆ. ಇಷ್ಟೆಲ್ಲಾ ಸುದ್ದಿ ಹಬ್ಬುವುದಕ್ಕೆ ಕಾರಣ ಇದೇ ಟಾಕ್ ಶೋ. ಅಸಲಿಗೆ ಆ ಟಾಕ್ ಶೋನಲ್ಲಿ ಏನಾಯ್ತು? ಪ್ರಭಾಸ್,ಕೃತಿ ಡೇಟಿಂಗ್ ಬಗ್ಗೆ ಏನಂತಿದೆ ಬಾಲಿವುಡ್ ತಿಳಿಯಲು ಮುಂದೆ ಓದಿ.

  ಒಂದೇ ಒಂದು ಪೋನ್ ಕಾಲ್

  ಒಂದೇ ಒಂದು ಪೋನ್ ಕಾಲ್

  ಅಷ್ಟಕ್ಕೂ ಡಾರ್ಲಿಂಗ್ ಡೇಟಿಂಗ್ ಕಹಾನಿ ಹುಟ್ಟಿಕೊಳ್ಳೋಕೆ ಕಾರಣನೇ 'ಕಾಫಿ ವಿತ್ ಕರಣ್' ಸೀಸನ್ 7. ಈ ಟಾಕ್ ಶೋಗೆ ಕೃತಿ ಸನನ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಟಾಸ್ಕ್ ಒಂದರನ್ನು ಅತಿಥಿಗಳು ಸೆಲೆಬ್ರೆಟಿಗಳಿಗೆ ಫೋನ್ ಮಾಡಿ ಕರಣ್ ಜೊತೆ ಮಾತಾಡಿಸಬೇಕು. ಈ ವೇಳೆ ಕೃತಿ ಸನನ್ ಸೀದಾ ಪ್ರಭಾಸ್‌ಗೆ ಕರೆ ಮಾಡಿದ್ದರು. ಪ್ರಭಾಸ್ ತಕ್ಷಣವೇ ಕೃತಿ ಸನನ್ ಪೋನ್ ಕಾಲ್ ಅನ್ನು ರಿಸೀವ್ ಮಾಡಿದ್ದರು. ಇಲ್ಲಿಂದ ಇಬ್ಬರ ನಡುವೆ ಏನೋ ನಡೀತಿ ಅನ್ನೋ ಅನುಮಾನ ಹೆಚ್ಚಾಗಿತ್ತು. ಸದ್ಯ ಹೊಸ ಜೋಡಿಯನ್ನುಒಟ್ಟಿಗೆ ನೋಡುವುದಕ್ಕೆ ಬಾಲಿವುಡ್ ಎದುರು ನೋಡುತ್ತಿದೆ." ಎಂದು ಬಾಲಿವುಡ್ ಲೈಫ್ ವರದಿ ಮಾಡಿದೆ.

  ಕೃತಿ-ಪ್ರಭಾಸ್ ಬಗ್ಗೆ ಏನಿದೆ ಸುದ್ದಿ?

  ಕೃತಿ-ಪ್ರಭಾಸ್ ಬಗ್ಗೆ ಏನಿದೆ ಸುದ್ದಿ?

  ಬಾಲಿವುಡ್‌ ಮೂಲಗಳು ವೈಬ್‌ಸೈಟ್‌ಗೆ ಇವರಿಬ್ಬರ ಡೇಟಿಂಗ್ ವಿಷಯವನ್ನು ರಿವೀಲ್ ಮಾಡಿದೆ. " ಆದಿಪುರುಷ್ ಸೆಟ್ಟಿಗೆ ಬಂದ ಮೊದಲ ದಿನದಿಂದ ಪ್ರಭಾಸ್ ಹಾಗೂ ಕೃತಿ ಸನನ್ ಇಬ್ಬರ ಬಾಂಡಿಂಗ್ ಚೆನ್ನಾಗಿದೆ. ನಾಚಿಕೆ ಸ್ವಭಾವದ ಪ್ರಭಾಸ್ ಆರಾಮಾಗಿ ಕೃತಿ ಸನನ್ ಜೊತೆ ಮಾತಾಡುತ್ತಿರುವುದನ್ನು ನೋಡಿ ಎಲ್ಲರಿಗೂ ಅಚ್ಚರಿ ಆಗಿತ್ತು. ಇಬ್ಬರ ಸ್ನೇಹ ಮತ್ತೊಂದು ಹಂತಕ್ಕೆ ಹೋಗಿದೆ ಅನ್ನೋ ನಿರ್ಧಾರಕ್ಕೆ ಆತುರ ಎನಿಸಬಹುದು. ಅವರಿಬ್ಬರೂ ತುಂಬಾ ತುಂಬಾ ನಿಧಾನವಾಗಿ ಹೆಜ್ಜೆ ಇಡುತ್ತಿದ್ದಾರೆ." ಎಂದು ಹೇಳಿದ್ದಾರೆ.

  ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಾರೆ

  ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಾರೆ


  "ಪ್ರಭಾಸ್ ಹಾಗೂ ಕೃತಿ ಸನನ್ ಇಬ್ಬರೂ ಸೆಟ್ಟಿನಲ್ಲಿ ಹೆಚ್ಚು ಹೊತ್ತು ಒಟ್ಟಿಗೆ ಕಳೆಯಲು ಇಷ್ಟ ಪಡುತ್ತಿದ್ದರು. ತಮ್ಮ ಮೊದಲ ಸಿನಿಮಾದಲ್ಲಿ ಅವರು ಸಿನಿಮಾದ ಕ್ರಿಯೇಟಿವಿ ವಿಚಾರದಲ್ಲೂ ತಲೆಕೆಡಿಸಿಕೊಂಡಿದ್ದರು. ಇಬ್ಬರೂ ಒಂದು ಸೀನ್ ಅನ್ನು ಶೂಟ್ ಮಾಡುವಾಗಲೂ ಒಪ್ಪಿಗೆ ಪಡೆದುಕೊಳ್ಳುತ್ತಿದ್ದರು. ಸೀನ್ ಸರಿ ಬಾರದೆ ಹೋದಲ್ಲಿ ಇಬ್ಬರೂ ಒಪ್ಪಿಗೆ ಮೇರೆಗೆ ಆ ಸೀನ್ ಅನ್ನು ರೀ ಶೂಟ್ ಮಾಡುತ್ತಿದ್ದರು." ಎಂದು ಮೂಲಗಳ ಬಾಲಿವುಡ್ ಲೈಫ್‌ ವೆಬ್ ಸೈಟ್‌ಗೆ ರಿವೀಲ್ ಮಾಡಿದ್ದಾರೆ.

  ಪ್ರಭಾಸ್-ಕೃತಿ ಒಡನಾಟ

  ಪ್ರಭಾಸ್-ಕೃತಿ ಒಡನಾಟ

  'ಆದಿಪುರುಷ್' ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದೆ. ಆದರೂ, ಇಬ್ಬರ ಸ್ನೇಹ ಹಾಗೇ ಮುಂದುವರೆದಿದೆ. ಇಬ್ಬರೂ ನಿರಂತರವಾಗಿ ಪೋನ್ ಹಾಗೂ ಮೆಸೇಜ್‌ಗಳನ್ನು ಮಾಡುತ್ತಲೇ ಇರುತ್ತಾರೆ. ತಮ್ಮ ಸಂಬಂಧ ಸಹಜವಾಗಿಯೇ ಮುಂದುವರೆಯಲಿ ಎಂದು ಬಯಸಿದ್ದರೋ ಬಗ್ಗೆನೂ ವರದಿಯಾಗಿದೆ. 'ಬಾಹುಬಲಿ' ಸಿನಿಮಾ ವೇಳೆನೂ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಮದುವೆ ಆಗೇ ಬಿಡುತ್ತಾರೆ ಅಂತ ಸುದ್ದಿ ಹಬ್ಬಿತ್ತು. ಆದರೆ, ಇಬ್ಬರೂ ಈ ವಿಚಾರವನ್ನು ಅಲ್ಲಗೆಳೆದಿದ್ದರು.

  English summary
  Adipurush Stars Kriti Sanon And Prabhas Are Dating: Here Is The Speculations, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X