»   » ರಾಕ್ ಲೈನ್ ನಿರ್ಮಾಣದಲ್ಲಿ ರೋಹಿತ್ ಶೆಟ್ಟಿ ಹಿಂದಿ ಚಿತ್ರ

ರಾಕ್ ಲೈನ್ ನಿರ್ಮಾಣದಲ್ಲಿ ರೋಹಿತ್ ಶೆಟ್ಟಿ ಹಿಂದಿ ಚಿತ್ರ

Posted By:
Subscribe to Filmibeat Kannada

ಕನ್ನಡ ಫಿಲ್ಮ್ ಇಂಡಸ್ಟ್ರಿಯ ಖ್ಯಾತ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಕನ್ನಡೇತರ ಚಿತ್ರಗಳಿಗೂ ಹಣ ಹಾಕುತ್ತಿದ್ದಾರೆ. ಇದಕ್ಕೊಂದು ಉತ್ತಮ ನಿದರ್ಶನ ಅಂದ್ರೆ, ಇವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರದ ಅಧಿಕೃತ ಟ್ರೈಲರ್ ಇತ್ತೀಚಿಗೆ ರಿಲೀಸ್ ಆಗಿ, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಲ್ಮಾನ್ ಖಾನ್ ನಾಯಕತ್ವದ ಚಿತ್ರ ಸಕ್ಸಸ್ ಆಗೇ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿರುವ ರಾಕ್ ಲೈನ್ ಈಗ ಮತ್ತೊಂದು ಹಿಂದಿ ಚಿತ್ರಕ್ಕೆ ಹಣಹೂಡುತ್ತಿದ್ದಾರೆ.

ಸಲ್ಮಾನ್ ಖಾನ್' ನ ಭಜರಂಗಿ ಭಾಯಿಜಾನ್ ಇದೇ ರಂಜಾನ್ ಗೆ ತೆರೆಗೆ ಬರಲಿದ್ದು, ಇಲ್ಲಿ ಸಲ್ಲೂ ಅಭಿಮಾನಿಗಳು ಮಾತ್ರವಲ್ಲದೆ, ಕನ್ನಡ ಪ್ರೇಕ್ಷಕರಾದ ವೆಂಕಟೇಶ್ ಅಭಿಮಾನಿಗಳು ಚಿತ್ರದ ರಿಲೀಸ್ ಗೆ ಕಾಯುತ್ತಿದ್ದಾರೆ. ['ಭಜರಂಗಿ...' ಶೂಟಿಂಗ್ ಕ್ಯಾನ್ಸಲ್; ಸಲ್ಲುಗೆ ಏನಾಯ್ತು?]

After Bajrangi Bhaijaan, Rockline Venkatesh To Produce Rohit Shetty's Next!

ಇನ್ನೂ ಇತ್ತೀಚೆಗೆ ಬಂದಂಥ ಸುದ್ದಿಯ ಪ್ರಕಾರ ಚಿತ್ರನಿರ್ಮಾಪಕ ವೆಂಕಟೇಶ್ ಭಜರಂಗಿ ಭಾಯಿಜಾನ್ ನಂತರ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂದಿನ ಚಿತ್ರಕ್ಕೆ ಹಣ ಸುರಿಯಲಿದ್ದಾರಂತೆ. ವಾವ್ ಇದು ಕನ್ನಡಿಗರಿಗೆ ಗುಡ್ ನ್ಯೂಸ್ ಅಲ್ವಾ?ಕಂಗ್ರಾಟ್ಸ್ ವೆಂಕಟೇಶ್.

ರಾಕ್ ಲೈನ್ ವೆಂಕಟೇಶ್ ಕನ್ನಡ ಚಿತ್ರರಂಗದ ನಟ ಕಮ್ ಪ್ರೊಡ್ಯೂಸರ್, ಇವರು ನಟಿಸಿದ ಚಿತ್ರ "ಡಕೋಟಾ ಎಕ್ ಪ್ರೆಸ್' ಇವರ ಅಭಿಮಾನಿಗಳಿಗೆ ಈಗಲೂ ಫೇವರಿಟ್ ಚಿತ್ರ. ಇವರ ಹಾರ್ಡ್‍ವರ್ಕ್ ಹಾಗೂ ಸಕ್ಸಸ್ ಇವರನ್ನ ನಂ.1 ಪ್ರೊಡ್ಯೂಸರ್ ಪಟ್ಟಕ್ಕೆ ಏರಿಸಿದೆ ನಮ್ ಕನ್ನಡ ಇಂಡಸ್ಟ್ರಿ. ಇದಕ್ಕೆ ಪಕ್ಕಾ ಉದಾಹರಣೆ ಅಂದ್ರೆ ಇವರು ನಿರ್ಮಾಣ ಮಾಡಿದ ಪವರ್, ಡ್ರಾಮಾ, ಲಿಂಗಾ, ಸೂಪರ್, ಮನಸಾರೆ, ದಿಗ್ಗಜರು, ಬೊಂಬಾಟ್, ಸೇರಿದಂತೆ ಇನ್ನೂ ಅನೇಕ ಚಿತ್ರಗಳು ಹಿಟ್ ಆಗಿವೆ.

English summary
Rockline Venkatesh is making huge rounds in web world. He is in limelight as he is producing Bajrangi Bhaijaan. Recently, Bajrangi Bhaijaan's official trailer was launched and the promising video clip depicts Rockline Venkatesh is assured to have a success through this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada