For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸಿನಿಮಾ ನಿರ್ಮಾಣಕ್ಕೆ ಮುಂದಾದ ಪವನ್ ಒಡೆಯರ್: ನಿರ್ದೇಶಕರೂ ಅವರೇ!

  |

  ಪವನ್ ಒಡೆಯರ್ ನಿರ್ದೇಶಿಸಿದ 'ಗೋವಿಂದಾಯ ನಮ:' ಸಿನಿಮಾ ರಿಲೀಸ್ ಆದಾಗಲೇ ಬಾಲಿವುಡ್‌ ಅಫರ್ ಬಂದಿತ್ತು. ಅಂದಿನಿಂದಲೂ ಪವನ್ ಒಡೆಯರ್ ಬಾಲಿವುಡ್‌ಗೆ ಹೋಗುತ್ತಾರೆ ಅನ್ನೋ ಮಾತು ಕೇಳಿ ಬರುತ್ತಲೇ ಇತ್ತು. ಆದ್ರೀಗ ಬಾಲಿವುಡ್ ಎಂಟ್ರಿ ಅಧಿಕೃತವಾಗಿದ್ದು, ಅಕ್ಟೋಬರ್‌ನಲ್ಲಿ ಶೂಟಿಂಗ್ ಆರಂಭ ಆಗುತ್ತಿದೆ.

  ಪವನ್ ಒಡೆಯರ್ ಈಗಾಗಲೇ ಬಾಲಿವುಡ್ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸವನ್ನು ಬಹುತೇಕ ಮುಗಿಸಿದ್ದಾರೆ. ಅದೇ ಇನ್ನೊಂದು ಕಡೆ ತಾವೇ ನಿರ್ಮಿಸಿದ ಮೊದಲ ಸಿನಿಮಾ 'ಡೊಳ್ಳು' ರಾಷ್ಟ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ. ಇದೇ ಸಿನಿಮಾ ಈಗ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಮೂಲಕ ಪವನ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

  'ಡೊಳ್ಳು' ಚಿತ್ರದ ಮೊದಲ ಹಾಡು ರಿಲೀಸ್: 'ಮಾಯಾನಗರಿ'ಯಲ್ಲಿ ಕಳೆದು ಹೋದ ಡಾಲಿ!'ಡೊಳ್ಳು' ಚಿತ್ರದ ಮೊದಲ ಹಾಡು ರಿಲೀಸ್: 'ಮಾಯಾನಗರಿ'ಯಲ್ಲಿ ಕಳೆದು ಹೋದ ಡಾಲಿ!

  'ಡೊಳ್ಳು' ಸಿನಿಮಾ ಮೂಲಕ ಪವನ್ ಒಡೆಯರ್ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಒಡೆಯರ್ ಮೂವೀಸ್ ಮೂಲಕ ಮೊದಲ ಬಾರಿ ನಿರ್ಮಾಣಕ್ಕೆ ಕೈ ಹಾಕಿ ಗೆದ್ದಿದ್ದಾರೆ. ಈಗ ತಮ್ಮದೇ ಸಂಸ್ಥೆಯಲ್ಲಿ ಎರಡನೇ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಈ ಬಾಲಿವುಡ್ ಸಿನಿಮಾ ಪವನ್ ಫಿಲ್ಮೀ ಬೀಟ್ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

  ಬಾಲಿವುಡ್‌ ಸಿನಿಮಾ ತಯಾರಿ ಜೋರು!

  ಬಾಲಿವುಡ್‌ ಸಿನಿಮಾ ತಯಾರಿ ಜೋರು!

  ಬಾಲಿವುಡ್ ಸಿನಿಮಾಗಾಗಿ ಪವನ್ ಒಡೆಯರ್ ಹಾಗೂ ಬಾಲಿವುಡ್ ತಂತ್ರಜ್ಞರು ಭರ್ಜರಿ ತಯಾರಿ ನಡೆಸಿದ್ದಾರೆ. ಈಗಾಗಲೇ ಸ್ಟೋರಿ ನರೇಷನ್‌ನಿಂದ ಹಿಡಿದು, ಶೂಟಿಂಗ್‌ಗೂ ಮುನ್ನ ನಡೆಯಬೇಕಿದ್ದ ಎಲ್ಲಾ ತಯಾರಿಗಳೂ ನಡೆಯುತ್ತಿದೆ. "ಅಕ್ಟೋಬರ್ 6ನೇ ತಾರೀಕಿನಿಂದ ಶೂಟಿಂಗ್ ಶುರುವಾಗುತ್ತಿದೆ. ಶೂಟಿಂಗ್ ಪೂರ್ತಿ ಮಧ್ಯಪ್ರದೇಶದಲ್ಲಿ ನಡೆಯಲಿದೆ. ಅದು ಒಡೆಯರ್ ಮೂವೀಸ್‌ನ ಎರಡನೇ ಸಿನಿಮಾ. ನಾನು ಮತ್ತು ಮುಂಬೈ ಪ್ರೊಡಕ್ಷನ್ ಕಂಪನಿ ಕಾಶ್ ಎಂಟರ್‌ಟೈನ್ಮೆಂಟ್ ಅಂತ 'ಶೇರ್‌ಷಾ' ಸಿನಿಮಾ ಮಾಡಿದ್ದಾರೆ. ಅವರದ್ದು ಹಾಗೂ ನನ್ನ ಸಂಸ್ಥೆ ಸೇರಿ ಈ ಸಿನಿಮಾ ಮಾಡುತ್ತಿದ್ದೇವೆ. " ಎನ್ನುತ್ತಾರೆ ಪವನ್ ಒಡೆಯರ್.

  ಪವನ್ ಒಡೆಯರ್ ಸಿನಿಮಾ ಡೊಳ್ಳುಗೆ ರಾಷ್ಟ್ರ ಪ್ರಶಸ್ತಿ: ಶೀಘ್ರದಲ್ಲಿಯೇ ಥಿಯೇಟರ್‌ನಲ್ಲಿ ರಿಲೀಸ್!ಪವನ್ ಒಡೆಯರ್ ಸಿನಿಮಾ ಡೊಳ್ಳುಗೆ ರಾಷ್ಟ್ರ ಪ್ರಶಸ್ತಿ: ಶೀಘ್ರದಲ್ಲಿಯೇ ಥಿಯೇಟರ್‌ನಲ್ಲಿ ರಿಲೀಸ್!

  ಪವನ್ ಸ್ಟಾರ್ ಕಾಸ್ಟ್ ಏನು?

  ಪವನ್ ಸ್ಟಾರ್ ಕಾಸ್ಟ್ ಏನು?

  "ಪರಂಬ್ರತಾ ಚಟರ್ಜಿ ಅಂತ ಕಹಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ಅನುಷ್ಕಾ ಶರ್ಮಾ ಜೊತೆ ಪರಿ ಅನ್ನೋ ಸಿನಿಮಾ ಮಾಡಿದ್ದರು. ನೆಟ್‌ಫ್ಲಿಕ್ಸ್‌ನಲ್ಲಿ 'ಅರಣ್ಯಾಕ್' ಅನ್ನೋ ವೆಬ್ ಸೀರಿಸ್ ಬಂದಿತ್ತು. ಅದರಲ್ಲಿ ಪರಂಬ್ರತಾ ಚಟರ್ಜಿ ಮತ್ತು ರವೀನಾ ಟಂಡನ್ ಇಬ್ಬರೂ ನಟಿಸಿದ್ದರು. ಹರ್ಬಜನ್ ಸಿಂಗ್ ಅವರ ಪತ್ನಿ ಗೀತಾ ಬಸ್ರಾ ಅವರು ಕಮ್ ಬ್ಯಾಕ್ ಮಾಡುತ್ತಿದ್ದಾರೆ." ಎಂದು ಸ್ಟಾರ್ ಕಾಸ್ಟ್ ಬಗ್ಗೆ ಪವನ್ ಒಡೆಯರ್ ಮಾಹಿತಿ ನೀಡಿದ್ದಾರೆ.

  ಯಾವಾಗಲೋ ಮಾಡ್ಬೇಕಿತ್ತು ಸಿನಿಮಾ!

  ಯಾವಾಗಲೋ ಮಾಡ್ಬೇಕಿತ್ತು ಸಿನಿಮಾ!

  "ಸಡನ್ ಆಗಿ ಅಂತೇನು ಇರಲಿಲ್ಲ. ಗೋವಿಂದಾಯ ನಮ: ಸಿನಿಮಾದಿಂದ ನನಗೆ ಹಿಂದಿಯಲ್ಲಿ ಸಿನಿಮಾ ಮಾಡಬೇಕು ಅನ್ನೋ ಆಫರ್ ಇತ್ತು. ಆಗಿನ ಕಾಲಕ್ಕೆ 'ಗೋವಿಂದಾಯ ನಮ:' ಆರು ಭಾಷೆಯಲ್ಲಿ ರಿಲೀಸ್ ಆಗಿತ್ತು. ಬಾಲಿವುಡ್ ನಟ ಗೋವಿಂದ ಅವರನ್ನು ಹಾಕೊಂಡು ಸಿನಿಮಾ ಮಾಡಬೇಕು ಅನ್ನೋ ಆಫರ್ ಇತ್ತು. ಡೇಟ್ ಏನೋ ಪ್ರಾಬ್ಲಮ್ ಆಯ್ತು. ಆಗ ನಾನು 'ಗೂಗ್ಲಿ' ಮಾಡುತ್ತಿದೆ. ಹೀಗೆ ಹಿಂದಿಗೆ ಹೋಗಿ ಬರುತ್ತಲೇ ಇದ್ದೇನೆ. ನಂದೇ ಕಥೆ ಆಗಿದ್ದರೂ ಅದನ್ನು ಬೇರೆ ಭಾಷೆಯಲ್ಲಿ ಮಾಡಲಿಕ್ಕೆ ಇಷ್ಟವಿಲ್ಲ. ಸ್ಟ್ರೈಟ್ ಸಬ್ಜೆಕ್ಟ್ ಮಾಡೋಣ ಅಂತಿದೆ." ಎನ್ನುತ್ತಾರೆ ಪವನ್.

  ಇದು ಕಾಮಿಡಿ ಸಿನಿಮಾ

  ಇದು ಕಾಮಿಡಿ ಸಿನಿಮಾ

  ಪವನ್ ಒಡೆಯರ್ ನಿರ್ದೇಶನದ ಮೊದಲ ಬಾಲಿವುಡ್ ಸಿನಿಮಾ ಔಟ್ ಅಂಡ್ ಔಟ್ ಕಾಮಿಡಿ. ಹೀಗಾಗಿ ಈ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಪವನ್ ತಮ್ಮದೇ ಒಡೆಯರ್ ಮೂವೀಸ್ ಸಂಸ್ಥೆಯಿಂದ ಮೂಡಿ ಬರುತ್ತಿರೋ ಎರಡನೇ ಸಿನಿಮಾ. ಇದರೊಂದಿಗೆ ಪವನ್ ನಿರ್ದೇಶಿಸಿದ ಕನ್ನಡ ಸಿನಿಮಾ 'ರೇಮೊ' ಕೂಡ ಬಿಡುಗಡೆಗೆ ಸಜ್ಜಾಗಿದೆ. ಇದೂ ಪವನ್ ಕರಿಯರ್‌ನಲ್ಲೇ ವಿಭಿನ್ನ ಸಿನಿಮಾ ಆಗಿದ್ದು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಾ? ಎಂದು ನೋಡಬೇಕಿದೆ.

  English summary
  After Dollu Pavan Wadeyar Is Busy With Bollywood Movie, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X