»   » 'ಸಾಹೋ' ರಿಜೆಕ್ಟ್ ಮಾಡಿದ ಶ್ರದ್ಧಾ, 'ಬಾಹುಬಲಿ' ಪ್ರಭಾಸ್ ಬಗ್ಗೆ ಹೇಳಿದ್ದೇನು?

'ಸಾಹೋ' ರಿಜೆಕ್ಟ್ ಮಾಡಿದ ಶ್ರದ್ಧಾ, 'ಬಾಹುಬಲಿ' ಪ್ರಭಾಸ್ ಬಗ್ಗೆ ಹೇಳಿದ್ದೇನು?

Posted By:
Subscribe to Filmibeat Kannada

ಬಹುಸಂಖ್ಯಾತರಿಗೆ ತಿಳಿಯದ ವಿಷಯ ಅಂದ್ರೆ, 'ಬಾಹುಬಲಿ' ಚಿತ್ರದ ನಂತರ ವಿಶ್ವದಾದ್ಯಂತ ಸಿನಿಪ್ರಿಯರ ಗಮನಸೆಳೆದ ನಟ ಪ್ರಭಾಸ್ ರವರ ಮುಂದಿನ ಚಿತ್ರ 'ಸಾಹೋ'ದಲ್ಲಿ ನಟಿಸಲು ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ 'ನೋ' ಎಂದಿರುವುದು.

ಹೌದು ತೆಲುಗಿನ 'ಸಾಹೋ' ಸಿನಿಮಾದ ಲೀಡ್ ರೋಲ್‌ಗಾಗಿ ಶ್ರದ್ಧಾ ಅವರನ್ನು ಚಿತ್ರತಂಡ ಮೊಟ್ಟ ಮೊದಲು ಅಪ್ರೋಚ್ ಮಾಡಿತ್ತು. ಆದರೆ ದೊಡ್ಡ ಮಟ್ಟದ ಸಂಭಾವನೆಯನ್ನು ಚಿತ್ರತಂಡ ನೀಡಲು ಒಪ್ಪದ ಕಾರಣ ಶ್ರದ್ಧಾ ಒಪ್ಪಿಕೊಂಡಿರಲಿಲ್ಲ. ಇದೆಲ್ಲ ಹಳೇ ಸುದ್ದಿ. ಆದರೆ ಪ್ರಭಾಸ್ ಅಭಿನಯದ 'ಸಾಹೋ'ಗೆ 'ನೋ' ಎಂದಿದ್ದ ಶ್ರದ್ಧಾ ಈಗ ಡಾರ್ಲಿಂಗ್ ಬಗ್ಗೆ ಕುತೂಹಲಕಾರಿ ಮಾತೊಂದನ್ನು ಹೇಳಿದ್ದಾರೆ. ಮುಂದೆ ಓದಿರಿ..

ಟ್ವಿಟ್ಟರ್ ಸಂಭಾಷಣೆ

ನಟಿ ಶ್ರದ್ಧಾ ಕಪೂರ್ ಇತ್ತೀಚೆಗೆ ತಮ್ಮ 'ಹಸೀನಾ ಪಾರ್ಕರ್' ಚಿತ್ರದ ಪ್ರಮೋಷನ್ ಗಾಗಿ ಅಭಿಮಾನಿಗಳೊಂದಿಗೆ ಟ್ವಿಟ್ಟರ್ ನಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬರು 'ಬಾಹುಬಲಿ' ಪ್ರಭಾಸ್ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಎಂದು ಪ್ರಶ್ನಿಸಿದ್ದರು. ಅದಕ್ಕೆ ಶ್ರದ್ಧಾ ಉತ್ತರ ಮುಂದಿನಂತಿದೆ.

ಪ್ರಭಾಸ್ ರನ್ನು ಪ್ರಶಂಸಿಸಿದ ಶ್ರದ್ಧಾ

ಅಭಿಮಾನಿಯೊಬ್ಬ 'ಪ್ರಭಾಸ್ ಬಗ್ಗೆ ಒಂದು ಪದದಲ್ಲಿ ಹೇಳಿ #ಹಸೀನಾ' ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಶ್ರದ್ಧಾ ಕಪೂರ್ ರೀಪ್ಲೇ ಮಾಡಿ 'ನ್ಯೂ ಬ್ಲಾಕ್‌ಬಸ್ಟರ್ ಕಿಂಗ್' ಎಂದು ಉತ್ತರಿಸಿದ್ದರು. ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳೆಲ್ಲಾ ಈ ಉತ್ತರಕ್ಕೆ ಖುಷಿಯಾಗದೇ ಇರಲಾರರು.

'ಸಾಹೋ'ಗೆ ಮೊದಲ ಆಯ್ಕೆ ಶ್ರದ್ಧಾ

'ಬಾಹುಬಲಿ' ನಂತರ ಪ್ರಭಾಸ್ ನಟಿಸುತ್ತಿರುವ 'ಸಾಹೋ' ಚಿತ್ರ ತೆಲುಗು. ತಮಿಳು, ಹಿಂದಿ ಭಾಷೆಗಳಲ್ಲಿ ಮೂಡಿಬರುತ್ತಿದೆ. ಈ ಚಿತ್ರದ ಫೀಮೇಲ್ ಲೀಡ್ ಕ್ಯಾರೆಕ್ಟರ್ ಗೆ ಮೊದಲು ಶ್ರದ್ಧಾ ಕಪೂರ್ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಈ ಬಗ್ಗೆ ಇಂಡಿಯಾ.ಕಾಂ ವರದಿ ಸಹ ಮಾಡಿತ್ತು.

ಸಂಭಾವನೆ ಕಾರಣ ಹಿಂದೆ ಸರಿದ ಚಿತ್ರತಂಡ

ನಟಿ ಶ್ರದ್ಧಾ ಕಪೂರ್ 'ಸಾಹೋ' ಚಿತ್ರದಲ್ಲಿ ನಟಿಸಲು ಬರೋಬರಿ 8 ಕೋಟಿ ಬೇಡಿಕೆ ಇಟ್ಟಿದ್ದರಂತೆ. ಈ ಹಣ ನೀಡಲು ಚಿತ್ರತಂಡ ಸಾಧ್ಯವಾಗದಿದ್ದಾಗ ಶ್ರದ್ಧಾ ಚಿತ್ರಕ್ಕೆ ನೋ ಎಂದಿದ್ದರು. ಅಲ್ಲದೇ ತೆಲುಗು ಸಿನಿ ಅಂಗಳದಲ್ಲಿ ನಟಿಯರಿಗೆ ಈ ಸಂಭಾವನೆ ಬಹುದೊಡ್ಡ ಮೊತ್ತವೇ ಆದ್ದರಿಂದ ಚಿತ್ರತಂಡ ಶಾಕ್ ಸಹ ಆಗಿತ್ತು. ಆದರೆ ಈವರೆಗೂ 'ಸಾಹೋ' ಚಿತ್ರಕ್ಕೆ ನಟಿ ಆಯ್ಕೆ ಅಂತಿಮಗೊಂಡಿಲ್ಲ.

ಚಿತ್ರ ಪ್ರಮೋಷನ್ ನಲ್ಲಿ ಶ್ರದ್ಧಾ ಬ್ಯುಸಿ

ನಟಿ ಶ್ರದ್ಧಾ ಕಪೂರ್ ಸದ್ಯದಲ್ಲಿ ಬಹುನಿರೀಕ್ಷಿತ ಚಿತ್ರ 'ಹಸೀನಾ: ಕ್ವೀನ್ ಆಫ್ ಮುಂಬೈ' ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಆಗಸ್ಟ್ 18 ರಂದು ತೆರೆಕಾಣಲಿದೆ.

English summary
Recently, Shraddha Kapoor had a Twitter conversation with her fans to promote her new film Haseena Parkar. During the Twitter chat, she was asked to say something about Baahubali Prabhas. Shraddha Kapoor answer is here

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada