For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ಗೆ ಅಭಿಪ್ರಾಯ ಸಲ್ಲಿಸಿದ ಏಮ್ಸ್ ವೈದ್ಯರು

  |

  ಸುಶಾಂತ್ ಸಿಂಗ್ ಸಾವು ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಕರಣದ ತನಿಖೆ ಮಾಡಿದ್ದ ಮುಂಬೈ ಪೊಲೀಸರು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಆದರೆ ಅದು ಆತ್ಮಹತ್ಯೆಯಲ್ಲ ಎಂಬ ಅನುಮಾನಗಳು ಮೊದಲಿನಿಂದಲೂ ಹಲವರಲ್ಲಿ ಇವೆ.

  ಸುಶಾಂತ್ ನಿಧನ ಹೊಂದಿದ ದಿನದಿಂದಲೂ, ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗುತ್ತಲೇ ಇದೆ. ಇದು ಆತ್ಮಹತ್ಯೆಯಲ್ಲ ಸಾವು ಎಂಬ ವಾದವನ್ನು ಕೆಲವರು ಮಾಡುತ್ತಲೇ ಇದ್ದಾರೆ.

  'ಸುಶಾಂತ್ ಸಿಂಗ್ ಪ್ರೀತಿಯಲ್ಲಿ ನಿಯತ್ತಾಗಿ ಇರಲಿಲ್ಲ' ಎಂದ ಸಾರಾ ಅಲಿ ಖಾನ್.!

  ಏಮ್ಸ್‌ ಆಸ್ಪತ್ರೆ ವೈದ್ಯರು ಸಹ ಸುಶಾಂತ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಏಮ್ಸ್ ಆಸ್ಪತ್ರೆಯ ವೈದ್ಯರ ತಂಡ ಸುಶಾಂತ್ ಪ್ರಕರಣದಲ್ಲಿ ತಮ್ಮ ಅಭಿಪ್ರಾಯವನ್ನು ಸಿಬಿಐಗೆ ಸಲ್ಲಿಸಿದೆ.

  ಸಿಬಿಐಗೆ ಅಭಿಪ್ರಾಯ ಸಲ್ಲಿಸಿದ ವೈದ್ಯರ ತಂಡ

  ಸಿಬಿಐಗೆ ಅಭಿಪ್ರಾಯ ಸಲ್ಲಿಸಿದ ವೈದ್ಯರ ತಂಡ

  ಸಿಬಿಐ ಮನವಿ ಮೇರೆಗೆ ಸುಶಾಂತ್‌ನ ಮರಣೋತ್ತರ ಹಾಗೂ ವಿಸ್ಕಾ ಪರೀಕ್ಷಾ ವರದಿಗಳ ಪರಿಶೀಲನೆಗೆಂದು ಏಮ್ಸ್‌ ವೈದ್ಯರ ತಂಡವೊಂದು ರಚನೆಯಾಗಿತ್ತು. ಅದೀಗ ತನ್ನ ಅಭಿಪ್ರಾಯವನ್ನು ಸಿಬಿಐ ಗೆ ನೀಡಿದೆ. ವೈದ್ಯರ ತಂಡ ನೀಡಿರುವ ಅಭಿಪ್ರಾಯ, ಸಿಬಿಐ ತನಿಖೆಗೆ ಹೋಲಿಕೆ ಆಗುತ್ತಿದೆ ಎನ್ನಲಾಗುತ್ತಿದೆ.

  ಸುಶಾಂತ್ ಸಾವಿನ ಪರೀಕ್ಷಾ ವರದಿಗಳನ್ನು ವಿಶ್ಲೇಷಿಸಿದ್ದ ವೈದ್ಯರ ತಂಡ

  ಸುಶಾಂತ್ ಸಾವಿನ ಪರೀಕ್ಷಾ ವರದಿಗಳನ್ನು ವಿಶ್ಲೇಷಿಸಿದ್ದ ವೈದ್ಯರ ತಂಡ

  ಏಮ್ಸ್‌ನ ವಿಶೇಷ ವೈದ್ಯರ ತಂಡವು ಹಲವು ದಿನಗಳ ಕಾಲ ಸುಶಾಂತ್ ನ ಮರಣೋತ್ತರ ಪರೀಕ್ಷೆ, ಒಳಾಂಗಗಳ ಪರೀಕ್ಷೆ, ಶ್ವಾಸಕೋಶದ ಒಳಾಂಗಗಳ ಪರೀಕ್ಷೆ, ಕೂದಲು-ಉಗುರಿನ ಪರೀಕ್ಷೆ ಇನ್ನಿತರ ಪರೀಕ್ಷೆಗಳ ವರದಿಯನ್ನು ಅಭ್ಯಸಸಿ, ನಿಕಷಃಕ್ಕೆ ಒಳಪಡಿಸಿ ತಮ್ಮ ಅಭಿಪ್ರಾಯವನ್ನು ಸಿಬಿಐ ಬಳಿ ದಾಖಲಿಸಿದೆ.

  ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದಿದ್ದ ವಿಕಾಸ್ ಸಿಂಗ್

  ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದಿದ್ದ ವಿಕಾಸ್ ಸಿಂಗ್

  ಇದೀಗ ದೆಹಲಿಯ ಪ್ರತಿಷ್ಠಿತ ಆಸ್ಪತ್ರೆ ಏಮ್ಸ್‌ನ ಕೆಲವು ವೈದ್ಯರು ಸಹ ಸುಶಾಂತ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಸುಶಾಂತ್ ಕುಟುಂಬ ಪರ ವಕೀಲ ವಿಕಾಸ್ ಸಿಂಗ್ ಹೇಳಿದ್ದರು. ಆ ನಂತರ ಏಮ್ಸ್ ಆಸ್ಪತ್ರೆಯ ವೈದ್ಯರ ತಂಡವನ್ನು ಸಿಬಿಐ ರಚಿಸಿತ್ತು.

  DIRECTORS DIARY : ಸಿನಿಮಾ ರಿಲೀಸ್ ಗೂ ಮುಂಚೆ ಓಡೋಗೋಣ ಅಂತ ಪ್ಲಾನ್ ಮಾಡಿದ್ದೆ | Filmibeat Kannada
  ಫೊಟೊ ನೋಡಿ ಅಭಿಪ್ರಾಯ ನೀಡುವುದು ಅಪಾಯಕಾರಿ: ಸುಧೀರ್‌ ಗುಪ್ತಾ

  ಫೊಟೊ ನೋಡಿ ಅಭಿಪ್ರಾಯ ನೀಡುವುದು ಅಪಾಯಕಾರಿ: ಸುಧೀರ್‌ ಗುಪ್ತಾ

  ವೈದ್ಯರ ತಂಡವನ್ನು ಮುನ್ನಡೆಸಿದ ಡಾ.ಸುಧೀರ್ ಗುಪ್ತಾ ಹೇಳಿರುವಂತೆ, ವೈದ್ಯರ ತಂಡವು 200% ಸ್ಪಷ್ಟ ತೀರ್ಮಾನಕ್ಕೆ ಬಂದ ಬಳಿಕವಷ್ಟೆ ನಮ್ಮ ಅಭಿಪ್ರಾಯವನ್ನು ಸಿಬಿಐಗೆ ತಿಳಿಸಿದ್ದೇವೆ. ಫೋಟೊಗಳನ್ನು ನೋಡಿ ಕೊಲೆಯ ಬಗ್ಗೆ ನಿರ್ಣಯಿಸುವುದು, ಅಭಿಪ್ರಾಯ ಕೊಡುವುದು ಬಹಳ ಅಪಾಯಕಾರಿ' ಎಂದಿದ್ದಾರೆ.

  English summary
  AIIMS hospital doctors panel headed by Dr.Sudhir Gupta submitted their expert opinion on Sushant Singh death case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X