»   » ತಾರೆ ಐಶ್ವರ್ಯ ರೈ ಒನ್‌ಇಂಡಿಯಾ ವಿಶೇಷ ವರದಿ

ತಾರೆ ಐಶ್ವರ್ಯ ರೈ ಒನ್‌ಇಂಡಿಯಾ ವಿಶೇಷ ವರದಿ

Posted By:
Subscribe to Filmibeat Kannada

ತಾರೆ ಐಶ್ವರ್ಯ ರೈಗೆ ಮಗುವಾದ ಬಳಿಕ ಆಕೆ ಎಲ್ಲೂ ಹೆಚ್ಚಾಗಿ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಅದರಲ್ಲೂ ತನ್ನ ಏಳು ತಿಂಗಳ ಮಗುವನ್ನು ಮಾಧ್ಯಮಗಳಿಗೆ ತೋರಿಸುವಲ್ಲಿ ಹೆಚ್ಚಿನ ಜಾಗ್ರತೆಯನ್ನೇ ವಹಿಸಿದರು. ಕಡೆಗೂ ಆಕೆ ತನ್ನ ಮಗುವಿನ ಜೊತೆ ಇದೀಗ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಗ್ಯಾಲರಿ ನೋಡಿ.

ಕೇನ್ಸ್ ಚಿತ್ರೋತ್ಸವದಿಂದ ಮುಂಬೈಗೆ ಮರಳಿರುವ ಅವರ ಎಕ್ಸ್‌ಕ್ಲೂಸೀವ್ ಫೋಟೋಗಳು ಕೇವಲ ಒನ್‌ಇಂಡಿಯಾದಲ್ಲಿ ಮಾತ್ರ ನೀವು ಕಾಣಬಹುದು. ಜೊತೆಯಲ್ಲಿ ತನ್ನ ಗಂಡ ಅಭಿಷೇಕ್ ಬಚ್ಚನ್ ಹಾಗೂ ಅತ್ತೆ ಮಾವಂದಿರಾದ ಅಮೀತ್ ಬಚ್ಚನ್, ಜಯಾ ಬಚ್ಚನ್ ಕೂಡ ಇದ್ದಾರೆ.

ಇಲ್ಲೂ ಕೂಡ ಐಶ್ವರ್ಯ ರೈ ತನ್ನ ಮಗುವಿನ ಮುಖವನ್ನು ಮುಚ್ಚಿಟ್ಟುಕೊಂಡಿದ್ದಾರೆ. ಮಗುವನ್ನು ಮುಂದೆ ಕಟ್ಟಿಕೊಂಡು ಅವರು ಹೋಗುತ್ತಿರುವ ದೃಶ್ಯಗಳನ್ನು ಕಾಣಬಹುದು. ಐಶ್ವರ್ಯ ರೈ ಮಗಳು ಆರಾಧ್ಯ ಹೇಗಿದ್ದಾಳೋ ನೋಡಣ ಎಂದು ಹಂಬಲಿಸುತ್ತಿರುವ ಆಕೆಯ ಅಭಿಮಾನಿಗಳಿಗೆ ಇಲ್ಲೂ ನಿರಾಸೆ ತಪ್ಪಿದ್ದಲ್ಲ.

ಈ ಹಿಂದೆ ಬಾಣಂತಿ ಐಶ್ವರ್ಯ ರೈ ಅವರ ಹಲವಾರು ಫೋಟೋಗಳು ಫೇಸ್‌ಬುಕ್‌ನಲ್ಲಿ ಲೀಕ್ ಆಗಿದ್ದವು. ಆದರೆ ಅವೆಲ್ಲಾ ಅಸಲಿ ಅಲ್ಲ ನಕಲಿ ಎಂಬುದನ್ನು ಸ್ವತಃ ಐಶ್ವರ್ಯ ರೈ ಅವರ ಮಾವ ಅಮಿತಾಬ್ ಬಚ್ಚನ್ ಸ್ಪಷ್ಟಪಡಿಸಿದ್ದರು.

ಐಶ್ವರ್ಯ ರೈ ಬೇಬಿ ಹೇಗಿರಬಹುದು ಎಂಬ ಕುತೂಹಲ ಆಕೆಯ ಲಕ್ಷಾಂತರ ಅಭಿಮಾನಿಗಳಿಗೆ ಈಗಲೂ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಗ್ರಾಫಿಕ್ಸ್ ಕಲಾವಿದರು ನಕಲಿ ಫೋಟೋಗಳನ್ನು ಸೃಷ್ಟಿಸಿ ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿ ಗುಲ್ಲೆಬ್ಬಿಸಿದರು.

ಈ ರೀತಿ ನಕಲಿ ಫೋಟೋಗಳು ಸರಿದಾಡಿದಾಗಲೆಲ್ಲಾ ಅಮಿತಾಬ್ ಬಚ್ಚನ್ ಸುಮ್ಮನೆ ಕೂರಲಿಲ್ಲ. ಎಲ್ಲದಕ್ಕೂ ವಿವರಣೆ ನೀಡುತ್ತಲೇ ಬಂದರು. ಏತನ್ಮಧ್ಯೆ ಐಶೂ ಬೇಬಿ ಫೋಟೋಗಾಗಿ ಅಂತಾರಾಷ್ಟ್ರೀಯ ಪತ್ರಿಕೆಯೊಂದು ರು.5 ಕೋಟಿ ಆಫರ್ ನೀಡಿತ್ತು. ಇದ್ಯಾವುದಕ್ಕೂ ಬಚ್ಚನ್ ಕುಟುಂಬ ಸೊಪ್ಪುಹಾಕಲಿಲ್ಲ.

ಈ ಎಲ್ಲಾ ಗದ್ದಲಗಳ ನಡುವೆ ಐಶ್ವರ್ಯ ರೈ ಮತ್ತೊಂದು ಗೌರವಕ್ಕೆ ಪಾತ್ರರಾದರು. ಬಾಲಿವುಡ್‌ ಅಗ್ರ ಶ್ರೇಣಿಯ ತಾರೆಗಳಲ್ಲಿ ಯಾರು 'ಆದರ್ಶ ತಾಯಿ' ಎಂಬ ಸಮೀಕ್ಷೆಯಲ್ಲಿ ಐಶ್ವರ್ಯ ರೈ ಅವರಿಗೆ ಅತ್ಯಧಿಕ ಮತಗಳು ಬೀಳುವ ಮೂಲಕ ಅವರು ಆದರ್ಶ ತಾಯಿಯಾಗಿ ಆಯ್ಕೆಯಾದರು.

ಐಶ್ವರ್ಯ ರೈ ಕುರಿತಂತೆ ಮತ್ತೊಂದು ಸುದ್ದಿ ಬಾಲಿವುಡ್ ವಲಯದಲ್ಲಿ ಭಾರಿ ಸುದ್ದಿಯಾಯಿತು. ಮಗುವಾದ ಐದೇ ತಿಂಗಳಲ್ಲಿ ಅವರ ದೇಹದ ತೂಕ ಸಿಕ್ಕಾಪಟ್ಟೆ ಏರಿಕೆಯಾಗಿತ್ತು. ಬಳುಕುವ ಬಳ್ಳಿಯಂತಿದ್ದ ಐಶೂ ಕುಂಬಳಕಾಯಿಯಂತಾಗಿರುವ ಫೋಟೋ ಭಾರಿ ಚರ್ಚೆಗೆ ಕಾರಣವಾಯಿತು.

ಫೋಟೋ ನೋಡಿದ ಕೆಲವರು 'ಐಶ್ವರ್ಯ ರೈಗೆ ವಿಶ್ವ ಸ್ಥೂಲಕಾಯ ಸುಂದರಿ" ಎಂಬ ಪ್ರಶಸ್ತಿ ಕೊಡಬೇಕು ಎಂದು ಲೇವಡಿ ಮಾಡಿದರು. ಇದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಐಶೂ ಕೇನ್ಸ್ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಎಲ್ಲರ ಗಮನಸೆಳೆದರು. ಅಲ್ಲಿ ಒಂಚೂರು ತೆಳ್ಳಗೆ ಕಾಣಿಸಿದ್ದು ವಿಶೇಷ. (ಒನ್‌ಇಂಡಿಯಾ ಕನ್ನಡ)

English summary
Abhishek Bachchan and Aishwarya Rai Bachchan with her baby Aaradhya Bachchan Spotted at Mumbai Airport. Here is the exclusive gallery of Oneindia.
Please Wait while comments are loading...