»   » ಆರಾಧ್ಯಳಿಗೆ ಪುಟ್ಟಮನೆ ಗಿಫ್ಟ್ ಕೊಟ್ಟ ಐಶ್ ಅಭಿ

ಆರಾಧ್ಯಳಿಗೆ ಪುಟ್ಟಮನೆ ಗಿಫ್ಟ್ ಕೊಟ್ಟ ಐಶ್ ಅಭಿ

Posted By:
Subscribe to Filmibeat Kannada

'ಆರಾಧ್ಯಾ' ಎಂಬ ಮುದ್ದಾದ ಮಗು ಜನ್ಮಿಸಿದ್ದೆ ಜಗತ್ತೇ ಬಚ್ಚನ್ ಕುಟುಂಬದತ್ತ ತಿರುಗುವಂತೆ ಮಾಡಿದೆ. ಆರಾಧ್ಯಾ ಬಾಲಿವುಡ್ ನ ಯಾವ ಸ್ಟಾರ್ ಹೀರೋ, ಹೀರೋಯಿನ್ ಗೇನು ಕಮ್ಮಿಯಿಲ್ಲ. ಮಾಜಿ ವಿಶ್ವಸುಂದರಿ ತಾಯಿಯಾದ ನಂತರ ತಮ್ಮ ಮೊದಲ ಸ್ಲಿಮ್ ಬಾಡಿ ಶೇಪ್ ಕಳೆದುಕೊಂಡು ಏಕ್ ದಂ ಊದಿಕೊಂಡಿದ್ದು ದೊಡ್ಡ ಬ್ರೇಕಿಂಗ್ ನ್ಯೂಸ್ ಆಗಿತ್ತು.

ಈಗ ಬಚ್ಚನ್ ಕುಟುಂಬದ 'ಬೇಟಿ ಬಿ' ಸಿಗುತ್ತಿರುವ ಉಡುಗೊರೆಗಳ ಸುದ್ದಿ ಯಾರು ಮೊದಲು ಪ್ರಸಾರ ಮಾಡುತ್ತಾರೋ ಅವರೇ ಗೆದ್ದಂತೆ ಎಂಬ ವಾತಾವರಣ ಮಾಧ್ಯಮಗಳಲ್ಲಿ ಹುಟ್ಟಿಕೊಂಡಿದೆ.

"ತಾಯ್ತನ ನನ್ನ ಆದ್ಯತೆ. ಅದನ್ನು ಅನುಭವಿಸುತ್ತಿದ್ದೇನೆ ಮತ್ತು ಇಷ್ಟಪಡುತ್ತಿದ್ದೇನೆ. ಸಿನಿಮಾ ಜಗತ್ತಿಗೆ ಮತ್ತೆ ಹಿಂದಿರುಗುವ ಬಗ್ಗೆ ಸದ್ಯಕ್ಕೆ ಯೋಚನೆಯಿಲ್ಲ. ಮಗುವಿನ ಜೊತೆ ಹೆಚ್ಚು ಕಾಲ ಕಳೆಯಲು ಇಷ್ಟಪಡುತ್ತೇನೆ. ಆಮೇಲೆ ಮಗುವಿನ ಜೊತೆ ಕಾಲ ಕಳೆದಿಲ್ಲವೆಂಬ ಅಪರಾಧಿ ಪ್ರಜ್ಞೆ ನನಗೆ ಕಾಡಬಾರದು ಎಂದು ಐಶ್ ಮತ್ತೆ ಮತ್ತೆ ಹೇಳಿದ್ದಾರೆ.

"ನಮ್ಮ ಮಗು ಆರಾಧ್ಯಾಳನ್ನು ವಸ್ತುವಿನಂತೆ ನಾವು 'ಡಿಸ್ ಪ್ಲೇ' ಮಾಡಲು ಸಾಧ್ಯವಿಲ್ಲ. ಸಾಮಾನ್ಯ ಜನರು ಅವಳನ್ನು ನೋಡಲು ಮುಗಿಬೀಳುತ್ತಾರೆ. ಅದು ಸಹಜ ಎಂದು ನಮಗೆ ತಿಳಿದಿದೆ. ಆದರೆ ಅಷ್ಟೊಂದು ಜನ ಏಕಕಾಲಕ್ಕೆ ಅವಳನ್ನು ಸುತ್ತುವರಿದರೆ ಚಿಕ್ಕ ಮಗುವಿಗೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲ, ಅವಳು ಸಾಮಾನ್ಯಳಂತೆ ಬೇಳೆಯಲಿ ಎಂಬುದು ನಮ್ಮಾಸೆ" ಎಂದು ಐಶ್ ಅಭಿ ಹೇಳಿಕೆ

ಆರಾಧ್ಯಳಿಗೆ ಗಿಫ್ಟ್

ಆರಾಧ್ಯಳ ಮೊದಲ ಬರ್ಥಡೇ ದಿನದಂದು ಐಶ್ ಅಭಿ ಇಬ್ಬರು ಮಗಳಿಗೆ BMW ಮಿನಿ ಕೂಪರ್ ಎಸ್ ದುಬಾರಿ ಕಾರು ಉಡುಗೊರೆಯಾಗಿ ನೀಡಿದ್ದರು.

ಹಾಲಿಡೇ ಹೌಸ್

ಸ್ಟಾರ್ ದಂಪತಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ತಮ್ಮ ಮುದ್ದಿನ ಕೂಸು ಆರಾಧ್ಯಳಿಗೆ ದುಬೈನಲ್ಲಿ 54 ಕೋಟಿ ಮೌಲ್ಯ 'ಹಾಲಿಡೇ ಹೌಸ್' ಗಿಫ್ಟ್ ಮಾಡಿದ್ದಾರೆ. ದುಬೈನ ಶೇಕ್ ಹೋಲ್ಡಿಂಗ್ಸ್ ನ ಸೆಂಚುರಿ ಫಾಲ್ಸ್ ನಲ್ಲಿರುವ ಈ ಪುಟ್ಟ ಬಂಗಲೆ ವಿಶೇಷವಾಗಿ ಆರಾಧ್ಯಳಿಗಾಗಿ ರೂಪಿಸಲಾಗಿದೆ.

ಅಮ್ಮನ ಮಡಿಲಲ್ಲಿ ಸ್ಟಾರ್ ಕೂಸು

ಆರಾಧ್ಯಾ ಸ್ಟಾರ್ ನೆರಳಿನಿಂದ ಹೊರಬಂದು ಬದುಕು ರೂಪಿಸಿಕೊಳ್ಳುವುದು ಅತೀ ಅಗತ್ಯ ಎಂಬುದನ್ನು ಮರೆಯಬಾರದು. ಆಕೆ ಒಂದು ಪ್ರದರ್ಶನದ ವಸ್ತುವೆಂಬಂತೆ ಜನರು ನೋಡುವುದು ನನಗಿಷ್ಟವಿಲ್ಲ. ಸ್ಟಾರ್ ಫ್ಯಾಮಿಲಿಯಲ್ಲಿ ಹುಟ್ಟಿದ್ದರೂ ಅವಳು ಯಾರ ನೆರಳಲ್ಲಿ ಬದುಕದೇ ಆತ್ಮವಿಶ್ವಾಸಕ್ಕೆ ಇನ್ನೊಂದು ಹೆಸರು ಎಂಬಂತೆ ಇರಬೇಕೆಂಬುದು ನಮ್ಮೆಲ್ಲರ ಮಹದಾಸೆ: ಐಶ್ ಅಭಿ ಹೇಳಿಕೆ

ಆರಾಧ್ಯ ಬಚ್ಚನ್ ಕುಟುಂಬದ ಕಣ್ಣು

ರೆಸಾರ್ಟ್ ಮಾದರಿ ಮನೆಗಳನ್ನು ಹೊಂದಿರುವ ಸೆಂಚುರಿ ಫಾಲ್ಸ್ ನಲ್ಲಿ ಸುಮಾರು 96 ರೆಸಾರ್ಟ್ ವಿಲ್ಲಾಗಳಿವೆ. ಎಲ್ಲವೂ ದೇಶ ವಿದೇಶದ ಗಣ್ಯರ ಸ್ವತ್ತಾಗಿದೆ. ಸುಮಾರು 5,600 ದಿಂದ 10,600 ಚದರ ಅಡಿ ವಿಸ್ತೀರ್ಣ ಹೊಂದಿವೆ.

ಅಳಬೇಡ ಪಾಪಚ್ಚಿ ನೇಬರ್ಸ್ ಕಂಡು

ಆರಾಧ್ಯಳಿಗೆ ದೇಶ ವಿದೇಶದ ಸ್ಟಾರ್ ಗಳು ನೆರೆ ಹೊರೆಯಾಗುವ ಸಾಧ್ಯತೆಯಿದೆ. ಶಾರುಖ್ ಖಾನ್, ಬ್ರಾಡ್ ಪಿಟ್, ಯಶ್ ಛೋಪ್ರಾ ಕುಟುಂಬ, ಡೇವಿಡ್ ಬೆಕ್ ಹ್ಯಾಮ್, ರಾಬರ್ಟ್ ಡಿ ನಿರೋ ಸೇರಿದಂತೆ ಹಲವು ರಂಗದ ಗಣ್ಯರು ದುಬೈನಲ್ಲಿ ಬಂಡವಾಳ ಹೂಡಿಕೆ ಮಾಡಿ ವಿಲ್ಲಾಗಳನ್ನು ಖರೀದಿಸಿದ್ದಾರೆ.

English summary
Aishwarya’s one year old baby Aradhya, already has the world at her feet. After Beti B parents bought her a MINI Cooper, Aaradhya's latest acquisition is located in Dubai and is a property worth Rs. 54 crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada