For Quick Alerts
  ALLOW NOTIFICATIONS  
  For Daily Alerts

  ಉತ್ತರ Vs ದಕ್ಷಿಣ: ಈ ಚರ್ಚೆಗೆ ಖಾರವಾಗಿ ಪ್ರತಿಕ್ರಿಯಿಸಿದ ಐಶ್ವರ್ಯಾ ರೈ ಬಚ್ಚನ್!

  |

  ಎವರ್‌ಗ್ರೀನ್ ಬ್ಯೂಟಿ ಐಶ್ವರ್ಯಾ ರೈ ತಮ್ಮ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮಣಿರತ್ನಂ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಐಶ್ವರ್ಯಾ ಡಬಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇದು ಮಣಿರತ್ನಂ ನಿರ್ದೇಶನದ ಮಹತ್ವಾಕಾಂಕ್ಷೆ ಸಿನಿಮಾ.

  ಲೇಖಕ ಕಲ್ಕಿ ಕೃಷ್ಣಮೂರ್ತಿ 1974ರಲ್ಲಿ ಬರೆದಿದ್ದ ಕಾದಂಬರಿಯನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ ರಿಲೀಸ್ ಆಗಿರೋ ಈ ಸಿನಿಮಾ ಟ್ರೈಲರ್‌ನಲ್ಲಿ ಐಶ್ವರ್ಯಾ ರೈ ನಂದಿನಿಯಾಗಿ ಗಮನ ಸೆಳೆದಿದ್ದಾರೆ. ಇದೇ ಸಿನಿಮಾ ಐಶ್ವರ್ಯಾ ರೈ ಎರಡನೇ ಗೆಟಪ್‌ನಲ್ಲಿ ಮಂದಾಕಿನಿಯಾಗಿಯೂ ಕಾಣಿಸಿಕೊಳ್ಳಿದ್ದಾರೆ. ಈ ಕಾರಣಕ್ಕೆ ಐಶ್ವರ್ಯಾ ರೈ ಅಭಿಮಾನಿಗಳಿಗೆ ಈ ಸಿನಿಮಾ ದುಪ್ಪಟ್ಟು ಕುತೂಹಲವನ್ನು ಮೂಡಿಸಿದೆ.

  ಇಂದು( ಸೆಪ್ಟೆಂಬರ್ 26) 'ಪೊನ್ನಿಯಿನ್ ಸೆಲ್ವನ್' ಸಿನಿಮಾ ತಂಡ ದೆಹಲಿಗೆ ಆಗಮಿಸಿತ್ತು. ಸಿನಿಮಾ ತಂಡದ ಜೊತೆ ಐಶ್ವರ್ಯಾ ರೈ ಬಚ್ಚನ್ ಕೂಡ ಉಪಸ್ಥಿತಿ ಇತ್ತು. ಈ ವೇಳೆ ಐಶ್ವರ್ಯಾ ಸದಾ ವಿವಾದ ಸೃಷ್ಟಿಸೋ ಉತ್ತರ Vs ದಕ್ಷಿಣ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

  ಐಶ್ವರ್ಯಾಗೆ ಇದೂವರೆಗೂ ತಮಿಳು ಹಾಗೂ ಹಿಂದಿ ಎರಡೂ ಭಾಷೆಯಲ್ಲೂ ಉತ್ತಮ ಸಿನಿಮಾಗಳು ಸಿಕ್ಕಿವೆ. ಹೀಗಾಗಿ " ಟಿಪಿಕಲ್ ಆಗಿ ಕಲಾವಿದರು ಹಾಗೂ ಸಿನಿಮಾವನ್ನು ನೋಡುವುದಕ್ಕೆ ಬ್ರೇಕ್ ಹಾಕಲು ಇದೊಂದು ಅದ್ಭುತ ಸಮಯ ಅಂತ ಅನಿಸುತ್ತೆ. ಈ ಎಲ್ಲಾ ಅಡೆತಡೆಗಳೂ ಈಗ ಮುಗಿದು ಹೋಗಿವೆ. ಜನರು ಈಗ ಸಿನಿಮಾವನ್ನು ರಾಷ್ಟ್ರವ್ಯಾಪಿ ನೋಡುತ್ತಿದ್ದಾರೆ. ಈಗ ದೇಶದ ಎಲ್ಲಾ ಭಾಗದ ಸಿನಿಮಾವನ್ನು ನೋಡಲು ಇಷ್ಟಪಡುತ್ತಿದ್ದಾರೆ." ಎಂದು ಐಶ್ವರ್ಯಾ ರೈ ಹೇಳಿದ್ದಾರೆ.

  "ದೇಶಾದ್ಯಂತ ಪ್ರತಿಯೊಬ್ಬರೂ ಯಾವ ಸಿನಿಮಾವನ್ನಾದರೂ ನೋಡಬಹುದು. ಈ ರೀತಿ ವಿವಾದಾತ್ಮಕವಾಗಿ ಯೋಚಿಸುವುದನ್ನು ನಿಲ್ಲಿಸಿ, ನಮ್ಮ ವೀಕ್ಷಕರಿಗೆ ಸರಿಯಾದ ದಾರಿಯನ್ನು ತೋರಿಸಬೇಕಿದೆ. ನಮ್ಮ ಓದುಗರೂ ಕೂಡ ಈ ಹೀಗೆ ಟಿಪಿಕಲ್ ನೋಡುವುದನ್ನು ಬಯಸುವುದಿಲ್ಲ." ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ಉತ್ತರ Vs ದಕ್ಷಿಣ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ.

  Aishwarya Rai About South Vs North Debate In Ponniyin Selvan Promotion

  'ಪೊನ್ನಿಯಿನ್ ಸೆಲ್ಬನ್' ಸಿನಿಮಾ ವಿಶ್ವದಾದ್ಯಂತ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಐಶ್ವರ್ಯಾ ರೈ ಬಚ್ಚನ್ ಜೊತೆ ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಶಾ ಸೇರಿದಂತೆ ದಿಗ್ಗಜರೇ ನಟಿಸಿದ್ದಾರೆ.

  English summary
  Aishwarya Rai About South Vs North Debate In Ponniyin Selvan Promotion, Know More.
  Monday, September 26, 2022, 23:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X