»   » ಐಶ್ವರ್ಯ ರೈ ದಂಪತಿಯ 21 ಕೋಟಿ ಮೌಲ್ಯದ ಮನೆ ನೋಡಿ

ಐಶ್ವರ್ಯ ರೈ ದಂಪತಿಯ 21 ಕೋಟಿ ಮೌಲ್ಯದ ಮನೆ ನೋಡಿ

Posted By:
Subscribe to Filmibeat Kannada

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ , ಕಂಗನಾ ರನೌತ್ ನಂತರ ಈಗ ಬಾಲಿವುಡ್ ನ ಮತ್ತೊಂದು ತಾರಾ ಕುಟುಂಬ ತಮ್ಮ ಅಪಾರ್ಟ್ ಮೆಂಟ್ ಒಳಗಿನ ಸುಂದರ ಚಿತ್ರಗಳನ್ನ ಹಂಚಿಕೊಂಡಿದೆ.

ಮುಂಬೈನ ಬಾಂದ್ರಾ ನಗರದಲ್ಲಿರುವ ದೊಡ್ಡ ಕಾಂಪ್ಲೆಕ್ಸ್ ನಲ್ಲಿ ಐಶ್ ದಂಪತಿ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ. 2015 ರಲ್ಲೇ ಕೊಂಡುಕೊಂಡಿರುವ ಈ ಮನೆಯನ್ನ ಈಗ ನೂತನವಾಗಿ ವಿನ್ಯಾಸ ಮಾಡಿಸಲಾಗಿದೆ. ಒಂದು ಅಡಿಗೆ 38,000 ರೂಪಾಯಿಯಂತೆ 5500 ಅಡಿ ಜಾಗದ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ. ಒಟ್ಟು ಇದರ ಬೆಲೆ 21 ಕೋಟಿಯಂತೆ. ಸದ್ಯ, ಮುಂಬೈ ನ ಜುಹಾ ನಗರದಲ್ಲಿ ಬಚ್ಚನ್ ಫ್ಯಾಮಿಲಿ ವಾಸವಾಗಿದ್ದಾರೆ. ಮುಂಬೈನ ವಾರ್ಲಿಯಲ್ಲೂ ಕೂಡ ಒಂದು ಮನೆ ಹೊಂದಿದ್ದಾರೆ. ಅದರ ಜೊತೆಗೆ ದುಬೈನಲ್ಲೂ ಕೂಡ ಒಂದು ವಿಲ್ಲಾ ಇದೆ.

ಐಶ್ವರ್ಯ ರೈಗೆ 10 ಕೋಟಿ ಸಂಭಾವನೆ ಆಫರ್ ನೀಡಿದ್ದೇಕೆ?

ಇನ್ನೊಂದು ವಿಷ್ಯ ಏನಪ್ಪಾ ಅಂದ್ರೆ, ಐಶ್ ಮತ್ತು ಅಭಿಷೇಕ್ ದಂಪತಿ ಇರುವ ಕಾಂಪ್ಲೆಕ್ಸ್ ನಲ್ಲೇ ಬಾಲಿವುಡ್ ನಟಿ ಸೋನಮ್ ಕಪೂರ್ ಕೂಡ ಮನೆ ಖರೀದಿಸಿದ್ದಾರೆ. ಈ ಮೂಲಕ ಸೋನಮ್, ಐಶ್ ಕುಟುಂಬಕ್ಕೆ ನೆರೆ ಮನೆಯವರಾಗಲಿದ್ದಾರೆ. ಹಾಗಿದ್ರೆ, ಬನ್ನಿ ಐಶ್ ದಂಪತಿಯ 21 ಕೋಟಿ ಬೆಲೆಯ ಮನೆ ಹೇಗಿದೆ ಎಂದು ಚಿತ್ರಗಳಲ್ಲಿ ನೋಡೋಣ. ಮುಂದೆ ಓದಿ.....

ಮುಖ್ಯದ್ವಾರ

ಇದು ಮನೆಯ ಮುಖ್ಯದ್ವಾರ. ಸಂಪೂರ್ಣವಾಗಿ ಮನೆಯನ್ನ ಕಂದು ಬಣ್ಣದಲ್ಲಿ ಡಿಸೈನ್ ಮಾಡಲಾಗಿದೆ. ಜೊತೆಗೆ ಗಾಜಿನಿಂದ ತಯಾರಾದ ಕಿಟಕಿ, ಮತ್ತು ಬಾಗಿಲುಗಳು ನೋಡಬಹುದು.

ಕಿಚ್ಚನ್

ಮನೆಯ ಕಿಚ್ಚನ್ ಕೂಡ ಸುಂದರವಾಗಿದ್ದು, ಮನೆಯ ಸಾಮಗ್ರಿಗಳನ್ನ ಇಡಲು ಮತ್ತು ಅಡುಗೆ ಮಾಡಲು ಉತ್ತಮವಾಗಿ ಡಿಸೈನ್ ಮಾಡಲಾಗಿದೆ.

ಆರಾಧ್ಯ ಬೆಡ್ ರೂಂ

ಮಗಳಿಗಾಗಿ ವಿಶೇಷವಾದ ಬೆಡ್ ರೂಂ ವ್ಯವಸ್ಥೆ ಮಾಡಲಾಗಿದೆ. ಸಖತ್ ಕಲರ್ ಫುಲ್ ಆಗಿ ಆರಾಧ್ಯ ರೂಂನ್ನ ವಿನ್ಯಾಸ ಗೊಳಿಸಲಾಗಿದೆ. ಕಲರ್ ನಲ್ಲೂ ಡಿಫರೆಂಟ್ ಮಾಡಲಾಗಿದೆ. ಜೊತೆಗೆ ಗೋಡೆ ಮೇಲೆ ಕೂಡ ಕಾರ್ಟೂನ್ ಚಿತ್ರಗಳನ್ನ ಬಿಡಿಸಲಾಗಿದೆ.

ಸ್ವಿಮ್ಮಿಂಗ್ ಫೂಲ್

ಮನೆಯ ಒಳಗೆಯ ವಿಶಾಲವಾದ ಸ್ವಿಮ್ಮಿಂಗ್ ಫೂಲ್ ವ್ಯವಸ್ಥೆ ಮಾಡಲಾಗಿದೆ. ಬೀಚ್ ರೀತಿಯಲ್ಲಿ ಈ ಸ್ವಿಮ್ಮಿಂಗ್ ಫೂಲ್ ಕಟ್ಟಲಾಗಿದೆ.

ಬೆಡ್ ರೂಂ

ಇಷ್ಟೆಲ್ಲಾ ಹೊರತು ಪಡಿಸಿದ್ರೆ, ವಿಭಿನ್ನ ರೀತಿಯ ಬಗೆ ಬಗೆಯ ಬೆಡ್ ರೂಂ ನಿರ್ಮಿಸಲಾಗಿದೆ. ಒಂದು ಕಡೆ ದೊಡ್ಡ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಮತ್ತೊಂದೆಡೆ ಡಬಲ್ ಬೆಡ್ ಹಾಕಲಾಗಿದೆ.

English summary
New images of Aishwarya Rai Bachchan and Abhishek Bachchan’s Rs 21 crore apartment in Mumbai’s Bandra-Kurla complex have been shared online.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X