ಅಯ್ಯಯ್ಯೋ... ಐಶ್ವರ್ಯ ರೈ ಬಚ್ಚನ್ ಸಂಭಾವನೆಗೂ ಕತ್ರಿ ಬಿತ್ತು.!

By Harshitha

ಮದುವೆ ಆಗಿ ಒಂದು ಮಗುವಿನ ತಾಯಿ ಆದರೂ, ಮಾಜಿ ವಿಶ್ವ ಸುಂದರಿ, ಬಚ್ಚನ್ ಬಹುರಾಣಿ ಐಶ್ವರ್ಯ ರೈ ಬಚ್ಚನ್ ಗೆ ಬಾಲಿವುಡ್ ನಲ್ಲಿ ಕೊಂಚ ಕೂಡ ಡಿಮ್ಯಾಂಡ್ ಕಮ್ಮಿ ಆಗಿಲ್ಲ.

ಮುದ್ದು ಪುಟಾಣಿ ಆರಾಧ್ಯ ಬಚ್ಚನ್ ಗೆ ತಾಯಿ ಆದ್ಮೇಲೆ 'ಜಝ್ಬಾ', 'ಸರ್ಬ್ಜೀತ್' ಹಾಗೂ 'ಏ ದಿಲ್ ಹೇ ಮುಶ್ಕಿಲ್' ಚಿತ್ರಗಳಲ್ಲಿ ಐಶ್ವರ್ಯ ರೈ ಅಭಿನಯಿಸಿದ್ದಾರೆ. ಸದ್ಯ 'ಫಾನ್ನೇ ಖಾನ್' ಸಿನಿಮಾದ ಚಿತ್ರೀಕರಣದಲ್ಲೂ ಐಶೂ ಪಾಲ್ಗೊಂಡಿದ್ದಾರೆ.

ವೈಯುಕ್ತಿಕ ಜೀವನ ಹಾಗೂ ವೃತ್ತಿ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿರುವಾಗಲೇ, ನಟಿ ಐಶ್ವರ್ಯ ರೈಗೆ ಒಂದು ಶಾಕ್ ಸಿಕ್ಕಿದೆ. ಅದೇನಪ್ಪಾ ಅಂದ್ರೆ, 'ಫಾನ್ನೇ ಖಾನ್' ಚಿತ್ರದಲ್ಲಿ ಐಶ್ವರ್ಯ ರೈಗೆ ಸಿಗಬೇಕಾದ ಸಂಭಾವನೆಗೆ ಕತ್ರಿ ಬೀಳಲಿದೆ.! ಮುಂದೆ ಓದಿರಿ...

ಮುಕ್ಕಾಲು ಭಾಗದ ಚಿತ್ರೀಕರಣ ಮುಗಿದು ಹೋಗಿದೆ

ಮುಕ್ಕಾಲು ಭಾಗದ ಚಿತ್ರೀಕರಣ ಮುಗಿದು ಹೋಗಿದೆ

ಈಗಾಗಲೇ 'ಫಾನ್ನೇ ಖಾನ್' ಚಿತ್ರದ ಮುಕ್ಕಾಲು ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇನ್ನೇನಿದ್ದರೂ ಎರಡು ಹಾಡು ಹಾಗೂ ಕೆಲ ಸನ್ನಿವೇಶಗಳು ಮಾತ್ರ ಬಾಕಿ ಇದೆ. ಹೀಗಿರುವಾಗಲೇ, ನಿರ್ಮಾಪಕರಾದ ಪ್ರೇರಣಾ ಅರೋರ ಲಾಸ್ ನಲ್ಲಿದ್ದಾರಂತೆ. ಹೀಗಾಗಿ, ಅಗ್ರೀಮೆಂಟ್ ನಲ್ಲಿ ಒಪ್ಪಿಕೊಂಡಿದ್ದಕ್ಕಿಂತ ಕಮ್ಮಿ ಸಂಭಾವನೆ ತೆಗೆದುಕೊಳ್ಳಿ ಅಂತ ಐಶ್ವರ್ಯ ರೈ ಬಳಿ ಪ್ರೇರಣಾ ಅರೋರ ಕೇಳಿಕೊಂಡಿದ್ದಾರಂತೆ.

ಐಶ್ವರ್ಯ ರೈ ಒಪ್ಪಿಕೊಳ್ತಾರಾ.?

ಐಶ್ವರ್ಯ ರೈ ಒಪ್ಪಿಕೊಳ್ತಾರಾ.?

ಒಪ್ಪಿಕೊಂಡಿದ್ದಕ್ಕಿಂತ ಕಮ್ಮಿ ಸಂಭಾವನೆ ತೆಗೆದುಕೊಳ್ಳಲು ನಟಿ ಐಶ್ವರ್ಯ ರೈ ಒಪ್ಪಿಕೊಳ್ತಾರೋ, ಇಲ್ವೋ ಗೊತ್ತಿಲ್ಲ. ಹಾಗ್ನೋಡಿದ್ರೆ, ಇಷ್ಟೊತ್ತಿಗಾಗಲೇ 'ಫಾನ್ನೇ ಖಾನ್' ಬಿಡುಗಡೆ ಆಗಬೇಕಿತ್ತು. ಆದ್ರೆ, ಚಿತ್ರದ ಶೂಟಿಂಗ್ ಅನಿವಾರ್ಯ ಕಾರಣಗಳಿಂದ ಮುಂದಕ್ಕೆ ಹೋಗುತ್ತಲೇ ಇದೆ.

ಅನಿಲ್ ಕಪೂರ್ ಗೂ ಹೀಗೆ ಆಗಬಹುದು.!

ಅನಿಲ್ ಕಪೂರ್ ಗೂ ಹೀಗೆ ಆಗಬಹುದು.!

ಬರೀ ಐಶ್ವರ್ಯ ರೈ ಬಚ್ಚನ್ ಗೆ ಮಾತ್ರ ಅಲ್ಲ. 'ಫಾನ್ನೇ ಖಾನ್' ಚಿತ್ರದ ತಾರಾಗಣದಲ್ಲಿ ಇರುವ ಅನಿಲ್ ಕಪೂರ್ ಹಾಗೂ ರಾಜ್ ಕುಮಾರ್ ರಾವ್ ರವರ ಸಂಭಾವನೆ ಕೂಡ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಯಾವಾಗ ರಿಲೀಸ್ ಆಗುತ್ತೋ.?

ಯಾವಾಗ ರಿಲೀಸ್ ಆಗುತ್ತೋ.?

ನಿರ್ಮಾಪಕರ ಸಂಕಷ್ಟಕ್ಕೆ ಸ್ಪಂದಿಸಿ ಐಶ್ವರ್ಯ ರೈ ಹಾಗೂ ಅನಿಲ್ ಕಪೂರ್ ಶೂಟಿಂಗ್ ಗೆ ಬರಲು ಒಪ್ಪಿಕೊಂಡರೆ ಆಗಸ್ಟ್ ಹೊತ್ತಿಗೆ 'ಫಾನ್ನೇ ಖಾನ್' ರಿಲೀಸ್ ಆಗಬಹುದು. ಇಲ್ಲಾಂದ್ರೆ, ಇನ್ನೂ ಮುಂದಕ್ಕೆ ಹೋಗುವುದು ಪಕ್ಕಾ. ಅಂದ್ಹಾಗೆ, ಈ ಚಿತ್ರವನ್ನ ನಿರ್ದೇಶನ ಮಾಡ್ತಿರೋದು ಅತುಲ್ ಮಂಜ್ರೇಕರ್.

More from Filmibeat

English summary
Bollywood Actress Aishwarya Rai Bachchan asked to take lesser remuneration for Fanne Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X