»   » ವಿಶ್ವ ಶಾಂತಿಮಂತ್ರ ಪಠಿಸಿದ ತಾರೆ ಐಶ್ವರ್ಯಾ ರೈ

ವಿಶ್ವ ಶಾಂತಿಮಂತ್ರ ಪಠಿಸಿದ ತಾರೆ ಐಶ್ವರ್ಯಾ ರೈ

Posted By:
Subscribe to Filmibeat Kannada

ಮಾಜಿ ವಿಶ್ವ ಸುಂದರಿ, ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಇತ್ತೀಚಿಗಷ್ಟೇ ನ್ಯೂಯಾರ್ಕ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಶಾಂತಿ ದಿನ' ಆಚರಣೆಯ ಸಮಾರಂಭಕ್ಕೆ ಹೋಗಿದ್ದರು. ಬಂದಿದ್ದ ಎಲ್ಲಾ ಸೆಲೆಬ್ರೆಟಿಗಳ ಮಧ್ಯದಲ್ಲಿ ಎಂದಿನಂತೆ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಮಿಂಚಿದ ಐಶ್ವರ್ಯಾ ರೈ, ಕಪ್ಪು ಮತ್ತು ಕ್ರೀಮ್ ಬಣ್ಣಗಳ ಸಂಗಮದ ಡ್ರೆಸ್ ನಲ್ಲಿ ಮಿರಮಿರ ಮಿಂಚುತ್ತಿದ್ದರು. ಈ ಸಮಾರಂಭಕ್ಕೆ ಹಾಲಿವುಡ್ ಖ್ಯಾತ ನಟ ಮಿಚೆಲ್ ಡೌಗ್ಲಾಸ್ ಸಹ ಬಂದಿದ್ದರು.

ಈಗಾಗಲೇ ಹಾಲಿವುಡ್ ಚಿತ್ರಗಳಲ್ಲೂ ನಟಿಸಿರುವ ಐಶೂ, ವಿಶ್ವದಾದ್ಯಂತ ಅಭಿಮಾನಿ ಬಳಗ ಹೊಂದಿದ್ದಾರೆ. ವಿಶ್ವಸುಂದರಿ ಪಟ್ಟ ಗಿಟ್ಟಿಸಿದಾಗಲೇ ಇಡೀ ವಿಶ್ವಕ್ಕೆ ಪರಿಚಯವಾಗಿದ್ದ ಐಶ್ವರ್ಯಾ ರೈ, ಈಗಂತೂ ಬಾಲಿವುಡ್ ಟಾಪ್ ನಟಿ ಮಾತ್ರವಲ್ಲದೇ ಹಾಲಿವುಡ್ ನಲ್ಲಿ ತಮ್ಮ ಅಭಿನಯ, ಬೆಡಗುಗಳಿಂದ ಭಾರಿ ಹೆಸರಾದರವರು. ಇಂಥ ಐಶ್ವರ್ಯಾ ರೈ ಅಂತಾರಾಷ್ಟ್ರೀಯ ಶಾಂತಿ ದಿನದ ಸಮಾರಂಭಕ್ಕೆ ಆಹ್ವಾನಿತರಾಗಿ ವಿಶ್ವ ಮಟ್ಟದಲ್ಲಿ ಭಾರತದ ಖ್ಯಾತಿ ಹೆಚ್ಚಿಸಿದ್ದಾರೆ.

ಈ ವಿಷಯ ಒಂದುಕಡೆಯಾದರೆ ಇನ್ನೊಂದು ಕಡೆ ಐಶ್ವರ್ಯಾ ರೈ ಮಗಳು ಆರಾಧ್ಯಾ ಬಚ್ಚನ್ ಇತ್ತೀಚಿಗಷ್ಟೇ ಮೊದಲ ಬಾರಿಗೆ ಮಾಧ್ಯಮದವ ಕಣ್ಣಿಗೆ ಬಿದ್ದಿದ್ದು ಬಹುದೊಡ್ಡ ಸುದ್ದಿಯಾಗಿದೆ. ಇಷ್ಟು ದಿನವೂ ಬಚ್ಚನ್ ಪರಿವಾರದ ಮಗು ಆರಾಧ್ಯಾ ಮೀಡಿಯಾದ ಕಣ್ಣಿಗೆ ಬಿದ್ದಿರಲಿಲ್ಲ. ಆಕೆಯನ್ನು ನೋಡಲು, ಫೋಟೋ ತೆಗೆಯಲು ಮಾಧ್ಯಮದವರು ಪಟ್ಟ ಹರಸಾಹಸ ವ್ಯರ್ಥವಾಗಿತ್ತು. ಆದರೀಗ ಆರಾಧ್ಯಾ ಫೋಟೋ ಎಲ್ಲಡೆ ಹರಿದಾಡುತ್ತಿದೆ.

ಆಶ್ಚರ್ಯವೆಂದರೆ, ಆರಾಧ್ಯಾ ಫೋಟೋ ನೋಡಿರುವ ಐಶ್ವರ್ಯಾ ರೈ ಹಾಗೂ ಬಚ್ಚನ್ ಕುಟುಂಬದ ಅಸಂಖ್ಯಾತ ಅಭಿಮಾನಿಗಳು ಅಷ್ಟಕ್ಕೇ ತೃಪ್ತಿಯಾಗಿಲ್ಲ. ಬದಲಿಗೆ ಐಶೂ ತೋಳತೆಕ್ಕೆಯಲ್ಲಿರುವ ಮಗು ಆರಾಧ್ಯಾರ ಫೋಟೋದಂತೆ ತಾತ ಅಮಿತಾಬ್ ಬಚ್ಚನ್ ಜೊತೆ ಇರುವ ಆರಾಧ್ಯಾ ಫೋಟೋ ಕೂಡ ಬೇಕೆಂಬ ಬೇಡಿಕೆಯನ್ನು ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ತಾಣಗಳ ಮೂಲಕ ನೀಡುತ್ತಿದ್ದಾರೆ ಅಭಿಮಾನಗಳು. ಇದೂ ಅಮಿತಾಬ್ ಆಸೆ ಕೂಡ ಆಗಿದೆ ಎಂಬುದನ್ನು ಇದೀಗ ತಿಳಿದ ಅಭಿಮಾನಿಗಳು ಅದಕ್ಕಾಗಿ ಕಾಯುತ್ತಿದ್ದಾರೆ. (ಏಜೆನ್ಸೀಸ್)

English summary
Aishwarya Rai Bachchan recently went to New York on the occasion of International Peace Day to attend the peace bell ceremony.
 
Please Wait while comments are loading...