For Quick Alerts
  ALLOW NOTIFICATIONS  
  For Daily Alerts

  ಇನ್ಸ್ಟಾಗ್ರಾಂಗೆ ಕಾಲಿಟ್ಟ ಐಶ್ವರ್ಯ ರೈ ಬಚ್ಚನ್

  By Pavithra
  |

  ಸಿನಿಮಾ ಸ್ಟಾರ್ ಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ ಅದರಲ್ಲೂ ಟ್ವಿಟ್ಟರ್ ಫೇಸ್ಬುಕ್ ಇನ್ಸ್ಟಾಗ್ರಾಂಗಳಲ್ಲಿ ಸ್ಟಾರ್ ಗಳು ಹೆಚ್ಚಿನ ಕಾಲ ಕಳೆಯುತ್ತಿದ್ದಾರೆ . ಆದರೆ ಬಾಲಿವುಡ್ ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳಾದರೂ ನಟಿ ಐಶ್ವರ್ಯ ರೈ ಮಾತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಕಾಣಿಸಿಕೊಂಡಿರಲಿಲ್ಲ .ಇತ್ತೀಚೆಗೆ ನಟಿ ಐಶ್ವರ್ಯಾ ರೈ ಇನ್ಸ್ಟಾಗ್ರಾಂನಲ್ಲಿ ತಮ್ಮ ಹೊಸ ಖಾತೆಯನ್ನು ತೆರೆದಿದ್ದಾರೆ.

  ಐಶ್ವರ್ಯ ರೈ ಬಚ್ಚನ್ ಹೆಸರಿನಲ್ಲಿ ಐಶ್ವರ್ಯ ಅಕೌಂಟ್ ಓಪನ್ ಮಾಡಿದ್ದು ಪ್ರೊಫೈಲ್ ಪಿಕ್ ಬಿಟ್ಟು ಬೇರೆ ಯಾವುದೇ ಫೋಟೋವನ್ನು ಹಾಕಿಲ್ಲ .ಇನ್ಸ್ಟಾಗ್ರಾಂ ಖಾತೆ ತೆರೆದ ಒಂದೇ ದಿನಕ್ಕೆ ಸುಮಾರು ಹದಿನಾರು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಐಶ್ವರ್ಯ ರೈ ಹೊಂದಿದ್ದಾರೆ.

  ಸೋನಂ ಕಪೂರ್ ಮದುವೆಯಲ್ಲಿ ಗಮನ ಸೆಳೆದ ಮಾಜಿ ಪ್ರೇಮಿಗಳುಸೋನಂ ಕಪೂರ್ ಮದುವೆಯಲ್ಲಿ ಗಮನ ಸೆಳೆದ ಮಾಜಿ ಪ್ರೇಮಿಗಳು

  ಅಕೌಂಟ್ ಓಪನ್ ಮಾಡಿ ಒಂದು ದಿನ ಕಳೆದರೂ ನಟಿ ಐಶ್ವರ್ಯ ಯಾವುದೇ ಫೋಟೋವನ್ನು ಅಪ್ಲೋಡ್ ಮಾಡದೇ ಇರುವುದು ವಿಶೇಷ .ಸಿನಿಮಾರಂಗ ಸೇರಿದಂತೆ ಅಭಿಮಾನಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಐಶ್ವರ್ಯ ರೈ ಅಕೌಂಟನ್ನು ಫಾಲೋ ಮಾಡುತ್ತಿದ್ದಾರೆ .ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಕ್ಕೆ ಬಂದಿರುವ ಐಶ್ವರ್ಯ ತಮ್ಮ ಅಕೌಂಟ್ ನಲ್ಲಿ ಯಾವ ರೀತಿಯ ಮಾಹಿತಿಯನ್ನು ಅಭಿಮಾನಿಗಳಿಗೆ ನೀಡುತ್ತಾರೆ ಎನ್ನುವ ಕುತೂಹಲ ಜನರಲ್ಲಿ ಮೂಡಿದೆ

  ಇನ್ಸ್ಟಾಗ್ರಾಮ್ ಅಕೌಂಟ್ ಕ್ರಿಯೇಟ್ ಮಾಡಿ ಸಾಕಷ್ಟು ವರ್ಷಗಳಾದರೂ ಇನ್ನೂ ಸಾವಿರಗಟ್ಟಲೆ ಅಭಿಮಾನಿಗಳನ್ನು ಪಡೆಯಲು ಸಾಹಸ ಪಡೆಯುತ್ತಿರುವ ಕಲಾವಿದರ ಮಧ್ಯೆ ಐಶ್ವರ್ಯ ಒಂದೇ ದಿನದಲ್ಲಿ ಇಷ್ಟೊಂದು ಅಭಿಮಾನಿಗಳನ್ನು ಪಡೆದುಕೊಂಡಿರುವುದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

  Read more about: aishwarya rai bollywood
  English summary
  bollywood actress Aishwarya Rai Bachchan finally made her Instagram debut with the handle named "aishwaryaraibachchan_arb

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X