For Quick Alerts
  ALLOW NOTIFICATIONS  
  For Daily Alerts

  ತಂದೆಯ ಜನ್ಮ ವಾರ್ಷಿಕೋತ್ಸವ; ಅಪ್ಪನನ್ನು ನೆನೆದು ಭಾವುಕರಾದ ನಟಿ ಐಶ್ವರ್ಯ ರೈ

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ತನ್ನ ತಂದೆಯನ್ನು ಕಳೆದುಕೊಂಡು 3 ವರ್ಷಗಳಾಗಿದೆ. ಅಪ್ಪನನ್ನು ತುಂಬಾ ಪ್ರೀತಿಸುತ್ತಿದ್ದ ಐಶ್ವರ್ಯ ತಂದೆಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇಂದು (ನವೆಂಬರ್ 21) ಐಶ್ವರ್ಯ ರೈ ತಂದೆ ಕೃಷ್ಣರಾಜ್ ರೈ ಅವರ ಹುಟ್ಟುಹಬ್ಬ.

  ತಂದೆಯ ಹುಟ್ಟುಹಬ್ಬದ ದಿನ ಮುದ್ದಿನ ಮಗಳು ಐಶ್ವರ್ಯ ರೈ ಭಾವನಾತ್ಮಕ ಪತ್ರ ಬರೆದಿದ್ದಾರೆ. ತಂದೆಯನ್ನು ನೆನೆದು ಐಶ್ವರ್ಯ ಆಗಾಗ ಭಾವುಕರಾಗುತ್ತಿರುತ್ತಾರೆ. ಇಂದು ಹುಟ್ಟುಹಬ್ಬದ ಸಮಯದಲ್ಲಿ ಅಪ್ಪನ ಫೋಟೋವನ್ನು ಶೇರ್ ಮಾಡಿ, 'ಹುಟ್ಟುಹಬ್ಬದ ಶುಭಾಶಯಗಳು ಡ್ಯಾಡಿ, ಅಜ್ಜಾ. ನಮ್ಮ ಎವರ್ ಸ್ಮೈಲಿಂಗ್ ಗಾರ್ಡಿಯನ್. ನಿಮ್ಮನ್ನು ಅತೀ ಹೆಚ್ಚು ಪ್ರೀತಿಸುವ ಏಂಜಲ್' ಎಂದು ಬರೆದುಕೊಂಡಿದ್ದಾರೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿ ಆರಾಧ್ಯ: ಮಗಳಿಗೆ ಭಾವುಕ ಪತ್ರ ಬರೆದ ಐಶ್ವರ್ಯ ರೈಹುಟ್ಟುಹಬ್ಬದ ಸಂಭ್ರಮದಲ್ಲಿ ಆರಾಧ್ಯ: ಮಗಳಿಗೆ ಭಾವುಕ ಪತ್ರ ಬರೆದ ಐಶ್ವರ್ಯ ರೈ

  ಇನ್ನು ಐಶ್ವರ್ಯ ಪತಿ ನಟ ಅಭಿಷೇಕ್ ಬಚ್ಚನ್ ಸಹ ಮಾವನ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಡ್ಯಾಡ್. ಮಿಸ್ ಯು' ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

  Recommended Video

  Act 1978 : ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಅನ್ನೋದು ನಿಮಗೆ ಗೊತ್ತಾಗುತ್ತೆ |Sampat| Filmibeat Kannada

  ಐಶ್ವರ್ಯ ರೈ ಅವರ ತಂದೆ, ಕೃಷ್ಣರಾಜ್ ರೈ 2017ರಲ್ಲಿ ನಿಧನ ಹೊಂದಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ತಂದೆ ಕಷ್ಣರಾಜ್, ಚಿಕಿತ್ಸೆ ಫಲಕಾರಿಯಾಗದೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

  English summary
  Bollywood Actress Aishwarya Rai Bachchan remembers her father on his birth Anniversary.
  Saturday, November 21, 2020, 9:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X