»   » ರು.50 ಕೋಟಿ ಬಂಗಲೆಗೆ ತಾರೆ ಐಶ್ವರ್ಯಾ ರೈ?

ರು.50 ಕೋಟಿ ಬಂಗಲೆಗೆ ತಾರೆ ಐಶ್ವರ್ಯಾ ರೈ?

By ಉದಯರವಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬಾಲಿವುಡ್ ಸಿನಿಮಾ ತಾರೆಗಳಿಗೆ ಲಕ್ಷಗಳು ಎಂದರೆ ಲಕ್ಷ್ಯವೇ ಇರಲ್ಲ. ಅವರ ಸಂಭಾವನೆ ಏನಿದ್ದರೂ ಕೋಟಿಗಳಲ್ಲೇ ಇರುತ್ತದೆ. ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಹೊಸ ಬಂಗಲೆಯನ್ನು ಕೊಂಡುಕೊಂಡಿದ್ದಾರೆ. ಅದರ ಬೆಲೆ ರು.50 ಕೋಟಿ ಎನ್ನಲಾಗಿದೆ.

  ಈ ಹೊಸ ಬಂಗಲೆ ಇರುವುದು ಈಗಿನ ಅಮಿತಾಬ್ ಅವರ ಜಲ್ಸಾ ನಿವಾಸದ ಹಿಂಭಾಗದಲ್ಲಿ. ಬಚ್ಚನ್ ಕೊಳ್ಳುತ್ತಿರುವ ಐದನೇ ಬಂಗಲೆ ಇದಂತೆ. ಈ ಹಿಂದೆ ಅವರು ಜಲ್ಸಾ, ಪ್ರತೀಕ್ಷಾ, ವತ್ಸಾ ಹಾಗೂ ಜನಕ್ ಎಂಬ ಬಂಗಲೆಗಳನ್ನು ಕೊಂಡುಕೋಂಡಿದ್ದರು.

  ಕಳೆದ ಕೆಲ ವರ್ಷಗಳಿಂದಲೂ ಬಚ್ಚನ್ ಕುಟುಂಬ ಹೊಸ ಬಂಗಲೆಗಾಗಿ ಹುಡುಕಾಟ ನಡೆಸಿತ್ತಂತೆ. ಸತತ ಪ್ರಯತ್ನದ ಬಳಿಕ ಈಗಿನ ಜಲ್ಸಾ ಇರುವ ಪ್ರದೇಶದಲ್ಲೇ ಅವರಿಗೆ ಹೊಸ ಬಂಗಲೆ ಸಿಕ್ಕಿದೆ. ಮೊಮ್ಮಗಳು ಆರಾಧ್ಯ ಬಚ್ಚನ್ ಮನೆಗೆ ಬಂದ ಮೇಲೆ ಹೊಸ ಬಂಗಲೆ ಕನಸು ಇನ್ನಷ್ಟು ಗರಿಗೆದರಿತ್ತು. ಈಗ ಅದು ಸಾಕಾರವಾಗಿದೆ.

  ಹೊಸ ಬಂಗಲೆ ವಿಸ್ತೀರ್ಣ 8,000 ಚದರ ಅಡಿ

  ಸದ್ಯಕ್ಕೆ ಅಭಿಷೇಕ್ ಬಚ್ಚನ್, ಐಶ್ವರ್ಯಾ ಹಾಗೂ ಆರಾಧ್ಯ ಇವರೆಲ್ಲಾ ಜಲ್ಸಾದಲ್ಲಿಯೇ ಇದ್ದಾರೆ. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಹೊಸ ಬಂಗಲೆಗೆ ಸ್ಥಳಾಂತರವಾಗಲಿದ್ದಾರೆ ಎಂಬ ಸುದ್ದಿಯೂ ಇದೆ. ಈಗಿನ ಹೊಸ ಬಂಗಲೆ 8,000 ಚದರ ಅಡಿಗಳಷ್ಟು ಸವಿಸ್ತಾರವಾಗಿದೆ.

  ಅಭಿಷೇಕ್, ಅಮಿತಾಬ್ ಹೆಸರಲ್ಲಿ ರಿಜಿಸ್ಟರ್ಡ್

  ಈ ಹೊಸ ಬಂಗಲೆ ಅಭಿಷೇಕ್ ಬಚ್ಚನ್ ಹಾಗೂ ಅಮಿತಾಬ್ ಹೆಸರಲ್ಲಿ ರಿಜಿಸ್ಟರ್ಡ್ ಆಗಿದೆ. ಈಗಿನ ಜಲ್ಸಾ ನಿವಾಸಕ್ಕೆ ಹೊಂದಿಕೊಂಡಂತೆ ಹೊಸ ಬಂಗಲೆ ಇತ್ತು. ಆದರೆ ಎರಡೂ ಬಂಗಲೆಗಳನ್ನು ಕಾಂಪೌಂಡ್ ಬೇರ್ಪಡಿಸಿತ್ತು. ಈಗ ಈ ಕಾಂಪೌಂಡ್ ನ್ನು ಒಡೆದು ಎರಡಕ್ಕೂ ಒಂದೇ ಕಾಂಪೌಂಡ್ ಮಾಡಲಾಗಿದೆಯಂತೆ.

  ಪ್ರತೀಕ್ಷಾದಲ್ಲಿ ನಡೆದ ಐಶ್ವರ್ಯಾ ರೈ ಮದುವೆ

  ಬಿಗ್ ಬಿ ಅವರ ಮತ್ತೊಂದು ಬಂಗಲೆ ಪ್ರತೀಕ್ಷಾದಲ್ಲಿ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಒಟ್ಟಾರೆಯಾಗಿ ಅಮಿತಾಬ್ ಗೆ ಇಷ್ಟೆಲ್ಲಾ ಬಂಗಲೆಗಳ ಹುಚ್ಚು ಅದ್ಯಾಕಿದೆಯೋ ಏನೋ?

  ಕುಟುಂಬ ವಿಸ್ತರಿಸಿದ್ದೂ ಒಂದು ಕಾರಣವೇ?

  ತಮ್ಮ ಕುಟುಂಬ ಬೆಳೆಯುತ್ತಿರುವುದು. ಎಲ್ಲರೂ ಒಂದೇ ಕಡೆ ಇರುವುದು ಅಷ್ಟು ಕ್ಷೇಮ ಅಲ್ಲ ಎಂಬ ಕಾರಣಕ್ಕೋ ಏನೋ ಬಿಗ್ ಬಿ ಹೊಸ ಬಂಗಲೆಯನ್ನು ಖರೀದಿಸಿದ್ದಾರೆ.

  ಮೂರೇ ಮೂರು ಜನ ಅದೇಗೆ ಇರುತ್ತಾರೋ?

  ಇಷ್ಟಕ್ಕೂ 8,000 ಚದರ ಅಡಿಗಳಷ್ಟು ಸುವಿಶಾಲವಾದ ಸ್ಥಳದಲ್ಲಿ ಅಭಿಷೇಕ್, ಐಶ್ವರ್ಯಾ ರೈ ಹಾಗೂ ಪುಟ್ಟ ಪೋರಿ ಆರಾಧ್ಯ ಮೂರೇ ಮೂರು ಜನ ಅದು ಹೇಗೆ ಇರುತ್ತಾರೋ ಏನೋ ಎಂಬುದು ಸಿನಿಕರ ಅನ್ನಿಸಿಕೆ.

  English summary
  Bollywood megastar Amitabh Bachchan has reportedly bought a new bungalow worth Rs 50 crore, which is located just behind the family's primary residence, Jalsa. As per the reports, this is the fifth bungalow, the Bachchans have bought, after Jalsa, Prateeksha, Vatsa and Janak.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more