Don't Miss!
- News
Breaking: ಮಧ್ಯಪ್ರದೇಶದಲ್ಲಿ ಭಾರತೀಯ ವಾಯಪಡೆ ಯುದ್ಧ ವಿಮಾನಗಳ ಡಿಕ್ಕಿ, ಪತನ
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Technology
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾದಂಬರಿ ಆಧಾರಿತ ಇಂಡೋ-ಅಮೆರಿಕನ್ ಚಿತ್ರದಲ್ಲಿ ಐಶ್ವರ್ಯ ರೈ!
ಭಾರತೀಯ ಚಿತ್ರರಂಗದ ಸ್ಟಾರ್ ನಟಿ ಐಶ್ವರ್ಯ ರೈ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಮದುವೆ, ಮಗು ಅಂತ ಐಶ್ವರ್ಯ ರೈ ಬಣ್ಣದ ಲೋಕದಲ್ಲಿ ಅಷ್ಟಾಗಿ ಸಕ್ರಿಯವಾಗಿಲ್ಲ. ಆದರೆ ಐಶ್ವರ್ಯ ಅವರ ಅಭಿನಯವನ್ನು ತೆರೆಯ ಮೇಲೆ ನೋಡಲು ಸಾಕಷ್ಟು ಮಂದಿ ಕಾಯುತ್ತಿರುತ್ತಾರೆ.
ಈಗ ಐಶ್ವರ್ಯ ಹೊಸ ಚಿತ್ರದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಆದರೆ ಈ ಬಾರಿ ಐಶ್ವರ್ಯ ರೈ ಬಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ಆಂಗ್ಲೋ ಇಂಡಿಯನ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಐಶ್ವರ್ಯ ರೈ ಮತ್ತೆ ಹಾಲಿವುಡ್ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಹಾಲಿವುಡ್‌ಗೆ ಐಶ್ವರ್ಯ ರೈ ರೀ ಎಂಟ್ರಿ!
ನಟಿ ಐಶ್ವರ್ಯ ರೈ ಇಂಗ್ಲೀಷ್ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2004ರಲ್ಲಿ 'ಬ್ರೈಡ್ ಅಂಡ್ ಪ್ರಿಜುಡೀಸ್' ಎನ್ನುವ ಚಿತ್ರದಲ್ಲಿ ಐಶ್ವರ್ಯ ರೈ ಅಭಿನಯಿಸಿದ್ದರು. ಈ ಮೂಲಕ ಐಶ್ವರ್ಯ ಅಂತರರಾಷ್ಟ್ರೀಯ ಚಿತ್ರದ ಅಭಿನಯಕ್ಕೆ ಪದಾರ್ಪಣೆ ಮಾಡಿದರು. ಈಗ ಹಲವು ವರ್ಷಗಳ ನಂತರ ಈಗ ಮತ್ತೆ ಅಂತರರಾಷ್ಟ್ರೀಯ ಚಿತ್ರದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ.

ಐಶ್ವರ್ಯ ರೈ ಅಭಿನಯಿಸುತ್ತಿರುವ ಈ ಚಿತ್ರವನ್ನು ಗಾಯಕಿ, ಬರಹಗಾರ್ತಿ ಇಶಿತಾ ಗಂಗೂಲಿ ನಿರ್ದೇಶನ ಮಾಡುತ್ತಿದ್ದಾರೆ. ಇದು ರವೀಂದ್ರನಾಥ್ ಟ್ಯಾಗೋರ್ ಅವರ ಕಾದಂಬರಿ 'ಥ್ರಿ ವುಮೆನ್ಸ್' ಆಧಾರಿತ ಚಿತ್ರ. ಇದು ಒಂದು ಇಂಡೋ-ಅಮೆರಿಕನ್ ಸಿನಿಮಾ. ಚಿತ್ರಕ್ಕೆ 'ದಿ ಲೆಟರ್' ಎನ್ನುವ ಶೀರ್ಷಿಕೆಯನ್ನು ಇಡಲಾಗಿದೆಯಂತೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಕೂಡ ಆರಂಭ ಆಗಲಿದೆ ಎನ್ನುವ ಮಾಹಿತಿ ಹೊರ ಬಂದಿದೆ.
ಐಶ್ವರ್ಯ ರೈ ಸಿನಿ ಜರ್ನಿಗೆ ಸೇರಲಿದೆ ಹೊಸ ಪಾತ್ರ!
ಐಶ್ವರ್ಯಾ ರೈ ವಿಶ್ವ ಸುಂದರಿ ಪಟ್ಟಕ್ಕೇರಿದ ಬಳಿಕ ತಮಿಳಿನ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
'ಇರುವನ್ ಇನ್ ಮನಿಲಾ' ಚಿತ್ರದ ಮೂಲಕ ಮೊದಲ ಬಾರಿಗೆ ಐಶ್ವರ್ಯಾ ರೈ ಬಣ್ಣ ಹಚ್ಚಿದರು. ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಐಶ್ವರ್ಯ ರೈ ಕಾಲಿಟ್ಟಿರು. ಅಲ್ಲಿಂದ ಅವರು ಸಾಲು, ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಬಂದರು. ಬಳಿಕ ಭಾರತೀಯ ಚಿತ್ರರಂಗದ ಎಲ್ಲಾ ಚಿತ್ರರಂಗಗಳಲ್ಲೂ ಐಶ್ವರ್ಯಾ ರೈ ಅವರಿಗೆ ಬೇಡಿಕೆ ಹೆಚ್ಚಾಯಿತು. ಹಲವು ವರ್ಷ ಐಶ್ವರ್ಯ ರೈ ಬಾಲಿವುಡ್, ತಮಿಳು, ತೆಲುಗಿನಲ್ಲಿ ಬಹುಬೇಡಿಕೆಯ ನಟಿ ಆಗಿದ್ದರು. ಮದುವೆ ಆಗಿ ಹಲವು ವರ್ಷಗಳು ಕಳೆದರು ಆಕೆಗೆ ಬೇಡಿಕೆ ಕುಂದಿಲ್ಲ. ಹಾಗಾಗಿ ಆಂಗ್ಲೋ ಇಂಡಿಯನ್ ಚಿತ್ರದಲ್ಲಿ ಐಶ್ವರ್ಯ ರೈ ಅಭಿನಯಿಸುತ್ತಿದ್ದಾರೆ.