»   » ಆಸ್ಟ್ರೇಲಿಯಾದಲ್ಲಿ ಭಾರತದ ಧ್ವಜಾರೋಹಣ ನೆರವೇರಿಸಿದ ಐಶ್ವರ್ಯ ರೈ

ಆಸ್ಟ್ರೇಲಿಯಾದಲ್ಲಿ ಭಾರತದ ಧ್ವಜಾರೋಹಣ ನೆರವೇರಿಸಿದ ಐಶ್ವರ್ಯ ರೈ

Posted By:
Subscribe to Filmibeat Kannada

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಭಾರತೀಯ ಚಲನಚಿತ್ರೋತ್ಸವ ( Indian Film Festival of Melbourne) 2017 ರಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಭಾಗವಹಿಸಿದ್ದು, ಪ್ರಪ್ರಥಮ ಭಾರಿಗೆ ಭಾರತೀಯ ಧ್ವಜಾರೋಹಣ ನೆರವೇರಿಸಿದ್ದಾರೆ.

ಮೆಲ್ಬೋರ್ನ್ ಚಿತ್ರೋತ್ಸವದಲ್ಲಿ ಭಾರತೀಯ ತ್ರಿವರ್ಣ ಧ್ವಜಾರೋಹಣ ನೆರವೇರಿಸದ ಮೊದಲ ಮಹಿಳೆ ಎಂಬ ಕೀರ್ತಿಗೆ ಬಚ್ಚನ್ ಸೊಸೆ ಐಶ್ವರ್ಯ ಪಾತ್ರರಾದರು. ಈ ಫೋಟೋಗಳನ್ನ iffm ಅಧಿಕೃತವಾಗಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದೆ.

Aishwarya Rai becomes first woman to hoist Indian flag at iffm

ಈ ವೇಳೆ ಐಶ್ವರ್ಯ ರೈ ಅವರ ಮಗಳು ಆರಾಧ್ಯ ಕೂಡ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಧ್ವಜಾರೋಹಣ ನಂತರ ಮಾತನಾಡಿದ ಐಶ್, ಧ್ವಜಾರೋಹಣ ನೆರವೇರಿಸುವ ಅವಕಾಶ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ತಿಳಿಸಿದರು. ಇದು ನನ್ನ ಜೀವನದ ಒಂದು ಸಂತೋಷಕರ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

English summary
Aishwarya Rai Bachchan becomes first woman to hoist Indian flag at Indian Film Festival of Melbourne 2017

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada