For Quick Alerts
  ALLOW NOTIFICATIONS  
  For Daily Alerts

  ಕಾನ್ ಚಿತ್ರೋತ್ಸವದಲ್ಲಿ ಧುಮ್ಮುಕ್ಕಿದ ಐಶೂ ಸೌಂದರ್ಯ

  By ರವಿಕಿಶೋರ್
  |

  ಕಳೆದ ಬಾರಿ ಬಾಲಿವುಡ್ ತಾರೆ ಐಶ್ವರ್ಯಾ ರೈ ಕಾನ್ ಚಿತ್ರೋತ್ಸವದಲ್ಲಿ ಪಾಲ್ಗೊಂಡಾಗ ಇಷ್ಟೆಲ್ಲಾ ಥಳುಕು ಬಳುಕು ಕಾಣಿಸಿರಲಿಲ್ಲ. ಆಗಷ್ಟೇ ಇನ್ನೂ ತಾಯ್ತನದ ಆನಂದ ಅನುಭವಿಸುತ್ತಿದ್ದ ಅವರು ಗ್ಲಾಮರ್ ಗೆ ಅಷ್ಟಾಗಿ ಪ್ರಾಮುಖ್ಯತೆ ನೀಡಿರಲಿಲ್ಲ.

  ಈಗ ಅವರು ಸಂಪೂರ್ಣವಾಗಿ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. 67ನೇ ಕಾನ್ ಚಿತ್ರೋತ್ಸವದಲ್ಲಿ ಅವರ ಸೌಂದರ್ಯ ಧುಮ್ಮುಕ್ಕಿದೆ. ರೆಡ್ ಕಾರ್ಪೆಟ್ ಮೇಲೆ ಅವರು ಹೆಜ್ಜೆ ಹಾಕುತ್ತಿದ್ದರೆ ಎಲ್ಲರ ಕಣ್ಣು, ಕ್ಯಾಮೆರಾಗಳು ಅವರ ಮೇಲೆ ಫೋಕಸ್. [ಬಾಲಿವುಡ್ ನಲ್ಲಿ ಕರಾವಳಿ ನಕ್ಷತ್ರಗಳ ಹೊಳಪು ]

  ತಾಯಿಯಾದ ಬಳಿಕ ಅವರ ದೇಹದಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದವು. ತೂಕ ಹೆಚ್ಚಾಗಿತ್ತು, ಮುಖ ಅರಳಿದ ಗುಲಾಬಿಯಂತಾಗಿತ್ತು. ಈಗ ಮತ್ತೆ ಬಣ್ಣ ಹಚ್ಚುವ ಮೂಲಕ ಮುಖ ಗುಲಾಬಿ ಮೊಗ್ಗಿನಂತಾಗಿದೆ. ಕಾನ್ ಚಿತ್ರೋತ್ಸದವಲ್ಲಿ ಐಶೂ ಹೇಗೆಲ್ಲಾ ಕಾಣಿಸಿಕೊಂಡರು...ಸ್ಲೈಡ್ ನಲ್ಲಿ.

  ಮುಂಚಿನಷ್ಟು ಅಲ್ಲದಿದ್ದರೂ ಅಷ್ಟೇ ಇಷ್ಟೋ ಬದಲಾವಣೆಯಂತೂ ಅವರ ದೇಹದಲ್ಲಿ ಗೋಚರಿಸುತ್ತಿದೆ. ಈ ಸಿನಿಮೋತ್ಸವಕ್ಕೆ ಐಶೂ ತನ್ನ ಮಗಳು ಆರಾಧ್ಯ ಬಚ್ಚನ್ ರನ್ನೂ ಕರೆದುಕೊಂಡು ಹೋಗಿದ್ದಾರೆ.

  ಕ್ಲಾಸಿ ಲುಕ್ ನಲ್ಲಿ ನೋಡುಗರ ಮನಕದ್ದ ಚೆಲುವೆ

  ಕ್ಲಾಸಿ ಲುಕ್ ನಲ್ಲಿ ನೋಡುಗರ ಮನಕದ್ದ ಚೆಲುವೆ

  ಮೊದಲ ದಿನ ಗೋಲ್ಡನ್ ಮೆರ್ ಮೆಯ್ಡ್ ಗೌನ್ ನಲ್ಲಿ ಕಾಣಿಸಿಕೊಂಡರು. ಅದಾದ ಎರಡನೇ ದಿನಕ್ಕೆ ಕ್ಲಾಸಿ ಲುಕ್ ನಲ್ಲಿ ನೋಡುಗರ ಮನಸೋರೆಗೊಂಡರು.

  ಹಲವರ ನಡುವೆ ಮಿನುಗಿದ ಐಶ್ವರ್ಯಾ ರೈ

  ಹಲವರ ನಡುವೆ ಮಿನುಗಿದ ಐಶ್ವರ್ಯಾ ರೈ

  ಲೋರಿಯಲ್ ಪ್ಯಾರಿಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಅವರು ಹಲವು ತಾರೆಗಳ ನಡುವೆ ಮಿನುಗಿದರು.

  ಇನ್ನೂ ಹಲವು ಬಾಲಿವುಡ್ ತಾರೆಗಳು

  ಇನ್ನೂ ಹಲವು ಬಾಲಿವುಡ್ ತಾರೆಗಳು

  ಈ ಬಾರಿ ಕಾನ್ ಸಿನಿಮೋತ್ಸವದಲ್ಲಿ ಸೋನಂ ಕಪೂರ್, ಫ್ರೀಡಾ ಪಿಂಟೋ, ಉದಯ್ ಚೋಪ್ರಾ ಹಾಗೂ ಮಲ್ಲಿಕಾ ಶೆರಾವತ್ ಸಹ ಭಾಗಿಯಾಗಿದ್ದಾರೆ.

  ಮತ್ಸ್ಯಕನ್ಯೆಯಂತೆ ಬಳುಕಿದ ಐಶ್ವರ್ಯಾ ರೈ

  ಮತ್ಸ್ಯಕನ್ಯೆಯಂತೆ ಬಳುಕಿದ ಐಶ್ವರ್ಯಾ ರೈ

  ಮತ್ಸ್ಯಕನ್ಯೆಯಂತೆ ತಮ್ಮ ಮೈಮಾಟವನ್ನು ಬಳುಕಿಸಿದ ಐಶ್ವರ್ಯಾ ರೈ ಉಳಿದ ತಾರೆಗಳ ನಿದ್ದೆಯನ್ನೂ ಕೆಡಿಸಿದ್ದಾರೆ.

  ಹನ್ನೆರಡು ದಿನಗಳ ಕಾಲ ಫ್ರಾನ್ಸ್ ನಲ್ಲಿ ಸ್ವರ್ಗ

  ಹನ್ನೆರಡು ದಿನಗಳ ಕಾಲ ಫ್ರಾನ್ಸ್ ನಲ್ಲಿ ಸ್ವರ್ಗ

  ಮೇ.14ರಿಂದ 25ರ ತನಕ ಕೇನ್ ಚಿತ್ರೋತ್ಸವ ಫ್ರಾನ್ಸ್ ನಲ್ಲಿ ನಡೆಯುತ್ತಿದೆ. ಕೇವಲ ಸಿನಿಮಾ ತಾರೆಗಳಿಗಷ್ಟೇ ಅಲ್ಲ ಚಿತ್ರರಸಿಕರ ಪಾಲಿಗೆ ಕಾನ್ ಚಿತ್ರೋತ್ಸವ ಸ್ವರ್ಗದ ಸಮಾನ.

  ರೆಡ್ ಕಾರ್ಪೆಟ್ ಗಾಗಿ ಹಾತೊರೆಯುವ ತಾರೆಗಳು

  ರೆಡ್ ಕಾರ್ಪೆಟ್ ಗಾಗಿ ಹಾತೊರೆಯುವ ತಾರೆಗಳು

  ಇಲ್ಲಿ ಮಿಂಚಿದರೆ ಇಡೀ ಜಗತ್ತಿನ ಗಮನಸೆಳೆಯಬಹುದು. ಅದಕ್ಕಾಗಿ ಸಿನಿ ತಾರೆಗಳು ಇಲ್ಲಿನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಹಾಕಲು ಹಾತೊರೆಯುತ್ತಿರುತ್ತಾರೆ.

  English summary
  The former beauty queen and L'Oreal brand ambassador Aishwarya Rai Bachchan made her second appearance at the 67th Cannes Film Festival, 2014. The actress looked breathtaking when she graced the red carpet of The Search Cannes Film Festival premiere.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X