»   » ಐಶ್ವರ್ಯಾ ರೈ ಮಗಳ ಫೋಟೋ ಕಡೆಗೂ ಬಹಿರಂಗ

ಐಶ್ವರ್ಯಾ ರೈ ಮಗಳ ಫೋಟೋ ಕಡೆಗೂ ಬಹಿರಂಗ

Posted By:
Subscribe to Filmibeat Kannada
ಬಾಲಿವುಡ್ ತಾರೆ ಐಶ್ವರ್ಯಾ ರೈ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಮುದ್ದಿನ ಮೊಮ್ಮಗಳು ನೋಡಲು ಹೇಗಿದ್ದಾಳೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. 2011ನೇ ವರ್ಷ ನವೆಂಬರ್ ನಲ್ಲಿ ಐಶೂ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿವಾಹವಾದ ನಾಲ್ಕು ವರ್ಷಗಳ ಬಳಿಕ ಈ ಮಗು ಜನಿಸಿದೆ. ಈ ಮಗುವಿನ ದರ್ಶನ ನಾಮಕರಣ ಸಂದರ್ಭದಲ್ಲಾದರೂ ಆಗುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಯಿತು.

ಐಶೂ ಮಗಳಿಗೆ ಆರಾಧ್ಯ ಎಂದು ಹೆಸರಿಡಲಾಯಿತೇ ವಿನಃ ಮಗುವಿನ ಫೋಟೋ ಆಗಲಿ ಮಾಧ್ಯಮಗಳ ಮುಂದೆ ಆಕೆಯನ್ನು ತೋರಿಸಿದ್ದಾಗಲಿ ನಡೆಯಲೇ ಇಲ್ಲ. ಹಾಗಾಗಿ ಈ ಮಗುವಿನ ಬಗ್ಗೆ ಐಶೂ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಉಂಟಾಯಿತು.

"ತಮ್ಮ ಮಗಳು ಸಹಜವಾಗಿ ಎಲ್ಲರಂತೆ ಬೆಳೆಯಬೇಕು. ಆಕೆಯನ್ನು ಸಾರ್ವಜನಿಕವಾಗಿ ಎಲ್ಲರ ಎದುರು ಪ್ರದರ್ಶಿಸುವುದು ನಮಗೆ ಇಷ್ಟವಿಲ್ಲ" ಎಂದು ಒಮ್ಮೆ ಅಭಿಷೇಕ್ ಬಚ್ಚನ್ ಹೇಳಿಕೊಂಡಿದ್ದರು. ಹೋಗ್ಲಿ ಬಿಡಿ ಎಂದು ಅಭಿಮಾನಿಗಳು ಸುಮ್ಮನಾಗಿದ್ದರು.

ಏತನ್ಮಧ್ಯೆ ಚಿಕಾಗೋನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಗಳ ಜೊತೆ ಐಶ್ವರ್ಯಾ ರೈ ಆಗಮಿಸಿದ್ದರು. ಚಿಕಾಗೋಗೆ ತೆರಳುವ ಮುನ್ನ ನ್ಯೂಯಾರ್ಕ್ ಏರ್ ಪೋರ್ಟ್ ನಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದರು. ಅಲ್ಲಿ ಆರಾಧ್ಯಳ ಅರೆಬರೆ ಫೋಟೋಗಳು ಕ್ಯಾಮೆರಾ ಕಣ್ಣಿನಲ್ಲಿ ಬಂಧಿಯಾದವು.

ಈಗ ಅಮಿತಾಬ್ ಅವರ 70ನೇ ಹುಟ್ಟುಹಬ್ಬ ಸಂದರ್ಭದಲ್ಲಿ 11 ತಿಂಗಳ ಕೂಸು ಆರಾಧ್ಯ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದ್ದಾಳೆ. ಅಮಿತಾಬ್ ಅವರ ಹುಟ್ಟುಹಬ್ಬದ ಮೂಲಕ ಇದೇ ಮೊದಲ ಬಾರಿಗೆ ಆರಾಧ್ಯ ಫೋಟೋ ಮಾಧ್ಯಮಗಳಿಗೆ ಲೀಕ್ ಆಗಿದೆ. ಬಿಳಿ ಬಣ್ಣದ ಫ್ರಾಕ್ ನಲ್ಲಿ ಆರಾಧ್ಯ ಕಂಗೊಳಿಸುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು. (ಏಜೆನ್ಸೀಸ್)

English summary
Aishwarya Rai's 11 months old daughter Aaradhya Bachchan spotted publicly at grandpa Amitabh Bachchan’s 70th birthday party. Aradhya Bachchan makes her debut on stage at grandpa Amitabh Bachchan's 70th birthday bash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada