For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಬಗ್ಗೆ ಕೇಳಿದ್ದಕ್ಕೆ ಐಶ್ವರ್ಯ ರೈ ಉರಿದು ಬಿದ್ದಿದ್ಯಾಕೆ?

  By Sonu Gowda
  |

  ಇತ್ತೀಚೆಗೆ ನಟಿ ಐಶ್ವರ್ಯ ರೈ ಅವರು ಒಂದಲ್ಲಾ ಒಂದು ವಿಚಾರಕ್ಕೆ ಬಹಳ ಸುದ್ದಿಯಾಗುತ್ತಿದ್ದಾರೆ. ಮೊನ್ನೆ ಮೊನ್ನೆ ನೇರಳೆ ಬಣ್ಣದ ಲಿಪ್ ಸ್ಟಿಕ್ ಮತ್ತು ಪತಿ ಅಭಿಷೇಕ್ ಬಚ್ಚನ್ ಅವರ ವಿಚಾರದಲ್ಲಿ ಸುದ್ದಿಯಾದ ನಂತರ ಇದೀಗ ಮತ್ತೆ ಸದ್ದು ಮಾಡಿದ್ದಾರೆ.

  ಹೌದು ಐಶ್ವರ್ಯ ರೈ ಅವರ 'ಸರ್ಬ್ಜಿತ್' ಚಿತ್ರದ ಪತ್ರೀಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ನಟ ಸಲ್ಮಾನ್ ಖಾನ್ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಉರಿದು ಬಿದ್ದ ನಟಿ ಐಶ್ವರ್ಯ ರೈ ಅವರು ಕೂಡಲೇ ಪತ್ರೀಕಾಗೋಷ್ಠಿಯಿಂದ ಎದ್ದು ಹೊರನಡೆದಿದ್ದಾರೆ.[ಛೇ ಮುದ್ದು ಪತ್ನಿ ಐಶ್ವರ್ಯ ರೈಗೆ ಅಭಿಷೇಕ್ ಹೀಗೆ ಮಾಡಬಾರದಿತ್ತು]

  ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಅವರ ಸಂಬಂಧ ಹಳೇ ವಿಷ್ಯ. ಸದ್ಯಕ್ಕೆ ಅವರಿಬ್ಬರು ಪರಸ್ಪರ ಮುಖ ತೋರಿಸಿಕೊಳ್ಳದೇ ಯಾರ ಕಾಲ ಆಗಿತ್ತೋ ಏನೋ.

  ಈ ಮಧ್ಯೆ ಪತ್ರಕರ್ತನೊಬ್ಬ ಭವಿಷ್ಯದಲ್ಲಿ ಸಲ್ಮಾನ್ ಖಾನ್ ಅವರ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಮಾಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದಕ್ಕೆ ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡ ನಟಿ ಐಶ್ವರ್ಯ ರೈ ಅವರು ತಕ್ಷಣ ಅಲ್ಲಿಂದ ಕಾಲ್ಕಿತ್ತಿದ್ದಲ್ಲದೇ, ಅದಕ್ಕೂ ಮುನ್ನ ಮಾತನಾಡಿದ ಸಂದರ್ಶನದ ವಿಡಿಯೋ ಫುಟೇಜ್ ಅನ್ನು ಡಿಲೀಟ್ ಮಾಡುವಂತೆ ಒತ್ತಾಯ ಮಾಡಿದ್ದಾರೆ.[ಟ್ರೈಲರ್: 'ಸರ್ಬ್ಜಿತ್'ನಲ್ಲಿ ಐಶ್ವರ್ಯ ರೈ ನಟನೆ ಭಯಂಕರ]

  ಅಭಿಮಾನಿಗಳು ಹಾಗೂ ಪತ್ರಕರ್ತರ ಜೊತೆ ಯಾವಾಗಲೂ ಸಹನೆ ಹಾಗೂ ಗೌರವದಿಂದ ವರ್ತಿಸುತ್ತಿದ್ದ ನಟಿ ಐಶ್ವರ್ಯ ರೈ ಅವರು ಈ ಬಾರಿ ವಿಚಿತ್ರವಾಗಿ ವರ್ತನೆ ಮಾಡಿದ್ದನ್ನು ಕಂಡವರು ಶಾಕ್ ಆಗಿದ್ದಾರೆ.

  ಈ ಸಂದರ್ಭದಲ್ಲಿ 'ಸರ್ಬ್ಜಿತ್' ಚಿತ್ರದ ನಿರ್ಮಾಪಕ ಜಾಕಿ ಭಾಗನಾನಿ ಅವರು ಐಶ್ವರ್ಯ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಕೂಡ ಐಶ್ವರ್ಯ ಅವರು ಗರಂ ಆಗಿದ್ದು, ತಾಳ್ಮೆ ಕಳೆದುಕೊಂಡು ತಕ್ಷಣ ಎದ್ದು ಹೊರನಡೆದಿದ್ದಾರೆ. ಇದೀಗ ಐಶ್ ಯಾಕೆ ಹಾಗೆ ನಡ್ಕೊಂಡ್ರು ಅನ್ನೋದು ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

  English summary
  A journalist asked Actress Aishwarya Rai Bachchan if she would ever work with Actress Salman Khan in the future. Aishwarya didn't like the question and left the place in an annoyed mood, in the middle of the interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X