For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿ ಆರಾಧ್ಯ: ಮಗಳಿಗೆ ಭಾವುಕ ಪತ್ರ ಬರೆದ ಐಶ್ವರ್ಯ ರೈ

  |

  ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ ರೈ ಮತ್ತು ಅಭಿಷೇಕ್ ಬಚ್ಚನ್ ಮುದ್ದಿನ ಮಗಳಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆರಾಧ್ಯ ಬಚ್ಚನ್ ಜನಿಸಿ 9 ವರ್ಷಗಳು ಕಳೆದಿವೆ. ನವೆಂಬರ್ 16ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುವ ಆರಾಧ್ಯಗೆ ಅಮ್ಮ ಐಶ್ವರ್ಯ ರೈ ಪ್ರೀತಿಯ ಪತ್ರ ಬರೆದಿದ್ದಾರೆ.

  ಇನ್ಸಾಗ್ರಾಮ್ ನಲ್ಲಿ ಮಗಳ ಜೊತೆ ಇರುವ ಒಂದಿಷ್ಟು ಫೋಟೋಗಳನ್ನು ಐಶ್ವರ್ಯ ರೈ ಹಂಚಿಕೊಂಡಿದ್ದಾರೆ. ತಾಯಿ ಮಗಳ ಮುದ್ದಾದ ಪೋಸ್ಟ್ ಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ಸ್ ಹರಿದು ಬರುತ್ತಿವೆ. ಫೋಟೋ ಜೊತೆಗೆ ಐಶ್ವರ್ಯ ಮಗಳ ಬಗ್ಗೆ, '9ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. ನನ್ನ ಜೀವನದ ಸಂಪೂರ್ಣ ಪ್ರೀತಿ, ನನ್ನ ಡಾರ್ಲಿಂಗ್ ಏಂಜೆಲ್ ಆರಾಧ್ಯ ನಿನ್ನ ಮೇಲೆ ನನ್ನ ಪ್ರೀತಿ ಶಾಶ್ವತವಾಗಿರುತ್ತೆ. ದೇವರು ಒಳ್ಳೆಯದು ಮಾಡಲಿ. ನನ್ನ ಜೀವನದಲ್ಲಿ ನಾನು ನಿನಗಾಗಿ ತೆಗೆದುಕೊಳ್ಳುವ ಪ್ರತಿಯೊಂದು ಉಸಿರು ಪ್ರೀತಿ, ಲವ್ ಯು' ಎಂದು ಬರೆದುಕೊಂಡಿದ್ದಾರೆ.

  ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮದುವೆಯಲ್ಲಿ ಧರಿಸಿದ್ದ ಸೀರೆಯ ಬೆಲೆ ಕೇಳಿದ್ರೆ ದಂಗಾಗ್ತೀರಾಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮದುವೆಯಲ್ಲಿ ಧರಿಸಿದ್ದ ಸೀರೆಯ ಬೆಲೆ ಕೇಳಿದ್ರೆ ದಂಗಾಗ್ತೀರಾ

  ಕಳೆದ ವರ್ಷ ಮಗಳನ್ನು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಆದರೆ ಈ ಬಾರಿ ಕೊರೊನಾ ವೈರಲ್ ಕಾರಣ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಆರಾಧ್ಯಳ ಪ್ರೀತಿಯ ತಾತ ಅಮಿತಾಬ್ ಬಚ್ಚನ್ ಸಹ ಮೊಮ್ಮಗಳಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಮೊಮ್ಮಗಳ ಮೊದಲ ವರ್ಷದಿಂದ 9 ವರ್ಷದ ವರೆಗಿನ 9 ಫೋಟೋವನ್ನು ಹಂಚಿಕೊಂಡು ವಿಶ್ ಮಾಡಿದ್ದಾರೆ.

  ಪಾರ್ಟ್ನರ್ ಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ KL Rahul | Filmibeat Kannada

  ಜುಲೈ ತಿಂಗಳಲ್ಲಿ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ಹಾಗೂ ಆರಾಧ್ಯ ಕೊರೊನಾ ಸೋಂಕು ತಗುಲಿತ್ತು. ನಾಲ್ಕು ಜನ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಗುಣಮುಖರಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದರು.

  English summary
  Aishwarya Rai daughter Aaradhya Bachchan celebrating her 9th years birthday. Aishwarya Rai pens the sweetest note.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X