For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಬಳಿಕ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದ ಬಗ್ಗೆ ಐಶ್ವರ್ಯಾ ಪೋಸ್ಟ್: ಏನಿದೆ?

  |

  ಬಾಲಿವುಡ್ ನ ಖ್ಯಾತ ನಟರಾದ ಸಲ್ಮಾನ್ ಖಾನ್ ಮತ್ತು ಅಜಯ್ ದೇವಗನ್ ಹಾಗೂ ನಟಿ ಐಶ್ವರ್ಯಾ ರೈ ನಟನೆಯ ಸೂಪರ್ ಹಿಟ್ 'ಹಮ್ ದಿಲ್ ದೇ ಚುಕೆ ಸನಮ್' ಸಿನಿಮಾ ಬಿಡುಗಡೆಯಾಗಿ 22 ವರ್ಷಗಳಾಗಿದೆ. 1999 ಜೂನ್ 17ರಂದು ಬಿಡುಗೆಯಾದ ಈ ಸಿನಿಮಾ ಅನೇಕ ದಾಖಲೆಗಳನ್ನು ನಿರ್ಮಿಸಿತ್ತು.

  ಅಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ಈ ಸಿನಿಮಾ ಸಲ್ಮಾನ್, ಐಶ್ ಮತ್ತು ಅಜಯ್ ಸಿನಿಮಾ ಜೀವನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿತ್ತು.

  ಐಶ್ವರ್ಯಾ ರೈ ಬಿಟ್ಟು ಅಜಯ್, ಬನ್ಸಾಲಿಗೆ ಮಾತ್ರ ಟ್ಯಾಗ್ ಮಾಡಿದ ಸಲ್ಮಾನ್ ಗೆ ನೆಟ್ಟಿಗರ ಪ್ರಶ್ನೆಐಶ್ವರ್ಯಾ ರೈ ಬಿಟ್ಟು ಅಜಯ್, ಬನ್ಸಾಲಿಗೆ ಮಾತ್ರ ಟ್ಯಾಗ್ ಮಾಡಿದ ಸಲ್ಮಾನ್ ಗೆ ನೆಟ್ಟಿಗರ ಪ್ರಶ್ನೆ

  ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ, ಸಲ್ಮಾನ್ ಖಾನ್, ಅಜಯ್ ದೇವಗನ್ ಮತ್ತು ಐಶ್ವರ್ಯಾ ರೈ ಅಭಿನಯ, ಅದ್ಭುತ ಸೆಟ್ ಗಳು, ಹಿಂದೆಂದೂ ನೋಡಿರದ ಪ್ರೇಮ ಕಥೆಗೆ ಭಾರತೀಯ ಸಿನಿ ಪ್ರಿಯರು ಫಿದಾ ಆಗಿದ್ದರು. ಭಾರತೀಯ ಸಿನಿಮಾರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಈ ಸಿನಿಮಾ ಕೂಡ ಒಂದಾಗಿದೆ. ಮುಂದೆ ಓದಿ..

  'ಹಮ್ ದಿಲ್ ದೇ ಚುಕೆ ಸನಮ್' ನೆನೆದ ಸಲ್ಮಾನ್

  'ಹಮ್ ದಿಲ್ ದೇ ಚುಕೆ ಸನಮ್' ನೆನೆದ ಸಲ್ಮಾನ್

  22 ವರ್ಷ ತುಂಬಿದ ಸಂತಸವನ್ನು ಚಿತ್ರರಂಗ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಸಲ್ಮಾನ್ ಖಾನ್, ಅಜಯ್ ದೇವಗನ್ ಬಳಿಕ ಇದೀಗ ನಟಿ ಐಶ್ವರ್ಯಾ ರೈ ಕೂಡ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಟ ಸಲ್ಮಾನ್ ಖಾನ್ ಈ ಸಿನಿಮಾದ ಬಗ್ಗೆ ಪೋಸ್ಟ್ ಹಾಕಿ, ಅಜಯ್ ದೇವಗನ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯನ್ನು ಮಾತ್ರ ಟ್ಯಾಗ್ ಮಾಡಿದ್ದರು.

  ಸಲ್ಮಾನ್ ಕಾಲೆಳೆದ ನೆಟ್ಟಿಗರು

  ಸಲ್ಮಾನ್ ಕಾಲೆಳೆದ ನೆಟ್ಟಿಗರು

  ಸಲ್ಲು ಪೋಸ್ಟ್ ಹಾಕಿದ ಬೆನ್ನಲ್ಲೇ ನೆಟ್ಟಿಗರು ಐಶ್ವರ್ಯಾ ರೈ ಅವರನ್ನು ಯಾಕೆ ಟ್ಯಾಗ್ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಇದೀಗ ಐಶ್ವರ್ಯಾ ಇನ್ಸ್ಟಾಗ್ರಾಮ್ ನಲ್ಲಿ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ. ಆದರೆ ಯಾರ ಹೆಸರನ್ನು ಟ್ಯಾಗ್ ಮಾಡಿಲ್ಲ.

  ಐಶ್ವರ್ಯಾ ರೈ ಜೊತೆಗಿನ ಪುತ್ರನ ಸಂಬಂಧದ ಬಗ್ಗೆ ಸಲ್ಮಾನ್ ಖಾನ್ ತಂದೆ ಹೇಳಿದ್ದೇನು?ಐಶ್ವರ್ಯಾ ರೈ ಜೊತೆಗಿನ ಪುತ್ರನ ಸಂಬಂಧದ ಬಗ್ಗೆ ಸಲ್ಮಾನ್ ಖಾನ್ ತಂದೆ ಹೇಳಿದ್ದೇನು?

  ಚಿತ್ರದ ಬಗ್ಗೆ ಐಶ್ವರ್ಯಾ ರೈ ಹೇಳಿದ್ದೇನು?

  ಚಿತ್ರದ ಬಗ್ಗೆ ಐಶ್ವರ್ಯಾ ರೈ ಹೇಳಿದ್ದೇನು?

  "ಹಮ್ ದಿಲ್ ದೇ ಚುಕೇ ಸನಮ್ ಚಿತ್ರಕ್ಕೆ 22 ವರ್ಷ. ಆಂಥ ಪ್ರೀತಿಯ ಸಿನಿಮಾ ನನಗೆ ನೆನಪಿದೆ. ನನ್ನ ಡಿಯರೆಸ್ಟ್ ಸಂಜಯ್ ಲೀಲಾ ಬನ್ಸಾಲಿ. ಇದು ಎಂದೆಂದಿಗೂ ಎವರ್ ಗ್ರೀನ್. ಪ್ರಪಂಚದಾದ್ಯಂತ ಇರುವ ನಮ್ಮ ಪ್ರೇಕ್ಷಕರಿಗೆ ಧನ್ಯವಾದಗಳು. ಮತ್ತು ನನ್ನ ಪ್ರೀತಿಯ ಕುಟುಂಬ, ಹಿತೈಶಿಗಳು ಎಲ್ಲರಿಗೂ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿತ್ರದ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಅಜಯ್ ದೇವಗನ್ ಪೋಸ್ಟ್

  ಅಜಯ್ ದೇವಗನ್ ಪೋಸ್ಟ್

  ಐಶ್ವರ್ಯಾ ಪೋಸ್ಟ್ ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ, ಹಾರ್ಟ್ ಇಮೋಜಿ ಕಳುಹಿಸುತ್ತಿದ್ದಾರೆ. ಇನ್ನು ಕೆಲವರು ಸಲ್ಮಾನ್ ಖಾನ್ ಗೆ ಟ್ಯಾಗ್ ಮಾಡಿ ಎಂದು ಕಾಲೆಳೆಯುತ್ತಿದ್ದಾರೆ. ಇನ್ನು ನಟ ಅಜಯ್ ದೇವಗನ್ ಕೂಡ ಚಿತ್ರದ ಫೋಟೋ ಶೇರ್ ಮಾಡಿ ಹಳೆಯ ನೆನಪು ಮೆಲುಕು ಹಾಕಿದ್ದಾರೆ.

  ಐಶ್ವರ್ಯಾ-ಸಲ್ಮಾನ್ ನಟನೆಯ ಕೊನೆಯ ಸಿನಿಮಾ

  ಐಶ್ವರ್ಯಾ-ಸಲ್ಮಾನ್ ನಟನೆಯ ಕೊನೆಯ ಸಿನಿಮಾ

  'ಹಮ್ ದಿಲ್ ದೇ ಚುಕೆ ಸನಮ್' ಐಶ್ವರ್ಯಾ ಮತ್ತು ಸಲ್ಮಾನ್ ಒಟ್ಟಿಗೆ ನಟಿಸಿದ ಕೊನೆಯ ಸಿನಿಮಾ. ಈ ಸಿನಿಮಾ ಇಬ್ಬರ ಪ್ರೀತಿಯ ಅಂತ್ಯಕ್ಕೆ ಆರಂಭಕೂಡ ಆಗಿತ್ತು. ಈ ಸಿನಿಮಾ ಬಳಿಕ ಇಬ್ಬರ ಜೀವನದಲ್ಲಿ ಬಿರುಗಾಳಿಯೇ ಎದ್ದಿತ್ತು. ಬ್ರೇಕಪ್, ವಿವಾದಗಳ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು.

  ಸಂಚಾರಿ ವಿಜಯ್ ಹೆಸರಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಚಕ್ರವರ್ತಿ ಚಂದ್ರಚೂಡ್ | Filmibeat Kannada
  ಸಿನಿಮಾ ನಂತರ ದೂರ ಆದ ಸಲ್ಮಾನ್-ಐಶ್ವರ್ಯ

  ಸಿನಿಮಾ ನಂತರ ದೂರ ಆದ ಸಲ್ಮಾನ್-ಐಶ್ವರ್ಯ

  ವಿಶೇಷ ಎಂದರೆ ಸಿನಿಮಾದ ಹಾಗೆ ನಿಜ ಜೀವನದಲ್ಲೂ ಸಲ್ಮಾನ್ ಖಾನ್ ಗೆ ಐಶ್ವರ್ಯಾ ರೈ ಸಿಗುವುದಿಲ್ಲ. ಅಲ್ಲದೆ ಆ ಸಮಯದಲ್ಲಿ ಇಬ್ಬರ ಬ್ರೇಕಪ್ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸಲ್ಮಾನ್ ಖಾನ್ ದೈಹಿಕವಾಗಿ ಹಿಂಸೆ ನೀಡಿರುವುದಾಗಿ ಐಶ್ವರ್ಯಾ ಬಹಿರಂಗ ಪಡಿಸಿದ್ದರು. ದೊಡ್ಡ ವಿವಾದದ ಬಳಿಕ ಇಬ್ಬರೂ ಶಾಶ್ವತವಾಗಿ ದೂರ ದೂರ ಆದರು.

  English summary
  Aishwarya Rai remembers 22 years of Hum Dil De Chuke Sanam movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X