ಪ್ರಿಯಾಂಕಾ ಮಾಡಬೇಕಿದ್ದ ಚಿತ್ರವನ್ನ ಐಶ್ವರ್ಯ ರೈ ಒಪ್ಪಿದ್ದೇಕೆ?
ಸೌಂದರ್ಯ ಲೋಕದ ಮಾದಕ ತಾರೆ ಶಹನಾಜ್ ಹುಸೇನ್ ಅವರ ಬಯೋಪಿಕ್ ನಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಕಾಣಿಸಿಕೊಳ್ಳಲಿದ್ದಾರಂತೆ. ಇದಕ್ಕು ಮೊದಲು ಈ ಪಾತ್ರದಲ್ಲಿ ಪ್ರಿಯಾಂಕಾ ಅಭಿನಯಿಸುತ್ತಾರೆ ಎನ್ನಲಾಗಿತ್ತು. ಆದ್ರೆ, ಹಾಲಿವುಡ್ ಚಿತ್ರದ ಬಿಜಿ ಶೆಡ್ಯೂಲ್ ನಿಂದ ಪಿಗ್ಗಿ ಸಿನಿಮಾದಿಂದ ಹೊರಗುಳಿದಿದ್ದಾರಂತೆ.
ಚಿತ್ರದ ಬರಹಗಾರ ಕಮಲೇಶ್ ಪಾಂಡೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಐಶ್ವರ್ಯ ರೈ ಅವರನ್ನ ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಸಿದ್ದಮಾಡುತ್ತಿದ್ದಾರಂತೆ. ಈ ಚಿತ್ರಕ್ಕೆ ಐಶ್ ಮೊದಲ ಆಯ್ಕೆಯಾಗಿದ್ದು, 16ನೇ ವಯಸ್ಸನಿಂದ 60ರ ವಯಸ್ಸಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ, ಅನಿಲ್ ಕಪೂರ್, ರಾಜ್ ಕುಮಾರ್ ರಾವ್ ಜೊತೆ 'ಫೆನ್ನಿಖಾನ್' ಸಿನಿಮಾದಲ್ಲಿ ಐಶ್ ನಟಿಸುತ್ತಿದ್ದು, ಆ ಚಿತ್ರದ ನಂತರ ಈ ಬಯೋಪಿಕ್ ಸಿನಿಮಾ ಮಾಡಲಿದ್ದಾರಂತೆ.

ಐಶ್ವರ್ಯ ರೈ ಅವರನ್ನ ಕೊನೆಯದಾಗಿ 2016ರಲ್ಲಿ ತೆರೆಕಂಡಿದ್ದ 'ಎ ದಿಲ್ ಹೈ ಮುಷ್ಕಿಲ್' ಚಿತ್ರದಲ್ಲಿ ಅಭಿನಯಿಸಿದ್ದರು.
More from Filmibeat
English summary
Aishwarya Rai has reportedly replaced Priyanka Chopra as the first choice to play beauty baroness Shahnaz Hussain in the latter's biopic.


Click it and Unblock the Notifications











