»   » ಡೀಪ್ ನೆಕ್ ತಂದ ಮುಜುಗರ: ಮಾನ ಮುಚ್ಚಿಕೊಳ್ಳಲು ಐಶ್ವರ್ಯ ರೈ ಹರಸಾಹಸ

ಡೀಪ್ ನೆಕ್ ತಂದ ಮುಜುಗರ: ಮಾನ ಮುಚ್ಚಿಕೊಳ್ಳಲು ಐಶ್ವರ್ಯ ರೈ ಹರಸಾಹಸ

By: ಫಿಲ್ಮಿಬೀಟ್ ಡೆಸ್ಕ್
Subscribe to Filmibeat Kannada

ಸೆಲೆಬ್ರಿಟಿ ಅಂದ್ಮೇಲೆ ಮುಜುಗರ, ವಿವಾದ ಇದ್ದಿದ್ದೇ. ಯಾವುದೇ ತಂಟೆ ತಕರಾರು ಬೇಡ ಅಂತ ಎಷ್ಟೇ ಜಾಗರೂಕತೆ ವಹಿಸಿದರೂ, ಒಂದಲ್ಲ ಒಂದು ಕಿರಿಕಿರಿ ಮಾಮೂಲು. ಸದ್ಯ ಬಚ್ಚನ್ ಬಹುರಾಣಿ ಐಶ್ವರ್ಯ ರೈ ಬಚ್ಚನ್ ರವರಿಗೆ ಆಗಿರುವುದು ಇದೇ.!

ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬರ್ನ್-2017 ರಲ್ಲಿ ಭಾಗವಹಿಸಲು ಐಶ್ವರ್ಯ ರೈ ಬಚ್ಚನ್ ಆಸ್ಟ್ರೇಲಿಯಾದ ಮೆಲ್ಬರ್ನ್ ಗೆ ಹಾರಿದ್ದರು. ಮೆಲ್ಬರ್ನ್ ಚಿತ್ರೋತ್ಸವದಲ್ಲಿ ಭಾರತದ ತ್ರಿವರ್ಣ ಧ್ವಜಾರೋಹಣ ಮಾಡಿ ಹೆಮ್ಮೆ ಪಟ್ಟ ಐಶ್ವರ್ಯ ರೈ ಬಚ್ಚನ್ ತಮ್ಮ ಉಡುಪಿನಿಂದಲೇ ಮುಜುಗರಕ್ಕೀಡಾದಂತೆ ಕಂಡುಬಂದರು.

ಡೀಪ್ ನೆಕ್ ತಂದ ಮುಜುಗರ

ಮೆಲ್ಬರ್ನ್ ನಲ್ಲಿ ಭಾರತದ ತ್ರಿವರ್ಣ ಧ್ವಜಾರೋಹಣ ಮಾಡಲು ಪುತ್ರಿ ಆರಾಧ್ಯ ಬಚ್ಚನ್ ಜೊತೆ ಆಗಮಿಸಿದ ಐಶ್ವರ್ಯ ರೈ ಬಚ್ಚನ್ ತಿಳಿ ಹಸಿರು ಬಣ್ಣದ ಉಡುಗೆ ತೊಟ್ಟಿದ್ದರು. ಉಡುಪಿನ ನೆಕ್ ಲೈನ್ ಕೊಂಚ ಡೀಪ್ ಆಗಿದ್ದ ಕಾರಣ, ಜನಜಂಗುಳಿ ಮಧ್ಯದಲ್ಲಿ ತಮ್ಮ ಮಾನ ಮುಚ್ಚಿಕೊಳ್ಳಲು ಐಶ್ವರ್ಯ ರೈ ಬಚ್ಚನ್ ಹರಸಾಹಸ ಪಡಬೇಕಾಯಿತು.

ಎಲ್ಲ ಫೋಟೋಗಳಲ್ಲೂ ಅದೇ ಕಥೆ

ಕೊಂಚ ಅತ್ತಿತ್ತ ಸರಿದರೂ, ಬಗ್ಗಿದರೂ ಐಶ್ವರ್ಯ ರೈ ರವರ ಎದೆಭಾಗ ಸ್ವಲ್ಪ ಹೆಚ್ಚಾಗಿಯೇ ಕಾಣುತ್ತಿತ್ತು. ಅದನ್ನ ತಪ್ಪಿಸಲು ಕೈಯನ್ನ ಅಡ್ಡ ಇಟ್ಟುಕೊಂಡೇ ಎಲ್ಲ ಫೋಟೋಗಳಿಗೂ ಪೋಸ್ ನೀಡಿದ್ದಾರೆ ಐಶ್ವರ್ಯ ರೈ ಬಚ್ಚನ್.

ಭಾಷಣ ಮಾಡುವಾಗಲೂ...

ಧ್ವಜಾರೋಹಣ ನಡೆದ ಮೇಲೆ ವೇದಿಕೆ ಮೇಲೆ ಮಾತನಾಡಲು ಅರಂಭಿಸಿದಾಗಲೂ, ಸಭ್ಯತೆಯನ್ನ ಕಾಪಾಡಿಕೊಳ್ಳಲು ತಮ್ಮ ಕೈಯನ್ನ ಐಶ್ವರ್ಯ ರೈ ಬಚ್ಚನ್ ಕೆಳಗೆ ಇಳಿಸಲೇ ಇಲ್ಲ.

ಎಷ್ಟೇ ಮುಚ್ಚಿಕೊಂಡರೂ....

ವಾರ್ಡ್ ರೋಬ್ ಮಾಲ್ ಫಂಕ್ಷನ್ ಕಾರಣ ಕಸಿವಿಸಿಗೊಂಡ ಐಶ್ವರ್ಯ ತಮ್ಮ ಎದೆ ಭಾಗವನ್ನ ಮುಚ್ಚಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ, ಕಳ್ಳ ಕ್ಯಾಮರಾಗಳು ಅದನ್ನೆಲ್ಲ ಸೆರೆ ಹಿಡಿದಿವೆ.

ಸೆಲ್ಫಿ ಸಂಭ್ರಮ

ಮೊದಲೇ ಡ್ರೆಸ್ ಕಿರಿಕಿರಿ... ಅದರ ಮಧ್ಯೆ ಅಭಿಮಾನಿಗಳು ಸೆಲ್ಫಿ ಕೇಳಿದರೆ ಪಾಪಾ ಐಶ್ವರ್ಯ ಪರಿಸ್ಥಿತಿ ಏನಾಗಬೇಡ.?

Aishwarya Rai Becomes 1st Woman To Raise Indian Flag At IFFM 2017

ಯಾಕಾದ್ರೂ ಇದನ್ನ ಧರಿಸಿದ್ನೋ..?

ಕಾರ್ಯಕ್ರಮ ಮುಗಿದು ಬಂದ ದಾರಿ ವಾಪಸ್ ಸಾಗುವ ಹೊತ್ತಿಗೆ ''ಯಾಕಾದ್ರೂ, ಈ ಡ್ರೆಸ್ ಹಾಕೊಂಡ್ನೋ ಅಂತ ಐಶ್ವರ್ಯ'' ಗೊಣಗಿರಬೇಕು.

English summary
Bollywood Actress Aishwarya Rai suffered a minor Wardrobe Malfunction in Melbourne, Australia

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada