»   » ಕೋರ್ಟ್ ಮೆಟ್ಟಿಲೇರಿದ ಬಚ್ಚನ್ ಬಹು ಐಶ್ವರ್ಯಾ ರೈ

ಕೋರ್ಟ್ ಮೆಟ್ಟಿಲೇರಿದ ಬಚ್ಚನ್ ಬಹು ಐಶ್ವರ್ಯಾ ರೈ

Posted By:
Subscribe to Filmibeat Kannada

ಮಾಜಿ ವಿಶ್ವಸುಂದರಿ, ಬಚ್ಚನ್ 'ಬಹು'ರಾಣಿ ಐಶ್ವರ್ಯಾ ರೈ ಸೆಕೆಂಡ್ ಇನ್ನಿಂಗ್ಸ್ ಶುರುಮಾಡುವುದಕ್ಕೆ ಮೂರೇ ಗೇಣು ಬಾಕಿ. 'ಜಸ್ಬಾ' ಚಿತ್ರದ ಮೂಲಕ ಮರಳಿ ಬಾಲಿವುಡ್ ಗೆ ಕಾಲಿಡುತ್ತಿರುವ ಐಶ್ವರ್ಯಾ ರೈ, ಪರದೆ ಮೇಲೆ ಹೇಗೆ ಮಿಂಚಲಿದ್ದಾರೆ?

ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕದೆ. ಎಲ್ಲರೂ ಊಹಿಸಿದಂತೆ ಕಂಪ್ಲೀಟ್ ಗ್ಲಾಮರಸ್ ಆಗಿ ಐಶೂ ಕಾಣಿಸಿಕೊಳ್ಳುತ್ತಿಲ್ಲ. ತುಂಡುಡುಗೆ ಅಂತೂ ಆಕೆ ತೊಡುವುದೇ ಇಲ್ಲ. ನೀವು ಕಂಡ ಹಳೇ ಐಶೂ 'ಜಸ್ಬಾ' ಚಿತ್ರದಲ್ಲಿರುವುದಿಲ್ಲ!

Aishwarya rai to play lawyer role in Jasba1

ಹಾಗಾದ್ರೆ ಐಶೂ ನಿರ್ವಹಿಸುತ್ತಿರುವ ಪಾತ್ರವಾದರೂ ಎಂತದ್ದು? ಕರಿ ಕೋಟು ತೊಟ್ಟು, ಲಾ ಪಾಯಿಂಟ್ ಗಳನ್ನು ಹಾಕುವ ಕ್ರಿಮಿನಲ್ ಲಾಯರ್! ಹೌದು, ಇಲ್ಲಿವರೆಗೂ ತರಹೇವಾರಿ ಪಾತ್ರಗಳಲ್ಲಿ ಮಿಂಚಿರುವ ಐಶ್ವರ್ಯಾ, ಇದೀಗ ಸಂಜಯ್ ಗುಪ್ತ ನಿರ್ದೇಶನದ 'ಜಸ್ಬಾ' ಚಿತ್ರದಲ್ಲಿ ಖ್ಯಾತ ವಕೀಲೆಯಾಗಿ ಬಚ್ಚನ್ ಬಹು ಕೋರ್ಟ್ ಮೆಟ್ಟಿಲೇರಲಿದ್ದಾರೆ. [ಈ ವಯಸ್ಸಲ್ಲಿ ಐಶ್ವರ್ಯಾ ರೈಗೆ ಇದೆಲ್ಲಾ ಬೇಕಾ?]

ತಮ್ಮ ಕಮ್ ಬ್ಯಾಕ್ ಸಿನಿಮಾ ಧೂಮ್ ಧಾಮ್ ಆಗಿರ್ಬೇಕು ಅಂತ ವಿಭಿನ್ನ ಪಾತ್ರಕ್ಕೋಸ್ಕರ ಕಾಯುತ್ತಿದ್ದ ಐಶ್, 'ಜಸ್ಬಾ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡುವುದಕ್ಕೆ 'ಲಾಯರ್' ಕಾರಣ. ಮಹಿಳಾ ಪ್ರಧಾನ ಚಿತ್ರವಾಗಿರುವ 'ಜಸ್ಬಾ'ದಲ್ಲಿ ವಕೀಲೆ ಐಶ್ ಪ್ರಮುಖ ಪಾತ್ರಧಾರಿ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Aishwarya rai to play lawyer role in Jasba2

ಕಿಡ್ನ್ಯಾಪ್ ಆಗಿರುವ ತಮ್ಮ ಮಗಳನ್ನ ರಕ್ಷಿಸುವುದಕ್ಕೆ ಕ್ರಿಮನಲ್ ಪರವಾಗಿ ವಾದ ಮಾಡುವ ವಕೀಲೆ ಪಾತ್ರದಲ್ಲಿ ಐಶ್ ಬಣ್ಣ ಹಚ್ಚಲಿದ್ದಾರೆ. ಇನ್ನೂ ಪೊಲೀಸ್ ಅಧಿಕಾರಿಯಾಗಿ ಇರ್ಫಾನ್ ಖಾನ್ ನಟಿಸಲಿದ್ದಾರೆ. [ಕಪ್ಪು ದಿರಿಸಿನಲ್ಲಿ ಕರಾವಳಿ ಸುಂದರಿ ಐಶ್]

ದಕ್ಷಿಣ ಕೊರಿಯಾದ ಜನಪ್ರಿಯ ಚಿತ್ರ 'ಸೆವೆನ್ ಡೇಸ್' ಚಿತ್ರದ ರೀಮೇಕ್ ಈ 'ಜಸ್ಬಾ' ಅಂತ ಬಾಲಿವುಡ್ ನಲ್ಲಿ ಈಗಾಗಲೇ ಸುದ್ದಿ ಹಬ್ಬಿದೆ. ದಂತದ ಗೊಂಬೆಯಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಪಡ್ಡೆಗಳ ಹೃದಯ ಕದ್ದಿದ್ದ ಐಶ್, ಕರಿ ಕೋಟು ತೊಟ್ಟು ಹೇಗೆ ಕಮಾಲ್ ಮಾಡ್ತಾರೋ ನೋಡ್ಬೇಕು. ಅಂದ್ಹಾಗೆ 'ಜಸ್ಬಾ' ಚಿತ್ರ ಜನವರಿಯಲ್ಲಿ ಸೆಟ್ಟೇರಲಿದೆ. (ಏಜೆನ್ಸೀಸ್)

English summary
Aishwarya rai, who is making her comeback with the movie Jasba will be protraying a different character. Aishwarya will be playing the role of a Criminal Lawyer. The film Jasba will go on floors by January, 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada