ಮಣಿರತ್ನಂ ನಿರ್ದೇಶನದಲ್ಲಿ ಐಶ್ವರ್ಯಾ ರೈ ರೀ ಎಂಟ್ರಿ
ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸಲಿರುವ ಮುಂದಿನ ಚಿತ್ರದ ಮೂಲಕ ಐಶ್ವರ್ಯಾ ರೈ ರೀ ಎಂಟ್ರಿ ಆಗುತ್ತಿದೆ. ಇಂಗ್ಲಿಷ್ ಲೇಖಕಿ ಹಾಗೂ ನಾಟಕಕಾರ್ತಿ ದಫನೇ ಡು ಮೋರಿಯರ್ (Daphne du Maurier) ಅವರ ಪ್ರಸಿದ್ಧ 'ರೆಬಕ್ಕಾ' (1938) ಎಂಬ ಕಾದಂಬರಿ ಆಧಾರವಾಗಿ ಚಿತ್ರವನ್ನು ಬೆಳ್ಳಿತೆರೆಗೆ ತರಲಾಗುತ್ತಿದೆ.
ಸದ್ಯಕ್ಕೆ ಚಿತ್ರಕತೆ ರಚನೆಯಲ್ಲಿ ಮಣಿರತ್ನಂ ಬಿಜಿಯಾಗಿದ್ದಾರೆ. ಹೊಸದಾಗಿ ಮದುವೆಯಾದ ಮಹಿಳೆಯೊಬ್ಬಳ ಕಥೆ ಇದು. ತನ್ನ ಪತಿಯ ಮೊದಲ ಹೆಂಡತಿಯ ಬಗ್ಗೆ ತಿಳಿದುಕೊಳ್ಳುತ್ತಾ, ಆಕೆಯಂತೆಯೇ ಇರಲು ಪ್ರಯತ್ನಿಸವ ಹೆಣ್ಣೊಬ್ಬಳ ಮನಮಿಡಿಯುವ ಕಥೆ ಇದಾಗಿದೆಯಂತೆ.
ಈ ಹಿಂದೆ ಮಣಿರತ್ನಂ ಅವರ ನಿರ್ದೇಶನದಲ್ಲಿ ಬಂದಂತಹ ಇರುವರ್, ಗುರು, ರಾವಣ್ ಚಿತ್ರಗಳಲ್ಲಿ ಐಶ್ವರ್ಯಾ ರೈ ಅಭಿನಯಿಸಿದ್ದರು. ಈಗ ಮತ್ತೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಚಿತ್ರ ಬರುತ್ತಿರುವ ಬಗ್ಗೆ ಪ್ರೇಕ್ಷಕರಲ್ಲಿ ಹಾಗೂ ಐಶ್ವರ್ಯಾ ರೈ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.
ರೆಬ್ಬಕ್ಕಾ ಕಾದಂಬರಿಯನ್ನು ಈಗಾಗಲೆ ಹೆಸರಾಂತ ನಿರ್ದೇಶಕ ಆಲ್ಫ್ರೆಡ್ ಹಿಚ್ ಕಾಕ್ ಚಿತ್ರವನ್ನಾಗಿಸಿದ್ದಾರೆ. ಇದೇ ಕಥೆಯನ್ನು ಕಿರುತೆಯಲ್ಲೂ ಬಳಸಿಕೊಳ್ಳಲಾಗಿದೆ. ಇನ್ನು ರಂಗಭೂಮಿಯಲ್ಲೂ ಹಲವಾರು ಸಲ ರೆಬ್ಬಕ್ಕಾ ಪ್ರಯೋಗಕ್ಕೆ ಒಳಗಾಗಿದೆ. (ಏಜೆನ್ಸೀಸ್)


Click it and Unblock the Notifications












