ಷರತ್ತಿನ ಮೇರೆಗೆ ಸಲ್ಮಾನ್ ಜೊತೆ ನಟಿಸಲು ಒಪ್ಪಿಕೊಂಡ ಐಶ್
ಬಚ್ಚನ್ ಕುಟುಂಬದ ಸೊಸೆ, ನಟಿ ಐಶ್ವರ್ಯ ರೈ ಮತ್ತು ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಹಳೇ ಪ್ರೇಮಿಗಳು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈ ಜೋಡಿ ಒಟ್ಟಾಗಿ ನಟಿಸಿದ ಕೊನೆಯ ಸಿನಿಮಾ 'ಹಮ್ ದಿಲ್ ದೇ ಚುಕೆ ಸನಮ್'. ತದನಂತರ ಅಭಿಮಾನಿಗಳು ಆಸೆ ಪಟ್ಟರು ಈ ಜೋಡಿ ಒಂದಾಗಲಿಲ್ಲ.
ಸಲ್ಮಾನ್ ಖಾನ್ ಅವರ ಜೊತೆ ಐಶ್ ಗೆ ಬ್ರೇಕ್ ಅಪ್ ಆದ ಮೇಲೆ, ನಟ ಅಭಿಷೇಕ್ ಬಚ್ಚನ್ ಜೊತೆ ಲವ್ ಆಗಿ, ಮದುವೆ ಆಗಿ ಸಂಸಾರ ಜೀವನಕ್ಕೆ ಮುನ್ನುಡಿ ಬರೆದರು. ಇವರಿಬ್ಬರ ಪ್ರೀತಿಯ ಸಂಕೇತ, ಹೆಣ್ಣು ಮಗು ಆರಾಧ್ಯ.[ದಾಂಪತ್ಯದ ಬಿರುಕಿನ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಬಚ್ಚನ್]

ಆದರೆ ನಟ ಸಲ್ಮಾನ್ ಖಾನ್ ಅವರು ಮಾತ್ರ ಈಗಲೂ ಬ್ಯಾಚುರಲ್ ಆಗಿಯೇ ಉಳಿದಿದ್ದಾರೆ. ಇದೀಗ ಅಭಿಮಾನಿಗಳ ಒತ್ತಾಯದ ಮೇರೆಗೆ, ಅವರ ಬೇಡಿಕೆ ಈಡೇರಿಸುವ ಸಲುವಾಗಿ ನಟಿ ಐಶ್, ಭಾಯ್ ಜಾನ್ ಸಲ್ಲು ಜೊತೆ ನಟಿಸಲು ಒಪ್ಪಿಕೊಂಡಿದ್ದಾರೆ.

ಆದರೆ ಒಂದು ಕಠಿಣ ಷರತ್ತು ವಿಧಿಸಿ ನಟಿಸಲು ಒಪ್ಪಿಕೊಂಡಿದ್ದಾರೆ. ಆ ಷರತ್ತು ಯಾವುದಪ್ಪಾ ಅಂದ್ರೆ, ಐಶ್ವರ್ಯ ರೈ ಅವರಿಗೆ ಇಷ್ಟವಾಗುವ ಕಥೆ ಮತ್ತು ಒಬ್ಬ ಅಸಾಧಾರಣ ನಿರ್ದೇಶಕರು ಸಿಕ್ಕರೆ, ಆವಾಗ ಸಲ್ಮಾನ್ ಖಾನ್ ಅವರನ್ನು ಹಾಕಿಕೊಂಡು, ಅವರ ಜೊತೆ ನಟಿಸುತ್ತೇನೆ ಎಂದಿದ್ದಾರೆ.[ವಿಸ್ಮಯ: ಐಶ್ ಗೆ ಅಭಿ ಮೇಲೆ ಯಾವತ್ತೂ ಕ್ರಷ್ ಆಗಿಲ್ವಂತೆ.!]

ಅಷ್ಟಕ್ಕೂ ಅಸಾಧಾರಣ ನಿರ್ದೇಶಕರು ಸಿಗೋದು ಯಾವಾಗ, ಒಳ್ಳೆ ಕಥೆ ರೆಡಿ ಆಗೋದ್ಯಾವಾಗ. ಐಶ್-ಸಲ್ಮಾನ್ ಖಾನ್ ಒಟ್ಟಿಗೆ ರೋಮ್ಯಾನ್ಸ್ ಮಾಡೋದು ಯಾವಾಗ. ಎಲ್ಲವನ್ನೂ ಕಾದು ನೋಡಬೇಕಿದೆ.


Click it and Unblock the Notifications