Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಗಳ ಕೈಹಿಡಿದು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಐಶ್ವರ್ಯ ರೈ, ಕಾಲೆಳೆದ ನೆಟ್ಟಿಗರು
ಬಾಲಿವುಡ್ ಐಶ್ವರ್ಯ ರೈ, ಪತಿ ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಬಚ್ಚನ್ ಕಳೆದ ರಾತ್ರಿ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಕಾರಣದಿಂದ ಚೆನ್ನೈಗೆ ತೆರಳಿದ್ದ ಐಶ್ ಕುಟುಂಬ ಫೆಬ್ರವರಿ 16 ರಂದು ಸಂಜೆ ಮುಂಬೈಗೆ ಬಂದಿಳಿದಿದೆ.
ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯ ರೈ ಸಹ ಅಭಿನಯಿಸುತ್ತಿದ್ದು, ಶೂಟಿಂಗ್ ಮುಗಿಸಿ ಬಂದಿದ್ದಾರೆ.
ಅಭಿಷೇಕ್
ಬಚ್ಚನ್
ನೆಚ್ಚಿನ
ಸಹ
ನಟಿ
ಯಾರು
ಗೊತ್ತೆ?
ಏರ್‌ಪೋರ್ಟ್‌ನಿಂದ ಹೊರಗೆ ಬರುವ ವೇಳೆ ಮಗಳು ಆರಾಧ್ಯ ಬಚ್ಚನ್ ಕೈ ಹಿಡಿದುಕೊಂಡು ಐಶ್ ಹೆಜ್ಜೆ ಹಾಕಿದ್ದರು. ಇದನ್ನು ಗಮನಿಸಿರುವ ಕೆಲವು ನೆಟ್ಟಿಗರು ''ಇನ್ನು ಎಷ್ಟು ದಿನ ಆರಾಧ್ಯ ಕೈಹಿಡಿದು ಸಾಗುತ್ತೀರಾ...?'' ಎಂದು ಪ್ರಶ್ನಿಸುತ್ತಿದ್ದಾರೆ.
''ಇಷ್ಟು ಎಷ್ಟು ವಯಸ್ಸಿನವರೆಗೂ ಐಶ್ವರ್ಯ ತಮ್ಮ ಮಗಳ ಕೈ ಹಿಡಿದು ಹೋಗ್ತೀರಾ...?'' ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾನೆ. ''ಅರೇ ಐಶ್ವರ್ಯ ಅವರೇ ಆರಾಧ್ಯಳನ್ನು ಸ್ವತಂತ್ರವಾಗಿ ನಡೆಯಲು ಬಿಡಿ'' ಎಂದು ಹೇಳಿದ್ದಾನೆ.
''ಐಶ್ವರ್ಯ ಅವರೇ ನಿಮ್ಮ ಮಗಳನ್ನು ಎತ್ತುಕೊಂಡು ಹೋಗಿ, ಭೂಮಿ ಮೇಲೆ ನಡೆಯಲು ಬಿಡಬೇಡಿ'' ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾನೆ.
ಐಶ್ವರ್ಯಾ
ರೈ
ಅವರ
ಈ
ವರ್ತನೆ
ಬಗ್ಗೆ
ಅಸಮಾಧಾನ
ಹೊರಹಾಕಿದ
ಅಮಿತಾಬ್
ಬಚ್ಚನ್
ಪುತ್ರಿ
ಶ್ವೇತಾ
ಒಬ್ಬ ತಾಯಿಯಾಗಿ ಮಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸಹಜ. ಆದರೆ, ಅದನ್ನು ನೆಟ್ಟಿಗರು ತಪ್ಪು ಎನ್ನುವಂತೆ ಪ್ರಶ್ನಿಸುತ್ತಿದ್ದಾರೆ. ಐಶ್ವರ್ಯ ಅವರಿಗೆ ಮಗಳ ವಿಚಾರದಲ್ಲಿ ಅಭದ್ರತೆ ಇರಬೇಕು ಎಂದು ಕೆಲವು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
2018ರಲ್ಲಿ ತೆರೆಕಂಡ ಫೆನ್ನಿಖಾನ್ ಸಿನಿಮಾದಲ್ಲಿ ಐಶ್ವರ್ಯ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈಗ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.