Don't Miss!
- News
ಯಡಿಯೂರಪ್ಪ ಅವರ ಮಗನ್ನ ಮಂತ್ರಿ ಮಾಡಬೇಕಾಗುತ್ತೆ ಅಂತಲೇ ಮಂತ್ರಿಮಂಡಲ ವಿಸ್ತರಣೆ ಮಾಡುತ್ತಿಲ್ಲ:ಸಿದ್ದರಾಮಯ್ಯ
- Technology
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಜಯ್-ಕಾಜೋಲ್ ವಿವಾಹ ವಾರ್ಷಿಕೋತ್ಸವ: ಇವರ ಇಂಟರೆಸ್ಟಿಂಗ್ ಲವ್ ಸ್ಟೋರಿ ಬಗ್ಗೆ ಇಲ್ಲಿದೆ ಮಾಹಿತಿ
ಬಾಲಿವುಡ್ ನ ಖ್ಯಾತ ನಟಿ ಕಾಜೋಲ್ ಮತ್ತು ಅಜಯ್ ದೇವಗನ್ ದಂಪತಿಗೆ ಇಂದು ವಿಶೇಷವಾದ ದಿನ. ಬಾಲಿವುಡ್ ನ ಸುಂದರ ದಂಪತಿಗಳಲ್ಲಿ ಒಬ್ಬರಾಗಿರುವ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟದಿನವಿದು. ಅಜಯ್ ದೇವಗನ್ ದಂಪತಿ ಇಂದು 22ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಈ ಜೋಡಿ 1999 ಫೆಬ್ರವರಿ 24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾಜಲ್ ಮತ್ತು ಅಜಯ್ ಅವರದ್ದು ಲವ್ ಮ್ಯಾರೇಜ್, ಇವರ ಲವ್ ಸ್ಟೋರಿ ಯಾವುದೇ ಸಿನಿಮಾಗಿಂತ ಕಡಿಮೆ ಇಲ್ಲ. ತೆರೆಮೇಲೆ ಪ್ರೇಮಿಗಳಾಗಿ ಮಿಂಚಿದ ಅನೇಕರ ಕಲಾವಿದರು ನಿಜ ಜೀವನದಲ್ಲೂ ಪ್ರೇಮಿಗಳಾಗಿ, ಪತಿ-ಪತ್ನಿಯಾಗಿ ಜೀವನ ನಡೆಸುತ್ತಿರುವ ಅನೇಕ ಉದಾಹರಣೆಗಳಿವೆ. ಅದೇ ಲಿಸ್ಟ್ ಗೆ ಅಜಯ್ ಮತ್ತು ಕಾಜಲ್ ಲವ್ ಸ್ಟೋರಿಯೂ ಸೇರುತ್ತೆ. ಮುಂದೆ ಓದಿ..
ಕಾಜೋಲ್
ಮಗಳ
ಜೊತೆ
ಶಾರುಖ್
ಖಾನ್
ಪುತ್ರನ
ಮದುವೆ
ಸುದ್ದಿ
ವೈರಲ್

ಹಳೆಯ ಫೋಟೋ ಶೇರ್ ಮಾಡಿ ಪತಿಗೆ ವಿಶ್ ಮಾಡಿದ ಕಾಜೋಲ್
ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಕಾಜೋಲ್ ಪತಿ ಅಜಯ್ ದೇವಗನ್ ಪ್ರೀತಿಯ ಪೋಸ್ಟ್ ಶೇರ್ ಮಾಡಿದ್ದಾರೆ. ತುಂಬಾ ಹಳೆಯ ಫೋಟೋವನ್ನು ಶೇರ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಫೋಟೋದಲ್ಲಿ ಕಾಜೋಲ್ ಕೆಳಗೆ ಕುಳಿತಿದ್ದು, ಅಜಯ್ ದೇವಗನ್, ಕಾಜೋಲ್ ನೋಡುತ್ತ ಮಾತನಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. 'ನೀವು ಸರ್. ತುಂಬಾ ಆಕರ್ಷಕವಾಗಿ ಕಾಣುತ್ತೀರಿ. ಹಾಗಾಗಿ ನಾನು ನಿಮ್ಮನ್ನು ನೋಡುತ್ತೇನೆ' ಎಂದು ಕ್ಯಾಪ್ಷನ್ ನೀಡಿದ್ದಾರೆ.

ವೈನ್ ಬಾಟೆಲ್ ಮೇಲೆ ಅಜಯ್-ಕಾಜೋಲ್
ನಟ ಅಜಯ್ ದೇವಗನ್ ವೈನ್ ಬಾಟೆಲ್ ಮತ್ತು ಪಕ್ಕದಲ್ಲಿ ಗ್ಲಾಸ್ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ವೈನ್ ಬಾಟೆಲ್ ಮೇಲೆ ಕಾಜೋಲ್ ಮತ್ತು ಅಜಯ್ ಫೋಟೋವಿದೆ. ಕೇವಲ 1999 ಆವೃತ್ತಿ ಎಂದು ಬರೆದಿದೆ.
1995ರಲ್ಲಿ
'DDLJ'
ಗಳಿಸಿದ್ದೆಷ್ಟು,
ಇಂದಿಗೆ
ಅದರ
ಮೌಲ್ಯವೆಷ್ಟು?
ಕಲೆಕ್ಷನ್
ಕುರಿತು
ಬಿಚ್ಚಿಟ್ಟ
ನಿರ್ಮಾಪಕ

1995ರಲ್ಲಿ ಇಬ್ಬರ ಪರಿಚಯ
ನಟಿ ಕಾಜೋಲ್ ಮತ್ತು ಅಜಯ್ ದೇವಗನ್ ಇಬ್ಬರು ಒಬ್ಬರಿಗೊಬ್ಬರು ಪರಿಚಯವಾಗಿದ್ದು 1995ರಲ್ಲಿ. ಹಲ್ ಚಲ್ ಸಿನಿಮಾ ಸೆಟ್ ನಲ್ಲಿ ಇಬ್ಬರು ಮೊದಲು ಭೇಟಿಯಾಗುತ್ತಾರೆ. ಈ ಸಿನಿಮಾಗೆ ಮೊದಲು ದಿವ್ಯಾ ಭಾರತಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ದಿವ್ಯಾ ಭಾರತಿ ಹಠಾತ್ ನಿಧನನಿಂದ ಕಾಲಿಯಾಗಿದ್ದ ಆ ಜಾಗಕ್ಕೆ ಕಾಜೋಲ್ ಆಯ್ಕೆಯಾಗುತ್ತಾರೆ. ಕೊನೆಯ ಕ್ಷಣದಲ್ಲಿ ಕಾಜೋಲ್ ಅವರನ್ನು ಆಯ್ಕೆ ಮಾಡುತ್ತೆ ಸಿನಿಮಾತಂಡ. ಈ ಆಯ್ಕೆ ಕಾಜೋಲ್ ಜೀವನದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ.

ಅಜಯ್ ಬಗ್ಗೆ ಕಾಜೋಲ್ ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ
ಕಾಜೋಲ್ ತುಂಬಾ ತಮಾಷೆಯ ಮತ್ತು ಹೆಚ್ಚು ಮಾತನಾಡುವ ನಟಿ. ಆದರೆ ಅಜಯ್ ದೇವಗನ್ ಅಷ್ಟೆ ಸೈಲೆಂಟ್ ವ್ಯಕ್ತಿ. ಕಾಜೋಲ್ ಗೆ, ಅಜಯ್ ದೇವಗನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲವಂತೆ. ಈ ಬಗ್ಗೆ ಸಂದರ್ಶವೊಂದರಲ್ಲಿ ಮಾತನಾಡಿರುವ ಕಾಜೋಲ್, 'ನನಗೆ ಅಜಯ್ ಬಗ್ಗೆ ಉತ್ತಮವಾದ ಅಭಿಪ್ರಾಯವಿರಲಿಲ್ಲ. ಮೂಲೆಯಲ್ಲಿ ಕುಳಿತು ಯಾವಾಗಲು ಸಿಗರೇಟು ಸೇದುತ್ತಿದ್ದರು' ಎಂದು ಹೇಳಿದ್ದಾರೆ.

4 ವರ್ಷಗಳ ಪ್ರೀತಿ
ಬಳಿಕ ಇಬ್ಬರು ಸ್ನೇಹಿತರಾದೆವು. ಚಿತ್ರೀಕರಣ ವೇಳೆ ಸಂಬಂಧಗಳ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದೆವು. ಅಲ್ಲಿಂದ ಪ್ರಾರಂಭವಾದ ಇಬ್ಬರ ಸ್ನೇಹ ಬಳಿಕ ಪ್ರೀತಿಗೆ ತಿರುಗೆ 4 ವರ್ಷಗಳು ಇಬ್ಬರು ಪ್ರೀತಿಯಲ್ಲಿ ಇರುತ್ತಾರೆ. ಬಳಿಕ ಮನೆಯವರ ಒಪ್ಪಿಗೆ ಮೇರೆಗೆ ಇಬ್ಬರು ಹಸೆಮಣೆ ಏರುತ್ತಾರೆ.

1999ರಲ್ಲಿ ಮದುವೆ
ಕಾಜೋಲ್ ಮತ್ತು ಅಜಯ್ ಇಬ್ಬರು 1999ರಲ್ಲಿ ಹಸೆಮಣೆ ಏರಿದ್ದಾರೆ. ವಿಶೇಷ ಎಂದರೆ ಅಜಯ್ ದೇವಗನ್ ಅವರಿಗೆ ಅದ್ದೂರಿಯಾಗಿ ಮದುವೆಯಾಗಲು ಇಷ್ಟವಿರಲಿಲ್ಲ. ಹಾಗಾಗಿ ತಮ್ಮ ಮನೆಯ ಟೆರೇಸ್ ಮೇಲೆ ಮದುವೆಯಾಗುತ್ತಾರೆ. ಈ ಬಗ್ಗೆ ಅಜಯ್ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಕುಟುಂಬದವರ ಮಧ್ಯೆ ಸರಳವಾಗಿ ಕಾಜೋಲ್ ಮತ್ತು ಅಜಯ್ ಇಬ್ಬರು ಮನೆಯ ಟೆರೇಸ್ ಮೇಲೆ ಸರಳವಾಗಿ ವಿವಾಹವಾಗಿದ್ದಾರೆ.
Recommended Video

ಅಜಯ್ ದಂಪತಿಗೆ ಇಬ್ಬರು ಮಕ್ಕಳು
ಅಜಯ್ ದೇವಗನ್ ಮತ್ತು ಕಾಜೋಲ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. 17 ವರ್ಷದ ಮಗಳು ನಿಸಾ ಮತ್ತು 10 ವರ್ಷದ ಮಗ ಯುಗ್ ಇಬ್ಬರು ಮಕ್ಕಳು ಸದ್ಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಜಯ್ ಮತ್ತು ಕಾಜೋಲ್ ಇಬ್ಬರು ಇಂದಿಗೂ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ.