For Quick Alerts
  ALLOW NOTIFICATIONS  
  For Daily Alerts

  ದೇವಸ್ಥಾನಕ್ಕೆ ಈ ತರಹ ಬಟ್ಟೆ ತೊಟ್ಟು ಬರ್ತಾರಾ: ಅಜಯ್ ದೇವ್ಗನ್ ಪುತ್ರಿಗೆ ಛೀಮಾರಿ.!

  |
  ಬಟ್ಟೆ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಅಜಯ್ ದೇವಗನ್ ಪುತ್ರಿ | Filmibeat Kannada

  ಸೆಲೆಬ್ರಿಟಿಗಳು ಎಲ್ಲೇ ಹೋಗಲಿ, ಏನೇ ಮಾಡಲಿ.. ಪ್ರತಿಯೊಂದನ್ನೂ ಸೆರೆಹಿಡಿಯಲು ಕ್ಯಾಮರಾ ಕಣ್ಣುಗಳು ಸದಾ ಸಿದ್ಧವಾಗಿರುತ್ತವೆ. ಹೀಗಾಗಿ ಪ್ರತಿ ಹೆಜ್ಜೆ ಇಡುವಾಗಲೂ ಸ್ಟಾರ್ ಗಳು ಮೈಯೆಲ್ಲಾ ಕಣ್ಣಾಗಿರಬೇಕು. ಅಪ್ಪಿ ತಪ್ಪಿ ಏನಾದರೂ ಹೆಚ್ಚು ಕಮ್ಮಿ ಆದರೆ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಗಳು ಆಹಾರವಾದ ಹಾಗೆ ಲೆಕ್ಕ.! ಸದ್ಯ ಅಜಯ್ ದೇವ್ಗನ್ ಮತ್ತು ಕಾಜಲ್ ದಂಪತಿಯ ಪುತ್ರಿ ನೀಸಾಗೆ ಆಗಿರೋದು ಇದೇ.!

  ಇತ್ತೀಚೆಗಷ್ಟೆ ತಂದೆ ಅಜಯ್ ದೇವ್ಗನ್ ಜೊತೆಗೆ ನೀಸಾ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಮುಗಿಸಿ ತಂದೆ-ಮಗಳು ವಾಪಸ್ ಬರುವಾಗ ಕ್ಲಿಕ್ ಆದ ಕೆಲ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿವೆ. ಅದಕ್ಕೆ ಕಾರಣ ನೀಸಾ ಧರಿಸಿದ್ದ ಉಡುಪು.

  ಟ್ರ್ಯಾಕ್ ಪ್ಯಾಂಟ್ ಮತ್ತು ಹೊಕ್ಕುಳ ಕಾಣುವ ಹಾಗೆ ಕ್ರಾಪ್ಡ್ ಟಾಪ್ ನ ಧರಿಸಿ ದೇವಸ್ಥಾನಕ್ಕೆ ನೀಸಾ ಬಂದಿದ್ದರು. ಆ ಫೋಟೋಗಳನ್ನು ನೋಡಿ ದೇವಸ್ಥಾನಕ್ಕೆ ಯಾರಾದರೂ ಈ ತರಹದ ಬಟ್ಟೆ ಧರಿಸಿ ಬರ್ತಾರಾ.? ನೀಸಾಗೆ ಕಾಮನ್ ಸೆನ್ಸ್ ಇಲ್ವಾ.? ಅಂತೆಲ್ಲಾ ಕೆಲ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ನೀಸಾ ಉಡುಗೆಯ ವಿಚಾರವಾಗಿ ಇನ್ಸ್ಟಾಗ್ರಾಮ್ ನಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಮುಂದೆ ಓದಿರಿ...

  ಜ್ಞಾನ ಬೇಡ್ವಾ.?

  ಜ್ಞಾನ ಬೇಡ್ವಾ.?

  ''ಈ ಸೆಲೆಬ್ರಿಟಿ ಮಕ್ಕಳಿಗೆ ಜ್ಞಾನ ಬೇಡ್ವಾ.? ದೇವಸ್ಥಾನಕ್ಕೆ ಹೀಗಾ ಹೋಗೋದು.? ಜಿಮ್ ಗೆ ಹೋಗುವ ರೀತಿಯಲ್ಲಿ ದೇವಸ್ಥಾನಕ್ಕೆ ಯಾರಾದರೂ ಬರ್ತಾರಾ.? ಹೊಕ್ಕುಳ ತೋರಿಸಿಕೊಂಡು ದೇವಾಲಯಕ್ಕೆ ಬರುವುದು ಸರಿಯೇ.? ಅಜಯ್ ದೇವ್ಗನ್ ಪುತ್ರಿಗೆ ಕಾಮನ್ ಸೆನ್ಸ್ ಇಲ್ವಾ.?'' ಅಂತೆಲ್ಲಾ ನೀಸಾಗೆ ನೆಟ್ಟಿಗರು ನೀರಿಳಿಸುತ್ತಿದ್ದಾರೆ.

  50 ವರ್ಷ ತುಂಬಿದ ಪತಿಗೆ ಗಂಭೀರವಾಗಿ ವಿಶ್ ಮಾಡಿದ ಕಾಜಲ್50 ವರ್ಷ ತುಂಬಿದ ಪತಿಗೆ ಗಂಭೀರವಾಗಿ ವಿಶ್ ಮಾಡಿದ ಕಾಜಲ್

  ಏನು ತಪ್ಪು.?

  ಏನು ತಪ್ಪು.?

  ಕೆಲವರು ನೀಸಾ ವಿರುದ್ಧ ತಿರುಗಿ ಬಿದ್ದಿದ್ದರೆ, ಹಲವರು ನೀಸಾ ಪರವಾಗಿ ವಾದಕ್ಕೆ ಇಳಿದಿದ್ದಾರೆ. ಸಾಂಪ್ರದಾಯಿಕ ಉಡುಗೆ ಸೀರೆ ಉಟ್ಟಾಗಲೂ ಹೊಕ್ಕುಳ ಕಾಣುತ್ತದೆ. ಹೀಗಾಗಿ, ಕ್ರಾಪ್ಡ್ ಟಾಪ್ ತೊಟ್ಟರೆ ಏನು ತಪ್ಪು.? ದೇವಸ್ಥಾನಗಳಲ್ಲಿ ಏನಾದರೂ ಡ್ರೆಸ್ ಕೋಡ್ ಇದ್ಯಾ.? ನೀಸಾಗೆ ಯಾವುದು ಕಮ್ಫರ್ಟ್ ಆಗಿದ್ಯೋ, ಅದನ್ನೇ ತೊಟ್ಟಿದ್ದಾರೆ ಅಂತೆಲ್ಲಾ ಕೆಲವರು ನೀಸಾ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ನಟ ಅಜಯ್ ದೇವಗನ್ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ನಟ ಅಜಯ್ ದೇವಗನ್

  ತಂದೆ ಕಪಾಳಕ್ಕೆ ಹೊಡೆಯುತ್ತಿದ್ದರು.!

  ತಂದೆ ಕಪಾಳಕ್ಕೆ ಹೊಡೆಯುತ್ತಿದ್ದರು.!

  ''ನಾನು ಈ ತರಹ ಡ್ರೆಸ್ ತೊಟ್ಟು ದೇವಸ್ಥಾನಕ್ಕೆ ಬಂದಿದ್ದರೆ, ನನ್ನ ತಂದೆ ಕಪಾಳಕ್ಕೆ ಹೊಡೆಯುತ್ತಿದ್ದರು'' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ, ''ಹಾಗಾದ್ರೆ, ನೀಸಾ ಸಿಕ್ಕಿರುವ ತಂದೆ ತುಂಬಾ ಲಿಬರಲ್. ಮಗಳ ಆಯ್ಕೆಗೆ ಅಜಯ್ ದೇವ್ಗನ್ ಗೌರವ ಕೊಟ್ಟಿದ್ದಾರೆ'' ಅಂತ ಇನ್ನೊಬ್ಬರು ತಿರುಗೇಟು ನೀಡಿದ್ದಾರೆ.

  ಇದು ಮೊದಲೇನಲ್ಲ.!

  ಇದು ಮೊದಲೇನಲ್ಲ.!

  ಅಜಯ್ ದೇವ್ಗನ್ - ಕಾಜಲ್ ಪುತ್ರಿ ನೀಸಾ ದೇವ್ಗನ್ ಹೀಗೆ ಟ್ರೋಲಿಗರಿಗೆ ಆಹಾರವಾಗಿರುವುದು ಇದೇ ಮೊದಲೇನಲ್ಲ. ಮೊನ್ನೆ ದೀಪಾವಳಿ ಹಬ್ಬದಂದು ಅತಿಯಾಗಿ ಮೇಕಪ್ ಮಾಡಿಕೊಂಡಿದ್ದರು ಎಂಬ ಕಾರಣಕ್ಕೆ ನೀಸಾ ಕಾಲೆಳೆಯಲಾಗಿತ್ತು. ಇದೀಗ ಉಡುಗೆ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.

  English summary
  Bollywood Actor Ajay Devgan daughter Nysa trolled for wearing cropped top in Temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X