'ಅಜಯ್ ದೇವಗನ್ ಬೆನ್ನಿಗೆ ಚೂರಿ ಹಾಕುತ್ತಿದೆ RRR ಸಿನಿಮಾ'

ತೆಲುಗಿನ ಬಹುನಿರೀಕ್ಷಿತ ಸಿನಿಮಾ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಮೇಲಿನ ಸಿಟ್ಟು ಇನ್ನೂ ಆರಿಲ್ಲ ನಿರ್ಮಾಪಕ ಬೋನಿ ಕಪೂರ್‌ಗೆ.

ಬೋನಿ ಕಪೂರ್ ನಿರ್ಮಾಣ ಮಾಡಿ ಅಜಯ್ ದೇವಗನ್ ನಟಿಸಿರುವ 'ಮೈದಾನ್' ಸಿನಿಮಾದ ಬಿಡುಗಡೆಯಂದೆ 'ಆರ್‌ಆರ್‌ಆರ್‌' ಸಿನಿಮಾವು ಬಿಡುಗಡೆ ಆಗುತ್ತಿರುವುದು ಬೋನಿ ಕಪೂರ್ ಸಿಟ್ಟಿಗೆ ಕಾರಣ.

'ಆರ್‌ಆರ್‌ಆರ್‌' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆದಾಗಿನಿಂದಲೂ ರಾಜಮೌಳಿ ಹಾಗೂ ಆರ್‌ಆರ್‌ಆರ್‌ ಸಿನಿಮಾ ವಿರುದ್ಧ ಸಿಟ್ಟು ಹೊರಹಾಕುತ್ತಿರುವ ಬೋನಿ ಕಪೂರ್ ಇದೀಗ ಅಜಯ್ ದೇವಗನ್ ಕುರಿತಾಗಿ ಮಾತನಾಡಿದ್ದಾರೆ.

'ಅಜಯ್ ದೇವಗನ್ ಬಹಳ ಸಂಭಾವಿತ (ಜಂಟಲ್‌ಮ್ಯಾನ್) ಹಾಗಾಗಿ ಅವರು ಆರ್‌ಆರ್‌ಆರ್‌ ಸಿನಿಮಾದವರ ಈ ಅನೈತಿಕ ನಡೆಯ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಅಜಯ್‌ಗೆ ಏನನ್ನಿಸುತ್ತಿದೆ ಎಂಬುದು ನನಗೆ ಗೊತ್ತಿದೆ' ಎಂದಿದ್ದಾರೆ ಬೋನಿ ಕಪೂರ್.

ಅಜಯ್ ದೇವಗನ್ ಬೆನ್ನಿಗೆ ಇರಿಯುತ್ತಿದೆ ಆರ್‌ಆರ್‌ಆರ್‌: ಬೋನಿ ಕಪೂರ್

ಅಜಯ್ ದೇವಗನ್ ಬೆನ್ನಿಗೆ ಇರಿಯುತ್ತಿದೆ ಆರ್‌ಆರ್‌ಆರ್‌: ಬೋನಿ ಕಪೂರ್

'ಅಜಯ್ ದೇವಗನ್ ಅವರು ಆರ್‌ಆರ್‌ಆರ್‌ ಸಿನಿಮಾದಲ್ಲಿ ನಟಿಸಿದ್ದಾರೆ ಜೊತೆಗೆ 'ಮೈದಾನ್' ಸಿನಿಮಾದಲ್ಲಿಯೂ ನಟಿಸಿದ್ದಾರೆ. ಆರ್‌ಆರ್‌ಆರ್‌ ಸಿನಿಮಾದ ಈ ನಡೆ ಅಜಯ್ ದೇವಗನ್ ಅವರ ಬೆನ್ನಿಗೆ ಚೂರಿ ಇರಿದಂತೆ' ಎಂದಿದ್ದಾರೆ ಬೋನಿ.

'ಮೈದಾನ್‌'ನಲ್ಲಿ ಅಜಯ್ ಸೋಲೋ ಹೀರೊ

'ಮೈದಾನ್‌'ನಲ್ಲಿ ಅಜಯ್ ಸೋಲೋ ಹೀರೊ

'ಆರ್‌ಆರ್‌ಆರ್‌ ಸಿನಿಮಾದಲ್ಲಿ ಅಜಯ್ ಮೂರನೇ ವ್ಯಕ್ತಿಯಾಗಿ ನಟಿಸಿದ್ದಾರೆ. ಅಲ್ಲಿ ಅವರು ನಾಯಕರಲ್ಲ. ಆದರೆ 'ಮೈದಾನ್' ಸಿನಿಮಾದಲ್ಲಿ ಅವರು ಸೋಲೊ ಹೀರೊ. ಆರ್‌ಆರ್‌ಆರ್‌ ಸಿನಿಮಾದಲ್ಲಿ ಇಬ್ಬರು ನಾಯಕರಿದ್ದಾರೆ. ಈಗಾಗಲೇ ದೊಡ್ಡ ಹಿಟ್ ನೀಡಿರುವ ರಾಜಮೌಳಿ ಆ ಸಿನಿಮಾ ನಿರ್ದೇಶಿಸಿದ್ದಾರೆ. ಆದರೂ ಅವರಿಗೆ ಹಬ್ಬದ ಸಮಯಕ್ಕೆ ಬಿಡುಗಡೆ ಮಾಡುವ ಅವಶ್ಯಕತೆ ಏನಿದೆ. ಅವರಿಗಿರುವ ಜನಪ್ರಿಯತೆಗೆ ಯಾವ ದಿನ ಬಿಡುಗಡೆ ಮಾಡಿದರೂ ಸಿನಿಮಾ ಓಡುತ್ತದೆ' ಎಂದಿದ್ದಾರೆ ಬೋನಿ ಕಪೂರ್.

ಅಕ್ಟೋಬರ್ 13 ರಂದು ಬಿಡುಗಡೆ

ಅಕ್ಟೋಬರ್ 13 ರಂದು ಬಿಡುಗಡೆ

ಆರ್‌ಆರ್‌ಆರ್‌ ಸಿನಿಮಾವು ಅಕ್ಟೋಬರ್ 13 ರಂದು ಬಿಡುಗಡೆ ಆಗಲಿದೆ. ಅಜಯ್ ದೇವಗನ್ ನಟನೆಯ 'ಮೈದಾನ್' ಸಹ ಅದೇ ದಿನ ಬಿಡುಗಡೆ ಆಗಲಿದೆ. ಅಕ್ಟೋಬರ್ 13 ರಿಂದ ಸತತವಾಗಿ ರಜೆಗಳಿದೆ ಹಾಗಾಗಿ ಬೋನಿ ಕಪೂರ್ ತಮಗೆ ಆ ದಿನವವನ್ನು ಬಿಟ್ಟುಕೊಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಬೋನಿ ಕಪೂರ್ ಮನವಿಗೆ ಆರ್‌ಆರ್‌ಆರ್ ತಂಡ ಒಪ್ಪುತ್ತಿಲ್ಲ.

Recommended Video

Chaithra Kotoor ನಾಗಾರ್ಜುನ‌ ನಡುವಿನ ಸಂಬಂಧದ ಬಗ್ಗೆ ಸಾಕ್ಷಿ ಹೇಳ್ತಿವೆ ಫೋಟೋಸ್ | Filmibeat Kannada
ಪುಟ್ಬಾಲ್ ಕೋಚ್ ಜೀವನ ಆಧರಿಸಿದ ಸಿನಿಮಾ

ಪುಟ್ಬಾಲ್ ಕೋಚ್ ಜೀವನ ಆಧರಿಸಿದ ಸಿನಿಮಾ

ಅಜಯ್ ದೇವಗನ್ ನಟನೆಯ 'ಮೈದಾನ್' ಸಿನಿಮಾವು ಫುಟ್ಬಾಲ್ ಕೋಚ್ ಸೈಯದ್ ಅದ್ಬುಲ್ ರಹೀಮ್ ಜೀವನ ಕುರಿತಾದದ್ದಾಗಿದೆ. ಸಿನಿಮಾವು 1952-62 ರ ನಡುವೆ ನಡೆವ ಕತೆಯಾಗಿದ್ದು, ಸಿನಿಮಾವನ್ನು ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆಗೆ ಕನ್ನಡತಿ ಪ್ರಿಯಾಮಣಿ, ಗಜರಾಜ ರಾವ್, ರುದ್ರನಿಲ್ ಘೋಷ್ ಇನ್ನೂ ಕೆಲವರು ನಟಿಸಿದ್ದಾರೆ.

More from Filmibeat

English summary
Producer Boney Kapoor said Ajay Devgan is gentleman so he is not talking about RRR team's unethical move.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X