For Quick Alerts
  ALLOW NOTIFICATIONS  
  For Daily Alerts

  ಇನ್ನು ಮುಂದೆ ಆ ರೀತಿಯ ಪಾತ್ರಗಳನ್ನು ಮಾಡಲ್ಲ

  By Rajendra
  |

  "ನಾನು ಅಭಿನಯಿಸುವ ಚಿತ್ರಗಳನ್ನು ಕುಟುಂಬ ಸಮೇತ ನೋಡುವಂತಿರಬೇಕು. 'ಎ' ಸರ್ಟಿಫಿಕೇಟ್ ಚಿತ್ರಗಳಲ್ಲಿ ಇನ್ನು ನಾನು ನಟಿಸಲ್ಲ. ಹಾಗಂತ ಖಡಕ್ ಆಗಿ ಹೇಳಿದ್ದಾರೆ ಬಾಲಿವುಡ್ ನಟ 'ಹಿಮ್ಮತ್ ವಾಲ' ಅಜಯ್ ದೇವಗನ್.

  ಅಜಯ್ ದೇವಗನ್ ಅಭಿನಯದ ತಾಜಾ ಚಿತ್ರ ಹಿಮ್ಮತ್ ವಾಲ. ತಮನ್ನಾ ಚಿತ್ರದ ನಾಯಕಿ. ಸಾಜಿದ್ ಖಾನ್ ನಿರ್ದೇಶನದ ಈ ಚಿತ್ರ ಇದೇ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಬಗ್ಗೆ ಅಜಯ್ ದೇವಗನ್ ಮಾತನಾಡುತ್ತಾ...

  "ಈ ಚಿತ್ರ ರೀಮೇಕ್ ಆದರೂ ಮೂಲ ಚಿತ್ರದಲ್ಲಿ ಇಂಜಿನಿಯರ್ ಪಾತ್ರಕ್ಕೆ ಬದಲಾಗಿ ಇಲ್ಲಿ ರೌಡಿ ಪಾತ್ರ ಪೋಷಿಸುತ್ತಿದ್ದೇನೆ. ಮೂಲ ಚಿತ್ರದಲ್ಲಿ ಜಿತೇಂದ್ರ ಹಾಕಿದ ಸ್ಟೆಪ್ಸ್ ಇಲ್ಲಿ ನಾನು ಹಾಕಿಲ್ಲ. ಆದರೆ ಮನರಂಜನೆಗೆ ಮೋಸವಿಲ್ಲದಂತೆ ಚಿತ್ರ ಮೂಡಿಬಂದಿದೆ" ಎಂದಿದ್ದಾರೆ ಅಜಯ್.

  ಮುಂದಿನ ದಿನಗಳಲ್ಲಿ ತಾನು ಅಭಿನಯಿಸುವ ಚಿತ್ರಗಳಲ್ಲಿ ಅಶ್ಲೀಲತೆ ಇಲ್ಲದಂತೆ ಜಾಗ್ರತೆ ವಹಿಸುತ್ತೇನೆ. ಇತ್ತೀಚೆಗೆ ಮನೆಯಲ್ಲಿ ತಮ್ಮ ತಂದೆಯವರ ಜೊತೆ ಕೂತು ಸಿನಿಮಾ ನೋಡುತ್ತಿದ್ದರೆ ಅವರು ಅರ್ಧದಲ್ಲೇ ಎದ್ದು ಹೊರಟು ಹೋದರು.

  ಯಾಕೆ ಹೀಗೆ ಮಾಡಿದಿರಿ ಎಂದು ಕೇಳಿದ್ದಕ್ಕೆ ಅವರು, "ಚಿತ್ರದಲ್ಲಿನ ನಾಯಕಿ ಡ್ರೆಸ್ ನೋಡಿದೆವಲ್ಲಾ. ನಾನು ಅಲ್ಲೇ ಇದ್ದರೆ ನಿಮಗೆಲ್ಲಾ ಇರುಸುಮುರುಸಾಗುತ್ತದೆ ಎಂದು ಎದ್ದು ಹೊರಬಂದೆ" ಎಂದರು.

  ಚಿತ್ರರಂಗದಲ್ಲಿ ಫೈಟ್ ಮಾಸ್ಟರ್ ಆಗಿ ಕೆಲಸ ಮಾಡಿರುವ ನಮ್ಮ ತಂದೆ ವೀರೂ ದೇವಗನ್ ಅವರಿಗೇ ಹೀಗಾಗಬೇಕಾದರೆ ಇನ್ನು ಸಾಮಾನ್ಯ ಪ್ರೇಕ್ಷಕನ ಪರಿಸ್ಥಿತಿ ಏನು. ಇನ್ನು ಮುಂದೆ ತಾವು ಸಕುಟುಂಬ ಸಪರಿವಾಲ ಸಮೇತ ನೋಡಬಹುದಾದ ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತೇವೆ ಎಂದಿದ್ದಾರೆ. ಸದ್ಯಕ್ಕೆ ಪ್ರಕಾಶ್ ಝಾ ನಿರ್ದೇಶಿಸುತ್ತಿರುವ 'ಸತ್ಯಾಗ್ರಹ್' ಚಿತ್ರದಲ್ಲಿ ಅಜಯ್ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)

  English summary
  Bollywood actor Ajay Devgan has decided not to do anything that you can’t watch with family. I don’t want to do any film, which has A-certificate”, the actor said. At present he is acting in Himmatwala.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X