For Quick Alerts
  ALLOW NOTIFICATIONS  
  For Daily Alerts

  'ಖೈದಿ' ರೀಮೇಕ್ನಲ್ಲಿ ಅಜಯ್ ದೇವಗನ್, ರಿಲೀಸ್ ದಿನಾಂಕ ಘೋಷಣೆ

  |

  2019ರ ತಮಿಳು ಸೂಪರ್ ಹಿಟ್ ಚಿತ್ರ ಖೈದಿ ಬಾಲಿವುಡ್ನಲ್ಲಿ ರೀಮೇಕ್ ಆಗಲಿದೆ ಎಂಬ ಸುದ್ದಿ ಈ ಹಿಂದೆ ವರದಿಯಾಗಿತ್ತು. ನಟ ಕಾರ್ತಿ ನಟಿಸಿದ್ದ ಈ ಚಿತ್ರ ಸೌತ್ ಇಂಡಸ್ಟ್ರಿಯಲ್ಲಿ ದೊಡ್ಡ ಹಿಟ್ ಆಗಿತ್ತು.

  ಈ ಚಿತ್ರದ ರೀಮೇಕ್ ನಲ್ಲಿ ಬಾಲಿವುಡ್ ಸ್ಟಾರ್ ನಟ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದೀಗ, ಅದು ಅಧಿಕೃತವಾಗಿದ್ದು ಅಜಯ್ ದೇವಗನ್ ಈ ಚಿತ್ರದ ಹಿಂದಿ ಅವತರಣಿಕೆಯಲ್ಲಿ ನಟಿಸಲಿದ್ದಾರೆ.

  ಸೂಪರ್ ಹಿಟ್ 'ಖೈದಿ' ಚಿತ್ರದ ಮೇಲೆ ಕಣ್ಣಿಟ್ಟ ಬಾಲಿವುಡ್ ನಟ!ಸೂಪರ್ ಹಿಟ್ 'ಖೈದಿ' ಚಿತ್ರದ ಮೇಲೆ ಕಣ್ಣಿಟ್ಟ ಬಾಲಿವುಡ್ ನಟ!

  ಈ ಸುದ್ದಿಯನ್ನು ಖೈದಿ ಚಿತ್ರದ ನಿರ್ಮಾಪಕ ಎಸ್ ಆರ್ ಪ್ರಭು ಖಚಿತಪಡಸಿದ್ದಾರೆ. ಈ ಸುದ್ದಿಗೆ ಅಜಯ್ ದೇವಗನ್ ಕೂಡ ಪ್ರತಿಕ್ರಿಯಿಸಿದ್ದು ''ಹೌದು, ಖೈದಿ ರೀಮೇಕ್ ನಲ್ಲಿ ನಾನು ನಟಿಸುತ್ತಿದ್ದೇನೆ'' ಎಂದು ಪಕ್ಕಾ ಮಾಡಿದ್ದಾರೆ.

  ಈ ಮೊದಲು ಹಿಂದಿಯಲ್ಲಿ ಖೈದಿ ರೀಮೇಕ್ ಚಿತ್ರಕ್ಕಾಗಿ ಮತ್ತಿಬ್ಬರು ಸ್ಟಾರ್ ನಟರ ಹೆಸರು ಚರ್ಚೆಯಾಗಿತ್ತು. ಬಹುಶಃ ಸಲ್ಮಾನ್ ಖಾನ್ ಅಥವಾ ಹೃತಿಕ್ ರೋಷನ್ ಈ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೀಗ, ಅಜಯ್ ದೇವಗನ್ ಎಂಟ್ರಿಯಾಗಿರುವುದು ಸರ್ಪ್ರೈಸ್ ಆಗಿದೆ.

  ಇನ್ನುಳಿದಂತೆ ಮೂಲ ಚಿತ್ರವನ್ನು ನಿರ್ದೇಶನ ಮಾಡಿದ್ದ ಲೋಕೇಶ್ ಕನಕರಾಜ್ ಅವರೇ ಹಿಂದಿಯಲ್ಲೂ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ನಾಯಕನ ಘೋಷಣೆ ಮಾಡಿದ ಜೊತೆಯಲ್ಲಿ ರಿಲೀಸ್ ದಿನಾಂಕವನ್ನು ಕೂಡ ಅನೌನ್ಸ್ ಮಾಡಿದ್ದಾರೆ. ಖೈದಿ ರೀಮೇಕ್ ಸಿನಿಮಾ ಫೆಬ್ರವರಿ 12, 2021ರಲ್ಲಿ ತೆರೆಗೆ ಬರಲಿದೆ.

  English summary
  2019 supr hit movie kaithi set to remade in bollywood. Ajay Devgan playing lead role in remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X