For Quick Alerts
  ALLOW NOTIFICATIONS  
  For Daily Alerts

  20 ವರ್ಷಗಳ ನಂತರ ಈ ನಟನಿಗೆ ಬನ್ಸಾಲಿ ಡೈರೆಕ್ಷನ್

  |

  ಸಂಜಯ್ ಲೀಲಾ ಬನ್ಸಾಲಿ ಕೆಲವೊಂದು ನಟ ನಟಿಯರ ಜೊತೆಗೆ ಹೆಚ್ಚು ಸಿನಿಮಾ ಮಾಡಿದ್ದಾರೆ. ಒಮ್ಮೆ ಹಿಟ್ ಆದ ಜೋಡಿಯ ಜೊತೆಗೆ ಮತ್ತೊಂದು ಸಿನಿಮಾ ಮಾಡುವುದು ಬನ್ಸಾಲಿ ರೂಡಿ. ಇದೀಗ 20 ವರ್ಷಗಳ ನಂತರ ಒಬ್ಬ ನಟನ ಜೊತೆಗೆ ಮತ್ತೆ ಬನ್ಸಾಲಿ ಸಿನಿಮಾ ಮಾಡುತ್ತಿದ್ದಾರೆ.

  ನಟ ಅಜಯ್ ದೇವಗನ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಗಂಗೂಬಾಯಿ ಕಥಿಯಾವಾಡಿ' ಚಿತ್ರತಂಡವನ್ನು ಅಜಯ್ ದೇವಗನ್ ಸೇರಿಕೊಂಡಿದ್ದಾರೆ. ಆಲಿಯಾ ಭಟ್ ಸಿನಿಮಾದ ನಾಯಕಿಯಾಗಿದ್ದಾರೆ.

  ಬನ್ಸಾಲಿ ಚಿತ್ರದಿಂದ ಸಲ್ಮಾನ್ ಹೊರಬರಲು ಆಲಿಯಾ ಜೊತೆಗಿನ 'ಆ ಸೀನ್' ಕಾರಣ.!ಬನ್ಸಾಲಿ ಚಿತ್ರದಿಂದ ಸಲ್ಮಾನ್ ಹೊರಬರಲು ಆಲಿಯಾ ಜೊತೆಗಿನ 'ಆ ಸೀನ್' ಕಾರಣ.!

  20 ವರ್ಷಗಳ ಹಿಂದೆ 'ಹಮ್ ದಿಲ್ ದೇ ಚುಕೆ ಸನಮ್' ಸಿನಿಮಾದಲ್ಲಿ ಸಂಜಯ್ ಲೀಲಾ ಬನ್ಸಾಲಿ ಹಾಗೂ ಅಜಯ್ ದೇವಗನ್ ಒಂದಾಗಿದ್ದರು. ಆ ಸಿನಿಮಾದ ಬಳಿಕ 'ಗಂಗೂಬಾಯಿ ಕಥಿಯಾವಾಡಿ' ಮೂಲಕ ಈ ಜೋಡಿ ಮತ್ತೆ ಒಂದಾಗಿದೆ. ಬನ್ಸಾಲಿ ಕಥೆ ಕೇಳಿದ್ದು, ಸಿನಿಮಾದ ಪಾತ್ರ ಅಜಯ್ ದೇವಗನ್ ರಿಗೆ ಬಹಳ ಇಷ್ಟ ಆಗಿದೆಯಂತೆ.

  ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಜೋಡಿ ಜೊತೆಗೆ ಹ್ಯಾಟ್ರಿಕ್ ಹಿಟ್ ನೀಡಿದ ಬನ್ಸಾಲಿ ಇದೀಗ ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಜೊತಗೆ ಕೆಲಸ ಮಾಡುತ್ತಿದ್ದಾರೆ. ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. 'ಗಂಗೂಬಾಯಿ ಕಥಿಯಾವಾಡಿ' ಲೈಂಗಿಕ ಕಾರ್ಯಕರ್ತೆ ಆಗಿದ್ದು, ನಂತರ ಮುಂಬೈ ಅಂಡಲ್ ವರ್ಲ್ಡ್ ಡಾನ್ ಆಗಿದ್ದಳು.

  ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಸಲ್ಮಾನ್ ಗೆ ಆಲಿಯಾ ನಾಯಕಿಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಸಲ್ಮಾನ್ ಗೆ ಆಲಿಯಾ ನಾಯಕಿ

  ಅಂದಹಾಗೆ, ಸಂಜಯ್ ಲೀಲಾ ಬನ್ಸಾಲಿ ತಮ್ಮ ಹೊಸ ಸಿನಿಮಾದ ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಣೆ ಮಾಡಿದ್ದಾರೆ. ಸಿನಿಮಾ ಸಪ್ಟೆಂಬರ್ 11, 2020 ರಂದು ಬಿಡುಗಡೆಯಾಗಲಿದೆ.

  English summary
  Actor Ajay Devgan to star in Sanjay Leela Bhansali's Gangubai Kathiawadi movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X